ಉಡುಪಿ : ಕರಾವಳಿ ಜನರ ಆತಂಕಕ್ಕೆ ಕಾರಣವಾಗಿದ್ದ ಉಡುಪಿಯ (udupi News) ನೇಜಾರಿನಲ್ಲಿ (Nejaru Murder Case)ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಬೇಧಿಸುವಲ್ಲಿ ಉಡುಪಿ ಪೊಲೀಸರು ಯಶಸ್ವಿ ಆಗಿದ್ದಾರೆ. ಬೆಳಗಾವಿಯಲ್ಲಿ ಆರೋಪಿಯನ್ನು ಬಂಧಿಸಿದ್ದು, ಕೊಲೆ ಹಿಂದಿನ ರಹಸ್ಯವನ್ನು ಬೇಧಿಸಿದ್ದಾರೆ.
ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದ ಪ್ರವೀಣ್ ಅರುಣ್ ಚೌಗುಲೆ ಎಂಬಾತನೇ ಬಂಧಿತ ಆರೋಪಿ. ಬೆಳಗಾವಿಯ ಕುಡುಚಿಯಲ್ಲಿರುವ ತನ್ನ ಸಂಬಂಧಿಕರ ಮನೆಯಲ್ಲಿ ಆರೋಪಿ ಅಡಗಿ ಕುಳಿತಿದ್ದ. ಈ ಕುರಿತು ಮಾಹಿತಿ ಪಡೆದ ಉಡುಪಿ ಪೊಲೀಸರು ಕೊನೆಗೂ ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ.

ನವೆಂಬರ್ 12 ರಂದು ಉಡುಪಿ ಜಿಲ್ಲೆಯ ಸಂತೆಕಟ್ಟೆ ಸಮೀಪದ ನೇಜಾರಿನ ತೃಪ್ತಿ ಲೇಔಟ್‌ನಲ್ಲಿರುವ ಮನೆಗೆ ಬೆಳ್ಳಂಬೆಳ್ಳಗ್ಗೆಯೇ ಎಂಟ್ರಿ ಕೊಟ್ಟಿದ್ದ ಹಂತಕ, ಮನೆಯಲ್ಲಿದ್ದ ತಾಯಿ ಹಾಗೂ ಮೂವರು ಮಕ್ಕಳನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಘಟನೆಯ ಬೆನ್ನು ಬಿದ್ದ ಪೊಲೀಸರು ಆರೋಪಿಯನ್ನು ಎರಡೇ ದಿನದಲ್ಲಿ ಅರೆಸ್ಟ್ ಮಾಡಿದ್ದಾರೆ.
ಕುಡುಚಿಯಲ್ಲಿ ಅಡಗಿದ್ದ ಆರೋಪಿ ಅರೆಸ್ಟ್
ಉಡುಪಿಯಲ್ಲಿ ನಾಲ್ವರನ್ನು ಕೊಲೆ ಮಾಡಿದ್ದ ಆರೋಪಿ ಪ್ರವೀಣ್ ಅರುಣ್ ಚೌಗುಲೆ ಆಟೋ ಏರಿ ಎಸ್ಕೇಪ್ ಆಗಿದ್ದ. ಒಂದೇ ಒಂದು ಸಾಕ್ಷ್ಯವನ್ನು ಬಿಡದೆ ಆರೋಪಿ ಪರಾರಿಯಾಗಿದ್ದ. ಉಡುಪಿ ಪೊಲೀಸರು ಆರೋಪಿಯ ಪತ್ತೆಗೆ ಐದು ತಂಡವನ್ನು ರಚಿಸಿಕೊಂಡು ಆರೋಪಿಯ ಪತ್ತೆಗೆ ಬಲೆ ಬೀಸಿದ್ದರು. ಆದರೆ ಆರೋಪಿಯ ಯಾವುದೇ ಸುಳಿವು ಸಿಗದೇ ಇದ್ದಾಗ ತಾಂತ್ರಿಕ ಸಾಕ್ಷ್ಯವನ್ನು ಕಲೆ ಹಾಕೋದಲ್ಲಿ ಮುಂದಾಗಿದ್ರು. ಈ ವೇಳೆಯಲ್ಲಿ ಸ್ಪೋಟಕ ಮಾಹಿತಿ ಲಭ್ಯವಾಗಿತ್ತು.
ಇದನ್ನೂ ಓದಿ : ಜನಧನ್ ಖಾತೆ ಹೊಂದಿದವರಿಗೆ ಗುಡ್‌ನ್ಯೂಸ್ : ನಿಮ್ಮ ಖಾತೆಗೆ ಜಮೆ ಆಗಲಿದೆ 2 ಲಕ್ಷ ರೂಪಾಯಿ
ಮಂಗಳೂರು ಏರ್‌ಪೋರ್ಟ್‌ನಲ್ಲಿತ್ತು ಹಂತಕನ ಸುಳಿವು
ಉಡುಪಿ ಪೊಲೀಸರು ನೇಜಾರು ಹತ್ಯೆ ಮಾಡಿದ್ದ ಆರೋಪಿಗಾಗಿ ಪೊಲೀಸರು ಎಲ್ಲೆಡೆಯಲ್ಲಿಯೂ ಹುಡಕಾಟ ನಡೆಸಿದ್ದಾರೆ. ಆದರೆ ಎಲ್ಲಿಯೂ ಕೂಡ ಆರೋಪಿಯ ಸುಳಿವು ಸಿಕ್ಕಿರಲಿಲ್ಲ. ಕುಟುಂಬದ ಹಣಕಾಸು ವ್ಯವಹಾರ, ವೈಯಕ್ತಿಕ ದ್ವೇಷ ಸೇರಿದಂತೆ ಎಲ್ಲಾ ರೀತಿಯಲ್ಲಿಯೂ ತನಿಖೆ ನಡೆಸಿದ್ದ ಪೊಲೀಸರು ನೇರವಾಗಿ ಬಂದಿದ್ದು, ಮಂಗಳೂರು ಏರ್‌ಪೋರ್ಟ್‌ಗೆ.
ನೇಜಾರಿನಲ್ಲಿ ಹತ್ಯೆಯಾಗಿದ್ದವರ ಪೈಕಿ ಮಗಳು ಆಯ್ನಾಜ್ ಮಂಗಳೂರು ಏರ್‌ಪೋರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಈ ಹಿನ್ನೆಲೆಯಲ್ಲಿ ಪೊಲೀಸರು ಏರ್‌ಪೋರ್ಟ್‌ನಲ್ಲಿ ವಿಚಾರಣೆಯನ್ನು ನಡೆಸಿದ್ದಾರೆ. ಈ ವೇಳೆಯಲ್ಲಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದ ಪ್ರವೀಣ್ ಅರುಣ್ ಚೌಗುಲೆ ನಾಪತ್ತೆಯಾಗಿರುವ ವಿಚಾರ ಪೊಲೀಸರಿಗೆ ತಿಳಿದಿತ್ತು.

ಕೂಡಲೇ ಆರೋಪಿಯ ಕುರಿತು ಮಾಹಿತಿಯನ್ನು ಪಡೆದು ಮೊಬೈಲ್ ಲೊಕೇಷನ್ ಆಧಾರದ ಮೇಲೆ ಅತ ಬೆಳಗಾವಿ ಜಿಲ್ಲೆಯ ಕುಡಿಚಿಯಲ್ಲಿರುವ ತನ್ನ ಸಂಬಂಧಿಕರ ಮನೆಯಲ್ಲಿ ಅಡಗಿ ಕುಳಿತಿರುವ ಕುರಿತು ಮಾಹಿತಿ ತಿಳಿದಿತ್ತು. ಕೂಡಲೇ ಮನೆಯ ಮೇಲೆ ದಾಳಿ ನಡೆಸಿದ ಉಡುಪಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ : Shakti Scheme : ಸರಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣ : ಮಹಿಳೆಯರಿಗೆ ಸರಕಾರದ ಗುಡ್‌ನ್ಯೂಸ್ : ಶಕ್ತಿ ಯೋಜನೆಗೆ ಹೊಸ ರೂಲ್ಸ್ ಜಾರಿ
ವಾಹನ ಬದಲಾಯಿಸಿಕೊಂಡು ಆರೋಪಿ ಎಸ್ಕೇಪ್
ಆರೋಪಿ ಪ್ರವೀಣ್ ಅರುಣ್ ಚೌಗುಲೆ ನಾಲ್ವರನ್ನು ಹತ್ಯೆ ಮಾಡಿದ ನಂತರ ಏನೂ ಆಗಿಲ್ಲದವನಂತೆ ಸ್ಥಳದಿಂದ ಬಟ್ಟೆ ಬದಲಾಯಿಸಿಕೊಂಡು ಎಸ್ಕೇಪ್ ಆಗಿದ್ದಾನೆ. ಸಂತೆಕಟ್ಟೆಯಲ್ಲಿ ಆಟೋ ಏರಿಕೊಂಡು, ವಾಹನಗಳನ್ನು ಬದಲಾಯಿಸುತ್ತಲೇ ಎಸ್ಕೇಪ್ ಆಗಿದ್ದ. ಪೊಲೀಸರಿಗೆ ಕೊಲೆ ಆರೋಪಿಯ ಕುರಿತು ಸಣ್ಣದೊಂದು ಸುಳಿವು ಕೂಡ ಸಿಗದಂತೆ ಜಾಗೃತೆ ವಹಿಸಿದ್ದ.
೧೫ ನಿಮಿಷದಲ್ಲಿ ನಾಲ್ವರ ಹತ್ಯೆ !
ನೇಜಾರಿನ ಮನೆಗೆ ಪರಿಚಯಸ್ಥನಂತೆ ಎಂಟ್ರಿ ಕೊಟ್ಟಿದ್ದ ಆರೋಪಿ ಪ್ರವೀಣ್ ಅರುಣ್ ಚೌಗುಲೆ ಮನೆಯಲ್ಲಿದ್ದ ಹಸೀನಾ (೪೮ ವರ್ಷ), ಮಕ್ಕಳಾದ ಅಫ್ನಾನ್ ( ೨೩ ವರ್ಷ), ಏರ್ ಇಂಡಿಯಾ ಉದ್ಯೋಗಿ ಅಜ್ನಾಝ್ (೨೧ ವರ್ಷ) ಹಾಗೂ ೮ನೇ ತರಗತಿ ವಿದ್ಯಾರ್ಥಿ ಆಸೀಮ್ (೧೨ ವರ್ಷ) ಎಂಬವರನ್ನು ಕೇವಲ ೧೫ ನಿಮಿಷಗಳಲ್ಲಿ ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದಾನೆ.
ಪುಟ್ಟ ಬಾಲಕನನ್ನೂ ನಿರ್ಧಯವಾಗಿ ಕೊಂದ ಪಾಪಿ
ಆಟ ಆಡಲು ಮನೆಯಿಂದ ಹೊರಗೆ ಹೋಗಿದ್ದ ೮ನೇ ತರಗತಿ ವಿದ್ಯಾರ್ಥಿ ಆಸೀಮ್ ಮನೆಯಲ್ಲಿ ಬೊಬ್ಬೆ ಕೇಳಿ ಮನೆಗೆ ಓಡೋಡಿ ಬಂದಿದ್ದಾನೆ. ಅಷ್ಟರಲ್ಲಾಗಲೇ ತಾಯಿ ಹಸೀನಾ ಹಾಗೂ ಅಫ್ನಾನ್, ಅಝ್ನಾಝ್‌ಗೆ ಚಾಕುವಿನಿಂದ ಇರಿದು ಕೊಲೆ ಗೈದಿದ್ದ. ಮನೆಯೊಳಗೆ ಬಂದ ಆಸೀಮ್‌ನನ್ನು ಚಾಕುವಿನಿಂದ ಇರಿದು ಹತ್ಯೆ ಗೈದಿದ್ದಾನೆ.
ಇದನ್ನೂ ಓದಿ : ಪದವೀಧರರಿಗೆ 3000, ಡಿಪ್ಲೋಮಾ ಆದ್ರೆ 1500 ರೂ. : ಕರ್ನಾಟಕ ಯುವನಿಧಿ ಯೋಜನೆ ಅರ್ಜಿ ಸಲ್ಲಿಸಿದ್ರಾ ?
ಕೊಲೆಯ ಹಿಂದಿದೆ ಹಲವು ಅನುಮಾನ !
ನೇಜಾರಿನಲ್ಲಿ ನಡೆದಿರುವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವು ಆಯಾಮಗಳಲ್ಲಿಯೂ ತನಿಖೆಯನ್ನು ನಡೆಸುತ್ತಿದ್ದಾರೆ. ಆರಂಭದಲ್ಲಿ ಯಾರೋ ಸುಫಾರಿ ಕೊಟ್ಟು ಕೊಲೆ ಮಾಡಿಸಿದ್ದಾರೆಂಬ ಮಾತು ಕೇಳಿಬಂದಿತ್ತು. ಇನ್ನೊಂದೆಡೆಯಲ್ಲಿ ಹಣ ವ್ಯವಹಾರಕ್ಕೆ ಈ ಹತ್ಯೆ ನಡೆದಿರಬಹುದಾ ಅನ್ನೋ ಅನುಮಾನ ವ್ಯಕ್ತವಾಗಿತ್ತು. ಇದೀಗ ಆರೋಪಿಯನ್ನು ಬಂಧಿಸಿರುವ ಪೊಲೀಸರು ಹಲವು ಆಯಾಮಗಳಲ್ಲಿಯೂ ತನಿಖೆಯನ್ನು ನಡೆಸುತ್ತಿದ್ದಾರೆ.
ಆರೋಪಿಯನ್ನು ಬಂಧಿಸಿರುವ ಉಡುಪಿ ಪೊಲೀಸರು ವಿಚಾರಣೆಯನ್ನು ನಡೆಸಲಿದ್ದಾರೆ. ಈ ವೇಳೆಯಲ್ಲಿ ಕೊಲೆಯ ಹಿಂದಿನ ನಿಗೂಢ ಸತ್ಯ ಬಯಲಾಗಲಿದೆ. ಈಗಾಗಲೇ ಹತ್ಯೆಯಾಗಿರುವ ಮಕ್ಕಳ ತಂದೆ ಊರಿಗೆ ಆಗಮಿಸಿ, ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದಾರೆ. ಒಟ್ಟಿನಲ್ಲಿ ಕೊಲೆಗೆ ನಿಖರವಾದ ಕಾರಣ ಪೊಲೀಸರ ತನಿಖೆಯಿಂದಷ್ಟೇ ತಿಳಿದು ಬರಬೇಕಾಗಿದೆ.
Udupi nejaru 4 murder Case Accused Praveen Arun Chowgule Arrest Udupi Police Karnataka News