ಉಡುಪಿ : ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಮೂವರು ವಿದ್ಯಾರ್ಥಿಗಳನ್ನು ಬಲಿ ಪಡೆದಿದ್ದ, ಸೈಂಟ್ ಮೇರಿಸ್ ದ್ವೀಪ (St. Mary’s Islands ) ಇದೀಗ ಮತ್ತಿಬ್ಬರು ವಿದ್ಯಾರ್ಥಿಗಳನ್ನು ಬಲಿ ಪಡೆದಿದೆ. ಸೆಲ್ಪಿ (Selfy Death) ತೆಗೆಯುವ ವೇಳೆಯಲ್ಲಿ ನಡೆದ ಇಬ್ಬರು ಕಾಲು ಜಾರಿ ಬಿದ್ದು ನೀರು ಪಾಲಾಗಿದ್ದಾರೆ. ಓರ್ವ ವಿದ್ಯಾರ್ಥಿಯ ಮೃತ ದೇಹ ಪತ್ತೆಯಾಗಿದ್ದು, ಮತ್ತೋರ್ವ ನಾಪತ್ತೆಯಾಗಿದ್ದಾನೆ.

ಬೆಂಗಳೂರಿನ ಜಿಕೆವಿಕೆ ಕೃಷಿ ಕಾಲೇಜಿನ ಬಾಗಲಕೋಟೆ ಮೂಲದ ಸತೀಶ್ ಎಸ್ ಕಲ್ಯಾಣ್ ಶೆಟ್ಟಿ (21 ವರ್ಷ ) ಮತ್ತು ಹಾವೇರಿಯ ಸತೀಶ್ ಎಂ. ನಂದಿಹಳ್ಳಿ (21 ವರ್ಷ) ಎಂಬವರೇ ಮೃತ ವಿದ್ಯಾರ್ಥಿಗಳಾಗಿದ್ದಾರೆ. ಬೆಂಗಳೂರಿನ ಜಿಕೆವಿಕೆ ಕೃಷಿ ಕಾಲೇಜಿನ ಸುಮಾರು 68 ವಿದ್ಯಾರ್ಥಿಗಳು ಮಲ್ಪೆ ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸ ಬಂದಿದ್ದರು. ಲೈಫ್ ಗಾರ್ಡ್ ಗಳ ಸೂಚನೆಯನ್ನು ಧಿಕ್ಕರಿಸಿ ಸೆಲ್ಫಿ ತೆಗೆಯಲು ತೆರಳಿದ್ದಾರೆ. ಈ ವೇಳೆಯಲ್ಲಿ ಸಮುದ್ರದ ದೈತ್ಯ ಅಲೆಯ ರಭಸಕ್ಕೆ ಮೂವರು ವಿದ್ಯಾರ್ಥಿಗಳು ಕೊಚ್ಚಿ ಹೋಗಿದ್ದಾರೆ. ಸದ್ಯ ಒಬ್ಬ ವಿದ್ಯಾರ್ಥಿಯ ಶವ ಪತ್ತೆಯಾಗಿದ್ದು ಇನ್ನೋರ್ವ ವಿದ್ಯಾರ್ಥಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಈ ಕುರಿತು ಮಲ್ಪೆ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರರಕಣ ದಾಖಲಾಗಿದೆ.

ಕೇರಳದ ವಿದ್ಯಾರ್ಥಿಗಳನ್ನೂ ಬಲಿ ಪಡೆದಿತ್ತು ಸೈಂಟ್ ಮೇರಿಸ್ (St. Mary’s Islands )
ಕಳೆದ ಹತ್ತು ದಿನಗಳ ಹಿಂದೆಯಷ್ಟೇ ಉಡುಪಿಯ ಮಲ್ಪೆ ಸಮೀಪದ ಸೈಂಟ್ ಮೇರಿಸ್ ದ್ವೀಪದಲ್ಲಿ ಈಜಾಡಲು ಹೋಗಿದ್ದ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು. ಕೇರಳದ ಕೊಟ್ಟಾಯಂನ ಮಂಗಳಂ ಇಂಜಿನಿಯರಿಂಗ್ ಕಾಲೇಜಿನ 80 ಮಂದಿ ವಿದ್ಯಾರ್ಥಿಗಳು ಉಡುಪಿಗೆ ಪ್ರವಾಸಕ್ಕೆಂದು ಆಗಮಿಸಿದ್ದರು, ಇವರಲ್ಲಿ ವಿದ್ಯಾರ್ಥಿಗಳು ಅಲೆನ್ ರೆಜಿ, ಅನಿಲ್, ಅಮುಲ್ ಎಂಬವರು ನೀರಿನಲ್ಲಿ ಮುಳುಗಿದ್ದಾರೆ. ಇವರನ್ನು ರಕ್ಷಿಸಿ ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೂ ಸಹ ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು.

ಅಪಾಯಕಾರಿ ಸೈಂಟ್ ಮೇರಿಸ್ ದ್ವೀಪ (St. Mary’s Islands )
ಸೈಂಟ್ ಮೇರಿಸ್ ದ್ವೀಪದ ದಕ್ಷಿಣ ಭಾಗದ ಸಮುದ್ರ ಅತ್ಯಂತ ಅಪಾಯಕಾರಿ. ಇಲ್ಲಿಗೆ ಬರುವ ಪ್ರಯಾಸಿಗರು ಈ ಭಾಗದಲ್ಲಿ ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿತ ಹಾಗೂ ರಕ್ಷಣಾ ತಂಡಗಳು ಮುನ್ನೆಚ್ಚರಿಕೆಯನ್ನು ನೀಡುತ್ತಿವೆ. ಆದರೂ ಕೂಡ ಪ್ರವಾಸಿಗರು ಈಜಾಡುವುದು, ಸೆಲ್ಪಿ ಹುಚ್ಚಿಗೆ ಬಲಿಯಾಗುತ್ತಲೇ ಇದ್ದಾರೆ.
ಇದನ್ನೂ ಓದಿ : ಹರ್ಷ ಕೊಲೆ ಬೆನ್ನಲ್ಲೇ ಶಿವಮೊಗ್ಗದಲ್ಲಿ ಮುಸ್ಲಿಂ ಯುವಕನ ಕೊಲೆಗೆ ಸ್ಕೆಚ್..!
ಇದನ್ನೂ ಓದಿ : Groom Arrest : ತಾಳಿ ಕಟ್ಟುವ ವೇಳೆಯಲ್ಲೇ ಅತ್ಯಾಚಾರ ಕೇಸ್‌ನಲ್ಲಿ ವರ ಅರೆಸ್ಟ್
Two students Death on the island of St. Mary’s Islands