ಉಡುಪಿ ವಿದ್ಯಾರ್ಥಿನಿ ಸಾವು ಪ್ರಕರಣ : ಲಾಸ್ಟ್ ಕಾಲ್ ನಲ್ಲಿ ಬಯಲಾಯ್ತು ಸಾವಿನ ರಹಸ್ಯ !!!

ಉಡುಪಿ : ಆ ವಿದ್ಯಾರ್ಥಿನಿ ನಿಗೂಢವಾಗಿ ಸಾವನ್ನಪ್ಪಿದ್ದಳು. ಅರೆ ಪ್ರಜ್ಞಾವಸ್ತೆಯಲ್ಲಿ ಆಸ್ಪತ್ರೆಗೆ ದಾಖಲಿಸಿದ್ದ ಯುವಕ ನಾಪತ್ತೆಯಾಗಿದ್ದ. ಮಗಳ ಸಾವಿನ ಬೆನ್ನಲ್ಲೇ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಸಾವಿನ ಪ್ರಕರಣದ ಜಾಡು ಹಿಡಿದ ಪೊಲೀಸರು ಯುವತಿ ಮಾಡಿದ ಆ ಲಾಸ್ಟ್ ಕಾಲ್ ನಿಂದಲೇ ಸಾವಿನ ರಹಸ್ಯವನ್ನು ಬೇಧಿಸಿದ್ದಾರೆ.

ಹೌದು, ಉಡುಪಿ ಜಿಲ್ಲೆಯ ಕುಕ್ಕೆಹಳ್ಳಿಯ ನಿವಾಸಿಯಾಗಿರುವ ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ರಕ್ಷಿತಾ ನಾಯಕ್ ನಿಗೂಢವಾಗಿ ಸಾವನ್ನಪ್ಪಿದ್ದಳು. ಅಕ್ಟೋಬರ್ 24ರಂದು ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಯುವತಿಯನ್ನು ಬೈಂದೂರು ತಾಲೂಕಿನ ಜಡ್ಕಲ್ ನಿವಾಸಿ ಪ್ರಶಾಂತ್ ಕುಂದರ್ ಎಂಬಾತ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾನೆ. ಆದರೆ ರಕ್ಷಿತಾ ನಾಯಕ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.

ರಕ್ಷಿತಾ ಪೋಷಕರಿಗೆ ಕರೆ ಮಾಡಿದ್ದ ಪ್ರಶಾಂತ್ ಕುಂದರ್ ಆಸ್ಪತ್ರೆಗೆ ದಾಖಲಿಸಿದ ವಿಚಾರವನ್ನು ತಿಳಿಸಿದ್ದಾನೆ. ರಕ್ಷಿತಾ ಸಾವನ್ನಪ್ಪಿರೋ ವಿಚಾರವನ್ನು ಆಸ್ಪತ್ರೆಯ ಸಿಬ್ಬಂದಿ ಪ್ರಶಾಂತ್ ಗೆ ತಿಳಿಸಲು ಬಂದಾಗ ಪ್ರಶಾಂತ್ ನಾಪತ್ತೆಯಾಗಿದ್ದ. ಮಾತ್ರವಲ್ಲ ಕರೆ ಮಾಡಿದ್ರೆ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಇದರಿಂದಾಗಿ ಅನುಮಾನಗೊಂಡ ಪೋಷಕರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.

ಸಾವಿನ ಪ್ರಕರಣದ ಜಾಡು ಹಿಡಿದ ಪೊಲೀಸರು ರಕ್ಷಿತಾ ನಾಯಕ್ ಮೊಬೈಲ್ ಕರೆಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆಯಲ್ಲಿ ಆಕೆ ಮಾಡಿದ್ದ ಲಾಸ್ಟ್ ಕಾಲ್ ಆಧಾರದ ಮೇಲೆ ಸಾವಿನ ರಹಸ್ಯವನ್ನು ಬೇಧಿಸಿದ್ದಾರೆ. ಈ ಬೆನ್ನಲ್ಲೇ ಪ್ರಶಾಂತ್ ಕುಂದರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆಯಲ್ಲಿ ಸ್ಪೋಟಕ ಮಾಹಿತಿಯನ್ನು ಬಾಯ್ಬಿಟ್ಟಿದ್ದಾನೆ ಎನ್ನಲಾಗುತ್ತಿದೆ.

ಇಂಟಿರಿಯರ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದ ಪ್ರಶಾಂತ್ ಗೆ ಈಗಾಗಲೇ ಮದುವೆಯಾಗಿದೆ. ಆದರೆ ಸಾಮಾಜಿಕ ಜಾಲತಾಣದ ಮೂಲಕ ಪ್ರಶಾಂತ್ ಹಾಗೂ ರಕ್ಷಿತಾ ನಾಯಕ್ ಗೆ ಪರಿಚಯ ವಾಗಿತ್ತು. ಪರಿಚಯ ಪ್ರೀತಿಗೆ ತಿರುಗಿತ್ತು. ರಕ್ಷಿತಾ ನಾಯಕ್ ಳನ್ನು ಉಡುಪಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ಇದೇ ಪ್ರಶಾಂತ್ ನಾಯಕ್ ಇರಿಸಿದ್ದ. ರಕ್ಷಿತಾ ಪತ್ನಿಯನ್ನು ಬಿಟ್ಟು ತನ್ನೊಂದಿಗೆ ಇರುವಂತೆ ಕೇಳಿಕೊಂಡಿದ್ದಾಳೆ. ಆದರೆ ಇದಕ್ಕೆ ಪ್ರಶಾಂತ್ ಕುಂದರ್ ಒಪ್ಪಿರಲಿಲ್ಲ. ರಕ್ಷಿತಾ ತನ್ನ ಕೊನೆಯ ಕರೆಯಲ್ಲಿಯೂ ಇದೇ ವಿಚಾರವನ್ನೇ ಹೇಳಿದ್ದಳು ಎಂದು ಪ್ರಶಾಂತ್ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗುತ್ತಿದೆ.

ರಕ್ಷಿತಾ ಸಾವಿಗೆ ಸಂಬಂಧಿಸಿದಂತೆ ಪೊಲೀಸರು ಪ್ರಶಾಂತ್ ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ. ರಕ್ಷಿತಾ ಸಾವಿನ ಬೆನ್ನಲ್ಲೇ ಹಲವು ಮಾತುಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿಯೇ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಪೊಲೀಸರ ತನಿಖೆಯ ನಂತರವಷ್ಟೇ ಸತ್ಯಾಂಶ ಹೊರಬರೋದಕ್ಕೆ ಸಾಧ್ಯ.

Comments are closed.