New year- corona rules: ಹೊಸ ವರ್ಷಾಚರಣೆಗೆ 10 ನಿಯಮಗಳ ಶಿಫಾರಸ್ಸು: ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ

ಬೆಂಗಳೂರು: (New year- corona rules) ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸೋಂಕು ಕಾರ್ನಾಟಕದಲ್ಲೂ ಆತಂಕ ಪಡುವಂತೆ ಮಾಡಿದೆ. ಕರ್ನಾಟಕದಲ್ಲಿ ಕೊರೊನಾ ನಿಯಂತ್ರಣಕ್ಕೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುವ ಕುರಿತು ಚರ್ಚೆಗಳು ನಡೆಯುತ್ತಿದ್ದು, ಕೊರೊನಾ ತಾಂತ್ರಿಕ ಸಲಹಾ ಸಮಿತಿ ಕೊರೊನಾ ನಿಯಂತ್ರಣಕ್ಕೆ ವಿಶೇಷ ಸಭೆ ನಡೆಸಿದ್ದು, ಹೊಸ ವರ್ಷಾಚರಣೆಗೆ ಕೆಲವು ಅಂಶಗಳನ್ನು ಶಿಫಾರಸ್ಸು ಮಾಡಿದೆ.

ಬೆಂಗಳೂರಿಗೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸುವ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ಚರ್ಚೆ ನಡೆಸಿದ್ದು, ಹೊಸ ವರ್ಷಕ್ಕೆ ಪ್ರತ್ಯೇಕ ಮಾರ್ಗಸೂಚಿ (New year- corona rules)ಗಳನ್ನು ಬಿಡುಗಡೆ ಮಾಡುವ ಕುರಿತಾಗಿಯೂ ಕೂಡ ವಿಚಾರ ವಿನಿಮಯ ನಡೆಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ, ದೈನಂದಿನ ಕೊವಿಡ್ ಪರೀಕ್ಷೆಗಳನ್ನು ಹೆಚ್ಚಿಸುವಂತೆ, ಹೊಸ ವರ್ಷದ ಆಚರಣೆ, ಹಬ್ಬ ಹಾಗೂ ಧಾರ್ಮಿಕ ಆಚರಣೆ ಸಮಯದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಯನ್ನು ತಾಂತ್ರಿಕ ಸಲಹಾ ಸಮಿತಿಯು ಈಗಾಗಲೇ ಸರಕಾರಕ್ಕೆ ನೀಡಿದೆ.

ಹೊಸ ವರ್ಷಾಚರಣೆಗೆ ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸು ಮಾಡಿರುವ ಅಂಶಗಳು ಈ ಕೆಳಗಿನಂತಿವೆ:

  • ಕಾರ್ಯಕ್ರಮಗಳನ್ನು ಹೊರಾಂಗಣ ಪ್ರದೇಶಗಳಲ್ಲಿ ಆಯೋಜನೆ ಮಾಡಬೇಕು.
  • ರಾತ್ರಿ ವೇಳಯಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡದೇ ಇರುವುದು.
  • ಮಾಸ್ಕ್‌ ಇಲ್ಲದೇ ಬಂದವರಿಗೆ ಕಾರ್ಯಕ್ರಮಕ್ಕೆ ಪ್ರವೇಶ ನಿಷಿದ್ದ.
  • ಪಾರ್ಟಿ, ಪಬ್‌ ಇನ್ನೀತರ ಚಟುವಟಿಕಗೆಳಿಗೆ ಬರುವವರಿಗೆ ಥರ್ಮಲ್‌ ಸ್ಕ್ರೀನಿಂಗ್ ಕಡ್ಡಾಯ.
  • ದೇಹದ ಉಷ್ಣಾಂಶ ಹೆಚ್ಚಿರುವವರಿಗೆ ಪ್ರವೇಶ ನಿಷೇಧ
  • 60 ವರ್ಷಕ್ಕಿಂತ ಮೇಲ್ಪಟ್ಟವರು ಆರೋಗ್ಯವಾಗಿದ್ದರೆ ಮಾತ್ರ ಕಾರ್ಯಕ್ರದಲ್ಲಿ ಭಾಗಿಗೆ ಅವಕಾಶ
  • ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರಲ್ಲಿ ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ಅವಕಾಶ
  • ಕಾರ್ಯಕ್ರಮದ ಸ್ಥಳ ಪ್ರವೇಶಿಸುವ ಮೊದಲು ಪ್ರತಿಯೊಬ್ಬರಿಗೂ ಪ್ರವೇಶದ್ವಾರದಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಮೂಲಕ ಕೈಗಳನ್ನು ಸ್ವಚ್ಛಗೊಳಿಸಲು ಸೂಚಿಸಬೇಕು
  • ಆರೋಗ್ಯ ತೊಂದರೆ ಕಾಣಿಸಿಕೊಂಡಲ್ಲಿ ಅವರನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಬೇಕು.
  • ಕೊವಿಡ್​​ ತರಬೇತಿ ಪಡೆದ ಸಿಬ್ಬಂದಿ ಮತ್ತು ಆಂಬ್ಯುಲೆನ್ಸ್ ಅನ್ನು ಸ್ಥಳದಲ್ಲಿ ನಿಯೋಜಿಸಬೇಕು

ಇದನ್ನೂ ಓದಿ : Corona increase: ಕರ್ನಾಟಕದಲ್ಲಿ ಜಾರಿಯಾಗತ್ತಾ ಟಫ್‌ ರೂಲ್ಸ್:‌ ಇಂದು ಹೈ ವೋಲ್ಟೆಜ್‌ ಮೀಟಿಂಗ್‌

ಇದನ್ನೂ ಓದಿ : Mask Demand Price Hike : ಭಾರತದಲ್ಲಿ ಮತ್ತೆ ಕೊರೊನಾ ಆತಂಕ : ಹೆಚ್ಚಾಯ್ತು ಮಾಸ್ಕ್‌ಗಳಿಗೆ ಬೇಡಿಕೆ, ಬೆಲೆ ಏರಿಕೆ

(New year- corona rules) Corona infection which is spreading widely in the country has also made Karnataka worried. Discussions are going on to issue guidelines for Corona control in Karnataka, Corona Technical Advisory Committee has held a special meeting for Corona control and has recommended some points for New Year celebrations.

Comments are closed.