Namma clinic : ಬೆಂಗಳೂರಲ್ಲಿ ಬಾಗಿಲು ತೆರೆಯಲಿದೆ ನಮ್ಮ ಕ್ಲಿನಿಕ್

ಬೆಂಗಳೂರು : ಕರೋನಾ ಬಳಿಕ ಜನರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಿದೆ. ಹೀಗಾಗಿ ಸರ್ಕಾರವೂ ಜನರಿಗೆ ಸೂಕ್ತವಾದ ಆರೋಗ್ಯಸೇವೆ ಒದಗಿಸಲು ಮುಂದಾಗಿದ್ದು, ಇದರ ಪರಿಣಾಮವಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ನಮ್ಮ ಕ್ಲಿನಿಕ್ ತಲೆ ಎತ್ತಲಿದೆ. ಇತ್ತೀಚಿಗೆ ಸಿಎಂ ಬಸವರಾಜ್ ಬೊಮ್ಮಾಯಿ ಮಂಡಿಸಿದ್ದ ಬಜೆಟ್ ನಲ್ಲಿ ನಮ್ಮ ಕ್ಲಿನಿಕ್ ( Namma clinic ) ಎಂಬ ಮಹತ್ವದ ಯೋಜನೆ ಘೋಷಿಸಿದ್ದಾರೆ. ಬಿಬಿಎಂಪಿ ಉಸ್ತುವಾರಿಯಲ್ಲಿ ನಡೆಯಲಿರುವ ಈ ಕ್ಲಿನಿಕ್ ಸದ್ಯಕ್ಕೆ ನಗರದ 198 ವಾರ್ಡ್ ಗಳಲ್ಲೂ ಸ್ಥಾಪನೆಯಾಗಲಿದೆ.

ಈಗಾಗಲೇ ಬಿಬಿಎಂಪಿ (BBMP) ವ್ಯಾಪ್ತಿಯ 198 ವಾರ್ಡ್ ಗಳ ಪೈಕಿ 161 ವಾರ್ಡ್ ಗಳಲ್ಲಿ PHC ಕೇಂದ್ರಗಳಿವೆ. ಕೊರೋನಾಗೂ ಮೊದಲು 141 ವಾರ್ಡ್ ಗಳಲ್ಲಿ 141 PHC ಕೇಂದ್ರಗಳಿದ್ದವು. ಕೊರೋನಾ ಕಾಲದಲ್ಲಿ 20 ವಾರ್ಡ್ ಗಳಲ್ಲಿ ಹೊಸ 20 PHC ತೆರೆಯಲಾಗಿತ್ತು. ಹೀಗಾಗಿ ಸದ್ಯ ನಗರದಲ್ಲಿ 161 ವಾರ್ಡ್ ಗಳಲ್ಲಿ 161 PHC ಕೇಂದ್ರಗಳು ಕಾರ್ಯಾಚರಣೆ ಯಲ್ಲಿದೆ. ಇದನ್ನು ಹೊರತು ಪಡಿಸಿನಗರದ ಉಳಿದ ಏರಿಯಾಗಳಲ್ಲಿ ಒಟ್ಟು 243 ನಮ್ಮ ಕ್ಲಿನಿಕ್ (Namma clinic ) ಗಳನ್ನು ಸ್ಥಾಪಿಸಲು ಬಿಬಿಎಂಪಿ ಹಾಗೂ ಸರ್ಕಾರ ಚಿಂತನೆ ನಡೆಸಿದೆ. ಈಗಾಗಲೇ 160 ವಾರ್ಡ್ ಗಳಲ್ಲಿ ನಮ್ಮ ಕ್ಲಿನಿಕ್ ಸ್ಥಾಪನೆಗೆ ಬಿಬಿಎಂಪಿ ಜಾಗ ಸಹ ಗುರುತು ಮಾಡಿದೆ.

ನಮ್ಮ ಕ್ಲಿನಿಕ್ (Namma clinic ) ಸ್ಥಾಪನೆ ಹಿಂದಿರುವ ಉದ್ದೇಶವೇನು ಎಂಬುದನ್ನು ಗಮನಿಸೋದಾದರೇ, ಸ್ಲಂ ಏರಿಯಾಗಳಲ್ಲಿನ ಜನರಿಗೆ ಉತ್ತಮ ಗುಣಮಟ್ಟದ ವೈದ್ಯಕೀಯ ಸವಲತ್ತು ಒದಗಿಸುವುದು. ಸರ್ಕಾರ ಆರಂಭಿಸಲಿರುವ ಈ ನಮ್ಮ ಕ್ಲಿನಿಕ್ ನಲ್ಲಿ ದಿನದ 24 ಗಂಟೆಗಳ ಕಾಲವೂ ಆರೋಗ್ಯ ಸೇವೆ ಲಭ್ಯವಾಗಲಿದೆ. ಅಲ್ಲದೇ 4 ಸಿಬ್ಬಂದಿಗಳನ್ನು ಒಳಗೊಂಡ ವ್ಯವಸ್ಥೆ ಮೂರು ಶಿಫ್ಟ್ ನಲ್ಲಿ ಸೇವೆ ಸಲ್ಲಿಸಲಿದೆ. MBBS ವೈದ್ಯೆ, ಸ್ಟಾಫ್ ನರ್ಸ್, ಅರೆಕಾಲಿಕೆ ವೈದ್ಯೆ, ಡಿ ಗ್ರೂಪ್ ಸಿಬ್ಬಂದಿಯ ನಿಯೋಜಿಸಲು ಸರ್ಕಾರ ಚಿಂತನೆ ನಡೆಸಿದೆ.

ಈಗಾಗಲೇ ನಗರದಲ್ಲಿರುವ ಪ್ರಾಥಮಿಕ‌ ಆರೋಗ್ಯ ಕೇಂದ್ರಗಳಿಂದ ಜನರು ವಿಮುಖರಾಗುತ್ತಿದ್ದಾರೆ. ಹೀಗಾಗಿ PHC ಕೇಂದ್ರಗಳ ಗುಣಮಟ್ಟ ಹೆಚ್ಚಿಸುವ ಸಲುವಾಗಿ ನಮ್ಮ ಕ್ಲಿನಿಕ್ ಓಪನ್ ಮಾಡಲಾಗಿದ್ದು, ನಮ್ಮ ಕ್ಲಿನಿಕ್‌ಗೆ (Namma clinic ) ಬರುವ ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗೆ PHC ಅಥವಾ ಇತರೆ ಪಾಲಿಕೆ ವ್ಯಾಪ್ತಿಯ ಆಸ್ಪತ್ರೆಗೆ ರೆಫರ್ ಮಾಡಲು ಸಿಬ್ಬಂದಿಗೆ ಸೂಚಿಸಲಾಗಿದೆ. ಈ ಯೋಜನೆಯಿಂದ ಬಡ ಮತ್ತು ಮಧ್ಯಮವರ್ಗದ ಜನರು ಖಾಸಗಿ ಆಸ್ಪತ್ರೆಯಲ್ಲಿ ದುಬಾರಿ ಹಣ ಕೊಟ್ಟು ಚಿಕಿತ್ಸೆ ಪಡೆಯುವುದು ತಪ್ಪಲಿದೆ ಅನ್ನೋದು ಸರ್ಕಾರದ ಚಿಂತನೆ.

ಇದನ್ನೂ ಓದಿ : ಬಿಬಿಎಂಪಿ ಬ್ರಹ್ಮಾಂಡ ಭ್ರಷ್ಟಾಚಾರ : ಎಬಿಬಿ ದಾಳಿಯಿಂದ ಬಯಲಾಯ್ತು ಮಾಲ್‌, ಕಂಪೆನಿಗಳ ತೆರಿಗೆ ಕಳ್ಳಾಟ

ಇದನ್ನೂ ಓದಿ : BWSSB Warning : ಬೇಸಿಗೆ ಆರಂಭದಲ್ಲೇ ಬೆಂಗಳೂರಿಗರಿಗೆ ಶಾಕ್ ನೀಡಿದ ಜಲಮಂಡಳಿ

( Namma clinic is to start in Bangalore)

Comments are closed.