BF.7 virus in bengaluru: ಬೆಂಗಳೂರಿನಲ್ಲೂ ಕಾಲಿಟ್ಟ BF.7 ಚೀನಾ ವೈರಸ್?‌ ಚೀನಾದಿಂದ ಬಂದಿದ್ದ ವ್ಯಕ್ತಿಗೆ ಸೋಂಕು ದೃಡ

ಬೆಂಗಳೂರು: (BF.7 virus in bengaluru) ಈಗಾಗಲೇ ಚೀನಾದಲ್ಲಿ ಕೊರೊನಾ ತಾಂಡವ ಆಡುತ್ತಿದೆ. ಇದರ ಬೆನ್ನಲ್ಲೇ ರಾಜ್ಯದಲ್ಲೂ ಕೂಡ ಕಟ್ಟೆಚ್ಚರಗಳನ್ನು ವಹಿಸಿಕೊಳ್ಳಲಾಗ್ತಾ ಇದೆ. ಈ ನಡುವೆ ಚೀನಾದಿಂದ ಬೆಂಗಳೂರಿಗೆ ಬಂದಿದ್ದ ವ್ಯಕ್ತಿಯೋರ್ವನಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ರಾಜ್ಯದಲ್ಲಿ ಕೊರೊನಾ ಭೀತಿ ಇನ್ನಷ್ಟು ಹೆಚ್ಚಳವಾಗಿದೆ.

ಚೀನಾದಲ್ಲಿ ಸೋಂಕು ಉಲ್ಬಣಗೊಂಡ ಹಿನ್ನಲೆ ದೇಶದಲ್ಲಿ ಸಾಕಷ್ಟು ಮುಂಜಾಗೃತಾ ಕ್ರಮವನ್ನು ತೆಗೆದುಕೊಳ್ಳಲಾಗುತ್ತಾ ಇದೆ. ಏರ್‌ ಪೋರ್ಟ್‌ ಗಳಲ್ಲಿ ಕಟ್ಟೆಚ್ಚರಗಳನ್ನು ವಹಿಸಲಾಗಿದೆ. ವಿದೇಶದಿಂದ ಬಂದಂತಹ ಜನರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಈ ಮೂರು ದಿನದಲ್ಲಿ ವಿದೇಶದಿಂದ ಬಂದಂತಹ ಒಂಬತ್ತು ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಅದರಲ್ಲಿ ಚೀನಾದಿಂದ ಬಂದ ವ್ಯಕ್ತಿಗೂ ಸೋಂಕು ಪಾಸಿಟಿವ್‌ (BF.7 virus in bengaluru) ಬಂದಿದೆ. ಈ ಹಿನ್ನಲೆಯಲ್ಲಿ ಚೀನಾ ವೈರಸ್‌ ನ ಭಯ ಬೆಂಗಳೂರಿನಲ್ಲೂ ಆರಂಭವಾಗಿದೆ. ಈಗಾಗಲೇ ಚೀನಾದಲ್ಲಿ ಉಲ್ಬಣಗೊಂಡ ವೈರಸ್‌ ನ ಭಯ ಜನರಲ್ಲಿ ಆವರಿಸಿತ್ತು. ಇದೀಗ ಚೀನಾದಿಂದ ಬಂದಂತಹ ವ್ಯಕ್ತಿಗೆ ಕೊರೊನಾ ಸೋಂಕು ದೃಡಪಟ್ಟಿರುವ ಹಿನ್ನಲೆಯಲ್ಲಿ ರಾಜ್ಯದ ಜನತೆಗೆ ಇನ್ನಷ್ಟು ಭಯ ಹೆಚ್ಚಳವಾಗಿದೆ.

ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಈಗಾಗಲೇ ವಿದೇಶದಿಂದ ಬರುವ ಜನರನ್ನು ತಪಾಸಣೆಗೆ ಒಳಪಡಿಸುತ್ತಿದ್ದು, ಈ ಸಂದರ್ಭದಲ್ಲಿ ವಿದೇಶದಿಂದ ಬಂದಂತಹ ಒಟ್ಟು ಒಂಬತ್ತು ಜನರಿಗೆ ಕೊರೊನಾ ಪಾಸಿಟಿವ್‌ ಇರುವುದು ತಿಳಿದು ಬಂದಿದೆ. ಅದರಲ್ಲೂ ಆತಂಕಕಾರಿ ವಿಷಯವೇನೆಂದರೆ ಚೀನಾದಿಂದ ಬಂದಿದ್ದ ಓರ್ವ ವ್ಯಕ್ತಿಗೆ ಸೋಂಕು ಪಾಸಿಟಿವ್‌ ಬಂದಿದ್ದು, ಚೀನಾದ ವೈರಸ್‌ ಇರಬಹುದು ಎನ್ನುವ ಮಾಹಿತಿ ಇನ್ನು ಖಚಿತವಾಗಿಲ್ಲ. ಹೀಗಾಗಿ ಹೆಚ್ಚಿನ ತಪಾಸಣೆಗಾಗಿ ವ್ಯಕ್ತಿಯ ಮಾದರಿ ಸಂಗ್ರಹ ಮಾಡಿ ಜಿನೋಮಿಕ್ ಸೀಕ್ವೆನ್ಸಿಂಗ್​ಗೆ ರವಾನಿಸಲಾಗಿದೆ.

ಜಿನೋಮ್‌ ಸೀಕ್ವೆನ್ಸ್‌ ವರದಿ ಬರುವುದು ಒಂದು ವಾರಗಳ ಸಮಯವಾಗುವುದರಿಂದ ಅಲ್ಲಿಯವರೆಗೂ ವ್ಯಕ್ತಿಗೆ ಇರುವುದು ಬಿಎಫ್‌ ೭ ವೈರಸ್‌ ಇರಬಹುದಾ ಎಂಬ ಆತಂಕ ಇರುವಂತಹದ್ದು. ವಿದೇಶದಿಂದ ಬಂದಿದ್ದ ಒಂಬತ್ತು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿರುವುದರಿಂದ ಐವರನ್ನು ಹೋಮ್‌ ಕ್ವಾರಂಟೈನ್‌ ನಲ್ಲಿರಿಸಲಾಗಿದ್ದು, ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಎಲ್ಲಾ ಸೋಂಕಿತರ ಜಿನೊಮಿಕ್​ ಸೀಕ್ವೆನ್ಸ್​​ ವರದಿಗೆ ಆರೋಗ್ಯ ಇಲಾಖೆ ಕಾಯುತ್ತಿದೆ.

ಇದನ್ನೂ ಓದಿ : New year- corona rules: ಹೊಸ ವರ್ಷಾಚರಣೆಗೆ 10 ನಿಯಮಗಳ ಶಿಫಾರಸ್ಸು: ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ

ಕೊರೊನಾ ಸೋಂಕು ದೃಡಪಟ್ಟ ಚೀನಾದಿಂದ ಬಂದಿದ್ದ ವ್ಯಕ್ತಿ ಉತ್ತರಪ್ರದೇಶದ ಆಗ್ರಾ ಮೂಲದವನಾಗಿದ್ದು, ಚೀನಾದಿಂದ ಬೆಂಗಳೂರಿಗೆ ಬಂದು ಆಗ್ರಾಗೆ ಪ್ರಯಾಣ ಮಾಡಿರುವ ವಿಚಾರ ತಿಳಿದುಬಂದಿದೆ. ಸದ್ಯ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ವ್ಯಕ್ತಿಯ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

(BF.7 virus in bengaluru) Corona is already playing in China. Following this, strict precautions have also been taken in the state. In the meantime, a person who had come to Bangalore from China was infected with Corona, and the fear of Corona has increased in the state.

Comments are closed.