Toll rate Increase: ಪ್ರಯಾಣಿಕರಿಗೆ ಟೋಲ್ ಶಾಕ್: ನಾಳೆಯಿಂದ ಹೆಜಮಾಡಿ ಟೋಲ್‌ ದರ ಹೆಚ್ಚಳ

ಮಂಗಳೂರು: (Toll rate Increase) ಸುರತ್ಕಲ್‌ ಟೋಲ್ ಗೇಟ್‌ ರದ್ದು ಮಾಡುವ ಬದಲು ಅದನ್ನು ಹೆಜಮಾಡಿಯಲ್ಲಿರುವ ಟೋಲ್‌ ನಲ್ಲಿ ವಿಲೀನಗೊಳಿಸಲಾಗಿದೆ. ಜೊತೆಗೆ ಸುರತ್ಕಲ್‌ ಟೋಲ್‌ ನಲ್ಲಿ ಸಂಗ್ರಹಿಸುತ್ತಿದ್ದ ಪೂರ್ತಿ ಶುಲ್ಕವನ್ನು ಹೆಜಮಾಡಿ ಟೋಲ್‌ ನಲ್ಲಿ ಸಂಗ್ರಹಿಸಲಾಗುತ್ತಿದ್ದು, ಇದೀಗ ನಾಳೆಯಿಂದ ಟೋಲ್‌ ದರ ಹೆಚ್ಚಳವಾಗಿದೆ.

ಟೋಲ್ ವಿಲೀನ ಕುರಿತು ಹೆದ್ದಾರಿ ಪ್ರಾಧಿಕಾರ ಜಿಲ್ಲಾಡಿಳತಕ್ಕೆ ಪತ್ರ ಬರೆದಿದ್ದು, ಡಿಸೆಂಬರ್‌ ಒಂದರಿಂದ ಅನ್ವಯವಾಗುವಂತೆ ಸುರತ್ಕಲ್‌ ಟೋಲ್‌ ವಿಲೀನಗೊಳಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಈಗಾಗಲೇ ಆದೇಶ ಹೊರಡಿಸಿತ್ತು. ನಂತರದಲ್ಲಿ ಹೆಜಮಾಡಿಯಲ್ಲಿ ಟೋಲ್‌ ದರ ಏರಿಕೆ ಇಲ್ಲ ಎಂಬುದಾಗಿ ಆದೇಶ ಹೊರಡಿಸಲಾಗಿತ್ತು. ಇದಕ್ಕೆ ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಇದೀಗ ಮತ್ತೆ ಹೆಜಮಾಡಿಯಲ್ಲಿ ಟೋಲ್‌ ದರ (Toll rate Increase) ಹೆಚ್ಚಳವಾಗಿದ್ದು. ಪರಿಷ್ಕೃತ ಶುಲ್ಕ ದರಗಳ ಸಾರ್ವಜನಿಕ ಪ್ರಕಟಣೆಯನ್ನು ಬಿಡುಗಡೆ ಮಾಡಲಾಗಿದೆ.

ಟೋಲ್‌ ಬಳಕೆದಾರರ ಪರಿಷ್ಕೃತ ಶುಲ್ಕ ದರಗಳ ಅನುಮೋದನೆಗೆ ಅನುಗುಣವಾಗಿ ದಿನಾಂಕ 04-12-2022 ರಿಂದ ಟೋಲ್‌ ಗಳಲ್ಲಿ ಹೆಚ್ಚಿಗೆ ದರವನ್ನು ಸಂಗ್ರಹಣೆ ಮಾಡಲಾಗುವುದು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸುತ್ತೋಲೆ ಹೊರಡಿಸಿದ ಟೋಲ್‌ ಸಂಗ್ರಹಣೆಯ ಶುಲ್ಕದ ಪರಿಷ್ಕೃತ ದರ ಪಟ್ಟಿ ಈ ಕೇಳಗಿನಂತಿವೆ.

*ಕಾರು, ಜೀಪು ವ್ಯಾನ್‌ ಸಹಿತ ಲಘು ವಾಹನ : ಏಕಮುಖ ಸಂಚಾರಕ್ಕೆ 100 ರೂ. ಶುಲ್ಕ
ಅದೇ ದಿನ ಮರಳಿ ಬಂದರೆ 155 ರೂ. ಶುಲ್ಕ
ಪಾವತಿ ದಿನಾಂಕದಿಂದ ಒಂದು ತಿಂಗಳಲ್ಲಿ ಐವತ್ತು ಬಾರಿ ಬಂದರೆ ಮಾಸಿಕ ಶುಲ್ಕ 3460 ರೂ.

*ಲೈಟ್‌ ಕಮರ್ಷಿಯಲ್‌ ವಾಹನ, ಲೈಟ್‌ ಗೂಡ್ಸ್‌ ವಾಹನ/ಮಿನಿ ಬಸ್:‌ ಏಕಮುಖ ಸಂಚಾರಕ್ಕೆ 170 ರೂ.
ಅದೇ ದಿನ ಮರಳಿ ಬಂದರೆ 250 ರೂ. ಶುಲ್ಕ
ಪಾವತಿ ದಿನಾಂಕದಿಂದ ಒಂದು ತಿಂಗಳಲ್ಲಿ ಐವತ್ತು ಬಾರಿ ಬಂದರೆ ಮಾಸಿಕ ಶುಲ್ಕ 5590 ರೂ.

*ಬಸ್‌ ಅಥವಾ ಟ್ರಕ್:‌ ಏಕಮುಖ ಸಂಚಾರಕ್ಕೆ 355 ರೂ. ಶುಲ್ಕ
ಅದೇ ದಿನ ಮರಳಿ ಬಂದರೆ 325 ರೂ. ಶುಲ್ಕ
ಪಾವತಿ ದಿನಾಂಕದಿಂದ ಒಂದು ತಿಂಗಳಲ್ಲಿ ಐವತ್ತು ಬಾರಿ ಬಂದರೆ ಮಾಸಿಕ ಶುಲ್ಕ 11705 ರೂ.

*ಭಾರೀ ನಿರ್ಮಾಣ ಯಂತ್ರೋಪಕರಣ, ಬೃಹತ್‌ ಉಪಕರಣ ಮತ್ತು ಮಲ್ಟಿ ಆಕ್ಟಿವ್‌ ವಾಹನಗಳು: ಏಕಮುಖ ಸಂಚಾರಕ್ಕೆ 550 ರೂ. ಶುಲ್ಕ
ಅದೇ ದಿನ ಮರಳಿ ಬಂದರೆ 825 ರೂ. ಶುಲ್ಕ
ಪಾವತಿ ದಿನಾಂಕದಿಂದ ಒಂದು ತಿಂಗಳಲ್ಲಿ ಐವತ್ತು ಬಾರಿ ಬಂದರೆ ಮಾಸಿಕ ಶುಲ್ಕ 18360 ರೂ. ಶುಲ್ಕ

*ಅತಿ ಗಾತ್ರದ ವಾಹನಗಳು: ಏಕಮುಖ ಸಂಚಾರಕ್ಕೆ 675 ರೂ. ಶುಲ್ಕ
ಅದೇ ದಿನ ಮರಳಿ ಬಂದರೆ 1005 ರೂ. ಶುಲ್ಕ
ಪಾವತಿ ದಿನಾಂಕದಿಂದ ಒಂದು ತಿಂಗಳಲ್ಲಿ ಐವತ್ತು ಬಾರಿ ಬಂದರೆ ಮಾಸಿಕ ಶುಲ್ಕ 22350 ರೂ.

2022-23ನೇ ಸಾಲಿನ ಅವಧಿಗೆ ಇಲ್ಲಿನ ಟೋಲ್‌ ಪ್ಲಾಜಾದಲ್ಲಿ ಇಪ್ಪತ್ತು ಕಿ. ಮೀ. ಅಂತರದಲ್ಲಿ ವಾಸಿಸುವವರ ಸ್ಥಳೀಯ ವಾಣಿಜ್ಯೇತರ ವಾಹನಗಳಿಗೆ ಅನ್ವಯವಾಗುವಂತೆ ಮಾಸಿಕ ವೇತನ ದರ ರೂ 315.00 ಆಗಿರಲಿದೆ. ಮೇಲೆ ನೀಡಲಾದ ಟೋಲ್‌ ಪ್ಲಾಜಾದ ರಿಯಾಯಿತಿ ದರಗಳು ಈ ಕೆಳಗಿನಂತಿವೆ

*ಏಕಮುಖ ಸಂಚಾರಕ್ಕೆ ಪಾವತಿಸಬೇಕಾದ ಮೊತ್ತದ ಒಂದೂವರೆ ಪಟ್ಟು
ಒನ್‌ ವೇ ಪ್ರಯಾಣದ ಅನುಮತಿ ಗರಿಷ್ಠ ಸಂಖ್ಯೆ: ಎರಡು
ವಾಯಿದೆಯ ಅವಧಿ: ಶುಲ್ಕ ಪಾವತಿಯಾದ ಅವಧಿಯಿಂದ ಇಪ್ಪತ್ತನಾಲ್ಕು ಗಂಟೆ

*ಐವತ್ತು ಅಥವಾ ಹೆಚ್ಚಿನ ಏಕಮುಖ ಸಂಚಾರಕ್ಕೆ ಶುಲ್ಕ ಮೊತ್ತದ 2/3 ಪಟ್ಟು
ಒನ್‌ ವೇ ಪ್ರಯಾಣದ ಅನುಮತಿ ಗರಿಷ್ಠ ಸಂಖ್ಯೆ: ಐವತ್ತು ಅಥವಾ ಹೆಚ್ಚು
ವಾಯಿದೆಯ ಅವಧಿ: ಶುಲ್ಕ ಪಾವತಿಯಾದ ದಿನಾಂಕದಿಂದ ಒಂದು ತಿಂಗಳು

ಇದನ್ನೂ ಓದಿ : ಸುರತ್ಕಲ್ ಟೋಲ್ ರದ್ದು, ಹೆಜಮಾಡಿಯಲ್ಲಿ ಟೋಲ್ ದರ ಏರಿಕೆ ಇಲ್ಲ : ಹೋರಾಟಗಾರರ ಸಂಭ್ರಮಾಚರಣೆ

ಇಲ್ಲಿ ಪ್ರಕಟಿಸಲಾದ ಶುಲ್ಕ ಅಧಿಸೂಚನೆ ದಿನಾಂಕ 12-03-2013 ರಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪತ್ರ ದಿನಾಂಕ 18-11-2022 ರ ದರಗಳು ಮತ್ತು ನಿಬಂಧನೆ ಹೊಂದಿರುವ ರಿಯಾಯಿತಿ ಒಪ್ಪಂದ ವೀಕ್ಷಣೆಗಾಗಿ ವೆಬ್‌ ಸೈಟ್‌ http;//nhaltis.org ನ್ನು ಬೇಟಿ ನೀಡಬಹುದು.

(Toll rate Increase) Instead of canceling the Suratkal toll gate, it has been merged with the toll at Hejmadi. Besides, the entire toll collected at Suratkal toll is being collected at Hezmadi toll, and now the toll rate has increased from tomorrow.

Comments are closed.