ಕೋಟ : ಕಾಲೇಜುಗಳಲ್ಲಿ ರಾಗಿಂಗ್ (ragging) ವಿರುದ್ದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಕೂಡ ಉಡುಪಿ ಜಿಲ್ಲೆಯ ಕೋಟ ಸಮೀಪದ ಅಚ್ಲಾಡಿಯಲ್ಲಿರುವ ಈಸಿಆರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡಿ ಕಾಲೇಜಿನಲ್ಲಿ (ECR College ) ಕೇರಳ ಮೂಲದ ವಿದ್ಯಾರ್ಥಿಗಳು ಜ್ಯೂನಿಯರ್ ವಿದ್ಯಾರ್ಥಿಯೋರ್ವನ ಮೇಲೆ ರಾಗಿಂಗ್ ನಡೆಸಿರುವ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವಿದ್ಯಾರ್ಥಿಗಳನ್ನು (Two students arrested) ಪೊಲೀಸರು ಬಂಧಿಸಿದ್ದಾರೆ.
ಕಾಲೇಜಿನ ವಿದ್ಯಾರ್ಥಿಯಾಗಿರುವ ದುರ್ಗಾದಾಸ್ ಎಂಬಾತನ ಮೇಲೆ ಸಹಪಾಠಿಗಳಾದ ದಿಲ್ಶಾದ್ ಹಾಗೂ ಶಿಂಡೋ ಎಂಬ ವಿದ್ಯಾರ್ಥಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಹಲ್ಲೆಗೆ ಒಳಗಾಗಿರುವ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಅಲ್ಲದೇ ಆರೋಪಿಗಳಾದ ದಿಲ್ಶಾದ್ ಹಾಗೂ ಶಿಂಡೋವನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ : ಮೀಸೆ, ತಲೆಕೂದಲೆ ಬೋಳಿಸುವಂತೆ ರಾಗಿಂಗ್ : ಮಂಗಳೂರಲ್ಲಿ 9 ವಿದ್ಯಾರ್ಥಿಗಳು ಅರೆಸ್ಟ್
ವಿದ್ಯಾರ್ಥಿ ದುರ್ಗಾದಾಸ್ ಮೇಲೆ ನಡೆದಿರುವ ಹಲ್ಲೆಯ ಹಿಂದೆ ರಾಗಿಂಗ್ ಆರೋಪ ಕೇಳಿಬಂದಿದೆ. ಕಾಲೇಜಿನಲ್ಲಿ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿರುವ ಕುರಿತು ಸ್ಥಳೀಯರು ಆರೋಪಿಸಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಕುಂದಾಪುರ ಠಾಣೆಯ ಪೊಲೀಸರು ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ. ಮಂಗಳೂರಿನ ಕಾಲೇಜುಗಳಲ್ಲಿ ಕಳೆದ ಒಂದು ತಿಂಗಳ ಹಿಂದೆಯಷ್ಟೇ ರಾಗಿಂಗ್ ನಡೆದಿತ್ತು. ಇಲ್ಲಿಯೂ ಕೇರಳ ವಿದ್ಯಾರ್ಥಿಗಳೇ ಬಂಧನಕ್ಕೆ ಒಳಗಾಗಿದ್ದರು. ಇದೀಗ ಉಡುಪಿ ಜಿಲ್ಲೆಗೂ ರಾಗಿಂಗ್ ಭೂತ ಕಾಲಿರಿಸಿದ್ದು, ಈ ಕುರಿತು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ : ಓಣಂ ಹೆಸರಲ್ಲಿ ಕೊರೊನಾ ರೂಲ್ಸ್ ಬ್ರೇಕ್ : ಉಡುಪಿ ಜಿಲ್ಲಾಡಳಿತ ವಿರುದ್ದ ಆಕ್ರೋಶ : ಹಳೆಯ, ಹೊಸ ವಿಡಿಯೋ ವೈರಲ್
ಇದನ್ನೂ ಓದಿ : ಮಂಗಳೂರಲ್ಲಿ ಮತ್ತೆ ರಾಗಿಂಗ್ ಭೂತ : 11 ಮಂದಿ ಕಾಲೇಜು ವಿದ್ಯಾರ್ಥಿಗಳು ಅರೆಸ್ಟ್
(Two students arrested for ragging, fatal assault on student at ECR College near Kota)