Postpone periods: ಮಾತ್ರೆ ಸೇವಿಸದೇ ಮುಟ್ಟಿನ ದಿನವನ್ನು ಮುಂದೂಡಲು ಇಲ್ಲಿದೆ ಮಾರ್ಗ !

Postpone periods: ಯಾವುದೇ ಕಾರ್ಯಕ್ರಮವಿರಲಿ, ವಿಶೇಷ ದಿನವಿರಲಿ, ಪ್ರವಾಸದಲ್ಲಿ ಎಂಜಾಯ್​ ಮಾಡುತ್ತಿರಲಿ ಹೀಗೆ ನಿಮ್ಮ ಜೀವನದ ಯಾವುದೇ ಖುಷಿಯ ಸಂದರ್ಭವನ್ನು ಕ್ಷಣಮಾತ್ರದಲ್ಲಿ ಹಾಳು ಮಾಡಬಲ್ಲ ಸಾಮರ್ಥ್ಯ ಋತುಚಕ್ರಕ್ಕಿದೆ. ನೀವು ಎಷ್ಟೇ ಅದೃಷ್ಟವಂತರಾಗಿದ್ದರೂ ಮುಟ್ಟಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ನೀವು ಮನಸ್ಸು ಮಾಡಿದರೆ ಮುಟ್ಟಿನ ದಿನವನ್ನು ಮಂದೂಡಬಹುದು.

ಅನೇಕರು ಋತುಚಕ್ರವನ್ನು ಮುಂದೂಡಲು ಮಾತ್ರೆಗಳ ಮೊರೆ ಹೋಗುತ್ತಾರೆ. ಆದರೆ ಇದು ತಪ್ಪು. ಇದು ಖಂಡಿತವಾಗಿಯೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ನೀವು ಮನೆಯಲ್ಲಿ ರುವ ಕೆಲವು ಆಹಾರ ಪದಾರ್ಥಗಳನ್ನೇ ಬಳಸಿ ನಿಮ್ಮ ಋತುಚಕ್ರವನ್ನು ಮುಂದೂಡಬಹುದಾಗಿದೆ. ಹಾಗಾದರೆ ಇದಕ್ಕಾಗಿ ನೀವು ಏನು ಮಾಡಬೇಕು ಎಂಬುದಕ್ಕೆ ಇಲ್ಲಿದೆ ಮಾಹಿತಿ.

ಆ್ಯಪಲ್​ ಸೈಡರ್​ ವಿನೇಗರ್​:
ತೂಕ ಇಳಿಕೆ ಮಾಡುವವರು ಸಾಮಾನ್ಯವಾಗಿ ಈ ಆ್ಯಪಲ್​ ಸೈಡರ್ ವಿನೇಗರ್​ನ್ನು ಸೇವಿಸುತ್ತಾರೆ. ಆದರೆ ಈ ಪಾನೀಯಕ್ಕೆ ಕೇವಲ ತೂಕ ಇಳಿಕೆ ಮಾಡೋದು ಮಾತ್ರವಲ್ಲದೇ ನಿಮ್ಮ ಮುಟ್ಟನ್ನು ಮುಂದೂಡುವ ಸಾಮರ್ಥ್ಯ ಕೂಡ ಇದೆ. ಆ್ಯಪಲ್​ ಸೀಡರ್​ ವಿನೇಗರ್​ನಲ್ಲಿರುವ ಅತಿಯಾದ ಆಮ್ಲೀಯ ಅಂಶಗಳು ನಿಮ್ಮ ಮುಟ್ಟನ್ನು ವಿಳಂಬಗೊಳಿಸಲು ಸಹಕಾರಿ ಎಂದು ಅನೇಕ ತಜ್ಞರು ಹೇಳುತ್ತಾರೆ. ಆದರೆ ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಇದಕ್ಕಾಗಿ ನೀವು ನಿಮಗೆ ಮುಟ್ಟಾಗುವ 10 ರಿಂದ 15 ದಿನಗಳ ಮುಂಚೆಯೇ ಬೆಚ್ಚಗಿನ ನೀರಿನ ಜೊತೆಯಲ್ಲಿ ಆ್ಯಪಲ್​ ಸೈಡರ್​ ವಿನೇಗರ್​ನ್ನು ಮಿಶ್ರಣ ಮಾಡಿ ನಿಯಮಿತವಾಗಿ ಸೇವನೆ ಮಾಡಿ.

ಬೇಳೆಕಾಳುಗಳ ಬಳಕೆ:
ಪ್ರತಿಯೊಬ್ಬರ ಮನೆಯಲ್ಲಿಯೂ ನಿಮಗೆ ಕಡ್ಲೆ ಬೇಳೆಯು ಸಿಕ್ಕೇ ಸಿಗುತ್ತದೆ. ಇದು ನಿಮ್ಮ ಮುಟ್ಟು ವಿಳಂಬಗೊಳಿಸಲು ಸಹಕಾರಿ. ಹುರಿದು ಪುಡಿ ಮಾಡಿದ ಕಡಲೇ ಬೇಳೆಯನ್ನು ಸೇವಿಸುವುದರಿಂದ ನೀವು ಮುಟ್ಟಿನ ದಿನವನ್ನು ಮುಂದೂಡಬಹುದಾಗಿದೆ.ಆದರೆ ಇದಕ್ಕೂ ಕೂಡ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಅಲ್ಲೇ ಇದು ಕೊಂಚ ರಿಸ್ಕಿ ಕೂಡ. ಏಕೆಂದರೆ ಅತಿಯಾಗಿ ಕಡ್ಲೆ ಬೇಳೆ ಸೇವನೆಯಿಂದ ಜೀರ್ಣಕ್ರಿಯೆ ಸಮಸ್ಯೆಯಾಗಲಿದೆ.

ನಿಂಬೆ ರಸ :
ಆ್ಯಪಲ್​ ಸೈಡರ್​ ವಿನೇಗರ್​ನಂತೆಯೇ ನಿಂಬೆ ರಸ ಕೂಡ ಆಮ್ಲೀಯ ಗುಣಗಳನ್ನು ಹೊಂದಿರೋದ್ರಿಂದ ಇದನ್ನೂ ಸಹ ಮುಟ್ಟು ಮುಂದೂಡಲು ಬಳಕೆ ಮಾಡಬಹುದು.

ಕೇವಲ ನಿಂಬು ಮಾತ್ರವಲ್ಲದೇ ಸಿಟ್ರಸ್​ ಅಂಶ ಹೆಚ್ಚಾಗಿರುವ ಯಾವುದೇ ಹಣ್ಣುಗಳ ಸೇವನೆ ಕೂಡ ನಿಮಗೆ ಮುಟ್ಟಿನ ಅವಧಿಯಲ್ಲಿ ರಕ್ತಸ್ರಾವವನ್ನು ಕಡಿಮೆ ಮಾಡಲು ಸಹಕಾರಿ. ಆದರೆ ಆಮ್ಲೀಯ ಪದಾರ್ಥ ಹೆಚ್ಚಿರುವ ಹಣ್ಣುಗಳ ಅತಿಯಾದ ಸೇವನೆಯು ನಿಮ್ಮ ವಸಡಿಗೆ ಕಿರಿಕಿರಿ ಉಂಟು ಮಾಡಬಹುದು. ಅಲ್ಲದೇ ಹಸಿವನ್ನೂ ಹೆಚ್ಚಿಸುತ್ತದೆ .

ಇದನ್ನು ಓದಿ : White hair Beauty Tips : ಅವಧಿಗೂ ಮುನ್ನವೇ ಕೂದಲು ಬೆಳ್ಳಗಾಗುತ್ತಿದೆಯೇ ? ಹಾಗಾದರೆ ಈ ಪದಾರ್ಥ ತಪ್ಪದೇ ಸೇವಿಸಿ

ಇದನ್ನೂ ಓದಿ : Skincare Tips : ತ್ವಚೆಯನ್ನು ಕಾಂತಿಯುತಗೊಳಿಸಲು ಬಳಕೆ ಮಾಡಿ ‘ಮೊಸರು’

Postpone periods: Ways to delay your periods without popping pills!

Comments are closed.