Corona Vaccine to Children : ಮಕ್ಕಳಿಗೂ ಸಿಗಲಿದೆ ಲಸಿಕೆ: ವಾಕ್ಸಿನ್ ನೀಡಲು ಬಿಬಿಎಂಪಿ ಮಾಸ್ಟರ್ ಪ್ಲ್ಯಾನ್

ಬೆಂಗಳೂರು : ದೇಶದಲ್ಲಿ ಕೊರೋನಾ ಹಾಗೂ ಓಮೈಕ್ರಾನ್ ನಿಯಂತ್ರಣಕ್ಕೆ ಕಠಿಣ ಕ್ರಮ ರೂಪಿಸಲಾಗುತ್ತಿರೋದರ ಜೊತೆಗೆ ಲಸಿಕೆ ನೀಡುವುದಕ್ಕೂ ಆದ್ಯತೆ ನೀಡಲಾಗುತ್ತಿದೆ. ಅಷ್ಟೇ ಅಲ್ಲ ಜನವರಿ 3ರಿಂದ ಮಕ್ಕಳಿಗೂ ಲಸಿಕೆ ನೀಡಲು (Corona Vaccine to Children) ಕೇಂದ್ರದ ನಿರ್ಧಾರ ಮಾಡಿದ್ದು ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಬೆಂಗಳೂರಿನ ಅರ್ಹ ಮಕ್ಕಳ ಪಟ್ಟಿ ಸಿದ್ಧಪಡಿಸಿಕೊಂಡಿದ್ದು, ಲಸಿಕೆ ವಿತರಣೆಗೂ ಪ್ಲ್ಯಾನ್ ಮಾಡಿದೆ. ಪ್ರಧಾನಿ ಮೋದಿ ಇತ್ತೀಚೆಗಷ್ಟೇ ಮಕ್ಕಳ ಪೈಕಿ 15 ವರ್ಷದಿಂದ 18 ವರ್ಷ ವಯಸ್ಸಿನೊಳಗಿನ ಮಕ್ಕಳಿಗೆ ಜನವರಿ 3ರಿಂದ ಲಸಿಕೆ ನೀಡಲು ಸೂಚಿಸಿದ್ದರು. ಈ ಹಿನ್ನೆಲೆ ರಾಜಧಾನಿ ಬೆಂಗಳೂರಲ್ಲೂ ಕೂಡ ಜನವರಿ 3ರಿಂದ ಮಕ್ಕಳಿಗೆ ಲಸಿಕೆ ನೀಡಲು ಬಿಬಿಎಂಪಿ ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಂಡಿದೆ.

ನಗರದಲ್ಲಿ 15 ರಿಂದ 18 ವರ್ಷದೊಳಗಿನ ಅಂದರೆ SSLC ಇಂದ ದ್ವಿತೀಯ ಪಿಯುಸಿ ವರೆಗಿನ ಮಕ್ಕಳಿಗೆ ಲಸಿಕೆ ನೀಡಿಕಲು ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದೆ. ಈ ಹಿಂದೆ ಕಾಲೇಜುಗಳಲ್ಲಿ ಲಸಿಕೆ ಶಾಲೆಗಳಲ್ಲಿ ವ್ಯಾಕ್ಸಿನ್ ಹಾಕಲು ಕ್ರಮವಹಿಸಲಾಗಿದೆ. ಮಕ್ಕಳಿಗೆ ಮೊದಲ ಬಾರಿಗೆ ವ್ಯಾಕ್ಸಿನ್ ಹಾಕುವ ಹಿನ್ನೆಲೆಯಲ್ಲಿ 30 ನಿಮಿಷ ಕಾಯುವ ಕೋಣೆಗೆ ಆದ್ಯತೆ ನೀಡಲಾಗಿದೆ. ಮಕ್ಕಳ ನಿಗಾ ದೃಷ್ಟಿಯಿಂದ ಲಸಿಕೆ ನೀಡುವ ಎಲ್ಲಾ ಶಾಲೆಗಳ ಬಳಿ ಆಂಬುಲೆನ್ಸ್ ವ್ಯವಸ್ಥೆಯನ್ನೂ ಬಿಬಿಎಂಪಿ ಮಾಡಿದೆ. ಮೊದಲ ಹಂತದಲ್ಲಿ ಸರ್ಕಾರಿ ಹಾಗೂ ಬಿಬಿಎಂಪಿ ಶಾಲಾ ಕಾಲೇಜುಗಳಲ್ಲಿ ಲಸಿಕೆ ವಿತರಣೆಯಾಗಲಿದೆ. ನಂತರ ಖಾಸಗಿ ಶಾಲೆ ಕಾಲೇಜಿನ ಮಕ್ಕಳಿಗೆ ಪಾಲಿಕೆ ವ್ಯಾಕ್ಸಿನ್ ನೀಡಲಾಗುತ್ತದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ವಯಸ್ಸಿನ 7 ಲಕ್ಷ ಮಕ್ಕಳನ್ನು ಗುರುತಿಸಿರುವ ಪಾಲಿಕೆ, ಪ್ರತಿ ದಿನ ಒಂದು ಶಾಲಾ ಕಾಲೇಜಿನಲ್ಲಿ 100 ಮಕ್ಕಳಿಗೆ ಲಸಿಕೆ ವಿತರಣೆ ಮಾಡುವ ಲೆಕ್ಕಾಚಾರ ಹಾಕಿದೆ‌. ಸರ್ಕಾರಿ ಶಾಲೆಗಳ ಜೊತೆಗೆ ಖಾಸಗಿ ಶಾಲೆಗಳಲ್ಲೂ ಲಸಿಕೆ ನೀಡಲು ಸಿದ್ಧತೆ ನಡೆದಿದ್ದು, ಖಾಸಗಿ ಶಾಲೆಗಳ ಜೊತೆ ಬಿಬಿಎಂಪಿ ಮಾತುಕತೆ ಕೂಡ ನಡೆಸಿದೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಲಸಿಕೆ ಪಡೆದ ಮಕ್ಕಳಿಗೆ ಮಾರನೇ ದಿನ ರಜೆ‌ನೀಡಲು ಶಾಲಾ‌ ಕಾಲೇಜುಗಳಿಗೆ ಸೂಚಿಸಲಾಗಿದೆ. ಅಲ್ಲದೇ ಪೋಷಕರಿಗೆ ಮಕ್ಕಳ ಲಸಿಕೆಯನ್ನು ನಿರ್ಧರಿಸುವ ಅವಕಾಶ ನೀಡಲಾಗಿದ್ದು ಖಾಸಗಿ ಆಸ್ಪತ್ರೆಯಲ್ಲೂ ಲಸಿಕೆ ಕೊಡಿಸಲು ಅವಕಾಶ ಕಲ್ಪಿಸಲಾಗಿದೆ.

ಒಟ್ಟಾರೆ ಪಾಲಿಕೆ ಗೊತ್ತು ಮಾಡಿರುವ 7 ಲಕ್ಷ ಮಕ್ಕಳಿಗೂ ಲಸಿಕೆ ನೀಡುವ ಗುರಿಯನ್ನು ಬಿಬಿಎಂಪಿ ಹೊಂದಿದೆ. ಒಟ್ಟಾರೆ ಮಕ್ಕಳಿಗೂ ಲಸಿಕೆ ಬಂದಿರುವುದು ಸಂತಸದ ವಿಚಾರ. ಇದರ ಜೊತೆಯಲ್ಲೇ ಜನವರಿ 10ರಿಂದ 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಹಾಗೂ ಫ್ರಂಟ್ ಲೈನ್ ಕಾರ್ಯಕರ್ತರಿಗೂ ಲಸಿಕೆ ನೀಡಲು ಸಜ್ಜಾಗಿದೆ‌.

ಇದನ್ನೂ ಓದಿ : Covid vaccines :ಕೋವಿಡ್​ ವಿರುದ್ಧದ ಹೋರಾಟಕ್ಕೆ ಮತ್ತಷ್ಟು ಬಲ: ಮತ್ತೆರಡು ಲಸಿಕೆಗಳಿಗೆ ಕೇಂದ್ರದಿಂದ ಅನುಮೋದನೆ

ಇದನ್ನೂ ಓದಿ : Booster Dose For 60+: 60 ವರ್ಷ ಮೇಲ್ಪಟ್ಟವರ ಬೂಸ್ಟರ್​ ಡೋಸ್​ಗೆ ಬೇಕಿಲ್ಲ ವೈದ್ಯರ ಶಿಫಾರಸ್ಸು..!

(BBMP Master Plan to provide Corona Vaccine to Children)

Comments are closed.