Ration Card Update : ಮನೆಯಲ್ಲೇ ಕುಳಿತು ರೇಷನ್‌ ಕಾರ್ಡ್‌ಗೆ ಹೊಸ ಸದಸ್ಯರ ಸೇರ್ಪಡೆ ಮಾಡಿ

ನವದೆಹಲಿ : ಮೋದಿ ಸರಕಾರ ದೇಶದ ಬಡವರಿಗೆ ಸಹಾಯವಾಗಲೆಂದು ಉಚಿತ ಆಹಾರಧಾನ್ಯವನ್ನು ವಿತರಿಸಲಾಗುತ್ತಿದೆ. ಅದರಂತೆ ಸರಕಾರಿ ಯೋಜನೆಗಳನ್ನು ಪಡೆಯಲು ರೇಷನ್‌ ಕಾರ್ಡ್‌ (Ration Card Update) ಮುಖ್ಯವಾದ ದಾಖಲೆ ಆಗಿದೆ. ಅಷ್ಟೇ ಅಲ್ಲದೇ ಕೆಲವು ರಾಜ್ಯಗಳಲ್ಲಿ ಕೈಗೆಟುಕುವ ಬೆಲೆಯಲ್ಲಿ ಆಹಾರ ಧಾನ್ಯ ಪಡೆಯಲು ಕೂಡ ಸಹಾಯವಾಗಿದೆ. ಈ ದಾಖಲೆಯ ವಿಶೇಷತೆ ಎಂದರೆ, ಇದರಲ್ಲಿ ಕುಟುಂಬ ಎಲ್ಲಾ ಸದಸ್ಯರ ವಿವರಗಳನ್ನು ಒಳಗೊಂಡಿರುತ್ತದೆ. ಕುಟುಂಬ ಸದಸ್ಯರನ್ನು ಆಧರಿಸಿ ಪ್ರಮಾಣಾನುಸಾರವಾಗಿ ಆಹಾರ ಧಾನ್ಯವನ್ನು ನೀಡಲಾಗುತ್ತದೆ.

ಇನ್ನೂ ಕೆಲವು ಸಂದರ್ಭಗಳಲ್ಲಿ ಕುಟುಂಬ ಸದಸ್ಯರ ಸಂಖ್ಯೆ ಹೆಚ್ಚಾಗುತ್ತದೆ. ಅದು ಹೇಗೆ ಅಂದರೆ ವಿವಾಹ ಅಥವಾ ಮಗು ಜನಿಸಿದಾಗ ಕುಟುಂಬಕ್ಕೆ ಹೊಸ ಸದಸ್ಯರ ಸೇರ್ಪಡೆಯಾಗುತ್ತದೆ. ತಮ್ಮ ಕುಟುಂಬಕ್ಕೆ ಹೊಸ ಸದಸ್ಯರು ಬಂದು ಮೇಲೆ ಕೂಡ ಬಹಳ ಸಮಯದವರೆಗೆ ರೇಷನ್‌ ಕಾರ್ಡ್‌ಗೆ ಅವರನ್ನು ಸೇರಿಸಿಯೇ ಇರುವುದಿಲ್ಲ. ಕಾರಣವೆನೆಂದರೆ ಇದರ ಬಗ್ಗೆ ಬಹುತೇಕರಿಗೆ ಅರಿವು ಇರುವುದಿಲ್ಲ.

ಇದೀಗ ರೇಷನ್‌ ಕಾರ್ಡ್‌ಗೆ ಹೊಸ ಸದಸ್ಯರನ್ನು ಸೇರಿಸುವ ಪ್ರಕ್ರಿಯೆ ಇನ್ನಷ್ಟು ಸರಳವಾಗಿದೆ. ಹಾಗಾಗಿ ಮನೆಯಲ್ಲಿ ಕುಳಿತು ಆನ್‌ಲೈನ್‌ ಮೂಲಕ ಹೊಸ ಸದಸ್ಯರನ್ನು ಸೇರ್ಪಡೆ ಮಾಡಬಹುದಾಗಿದೆ.ಇದಕ್ಕಾಗಿ ಈ ಕೆಳಗಿನ ಸರಳ ವಿಧಾನಗಳನ್ನು ಅನುಸರಿಸಬೇಕಾಗಿದೆ. ಪಡಿತರ ಕಾರ್ಡ್‌ಗೆ ಹೊಸ ಸದಸ್ಯರನ್ನು ಸೇರಿಸುವ ಮೊದಲು ಆಧಾರ್‌ ಕಾರ್ಡ್‌ ತಿದ್ದುಪಡಿಯನ್ನು ಮಾಡಬೇಕಾಗುತ್ತದೆ.

ಮದುವೆಯ ನಂತರ ಮಹಿಳೆ ತನ್ನ ತಂದೆಯ ಹೆಸರಿನ ಬದಲು ಗಂಡನ ಹೆಸರನ್ನು ಹಾಕಿ ಆಧಾರ್‌ ಕಾರ್ಡ್‌ನ್ನು ನವೀಕರಿಸಬೇಕಾಗುತ್ತದೆ. ನಂತರ ಹೊಸ ಆಧಾರ್‌ ಕಾರ್ಡ್‌ನ್ನು ಆಹಾರ ಇಲಾಖೆಯ ಅಧಿಕಾರಿಗೆ ನೀಡಬೇಕು. ಹಾಗೆಯೇ ಹಳೆಯ ಪಡಿತರ ಚೀಟಿಯಿಂದ ಹೆಸರನ್ನು ತೆಗೆದು ಹಾಕಿ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬೇಕಾಗಿದೆ. ಇದರ ಮೊದಲು ನಿಮ್ಮ ಮೊಬೈಲ್‌ ಸಂಖ್ಯೆಯನ್ನು ನಿಮ್ಮ ರೇಷನ್‌ ಕಾರ್ಡ್‌ಗೆ ನೋಂದಾಯಿಸಬೇಕಾಗಿದೆ.

ರೇಷನ್‌ ಕಾರ್ಡ್‌ಗೆ ಮೊಬೈಲ್‌ ನಂಬ್ರ ಲಿಂಕ್‌ ಮಾಡುವ ವಿಧಾನ :
ಪಡಿತರ ಚೀಟಿಗೆ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಿದರೆ ಮಾತ್ರ, ಆನ್‌ಲೈನ್‌ ಮೂಲಕ ಹೊಸ ಸದಸ್ಯರ ಹೆಸರನ್ನು ಸೇರ್ಪಡೆ ಮಾಡಿಕೊಳ್ಳಬಹುದು. ಇಲ್ಲಿ ತಿಳಿಸಿರುವ ವಿಧಾನ ಅನುಸರಿಸುವ ಮೂಲಕ ಮೊಬೈಲ್‌ ನಂಬರ್‌ ಲಿಂಕ್ ಮಾಡಬಹುದು. ಮೊದಲು ಸರಕಾರದ ಅಧಿಕೃತ ವೆಬ್‌ಸೈಟ್‌ ಆದ https://nfs.delhi.gov.in/Citizen/UpdateMobileNumber.aspx ಗೆ ಭೇಟಿ ನೀಡಬೇಕು. ಇಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನವೀಕರಿಸುವ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲ್ಲಿ ಆಧಾರ್ ಸಂಖ್ಯೆಯನ್ನು ಕೇಳಲಾಗುತ್ತದೆ. ಇಲ್ಲಿ ಮನೆಯ ಮುಖ್ಯಸ್ಥರ ಆಧಾರ್ ಕಾರ್ಡ್ ಸಂಖ್ಯೆಯನ್ನು ಭರ್ತಿ ಮಾಡಬೇಕು.

ಇದನ್ನೂ ಓದಿ : PAN Card News : ಪ್ಯಾನ್‌ ಬಳಕೆದಾರರು ಎರಡು ಪ್ಯಾನ್‌ ಕಾರ್ಡ್‌ ಬಳಸುತ್ತಿದ್ದರೆ ಎಚ್ಚರ !

ಇದನ್ನೂ ಓದಿ : Online Gas Booking : ಆನ್‌ಲೈನ್‌ನಲ್ಲಿ ಸಿಲಿಂಡರ್‌ ಬುಕಿಂಗ್‌ ಮಾಡಿ ಕ್ಯಾಶ್‌ಬ್ಯಾಕ್‌ ಗಳಿಸಿ

ಇದನ್ನೂ ಓದಿ : Twitter CEO Post : ಟ್ವಿಟರ್ ಸಿಇಒ ಹುದ್ದೆಗೆ ಅರ್ಜಿ ಸಲ್ಲಿಸಿದ ‘ಇಮೇಲ್‌ನ ಸಂಶೋಧಕ’ ಶಿವ ಅಯ್ಯದುರೈ

ಎರಡನೇ ಕಾಲಂನಲ್ಲಿ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಬೇಕು. ಮೂರನೇ ಕಾಲಂನಲ್ಲಿ ಮನೆಯ ಮುಖ್ಯಸ್ಥರ ಹೆಸರನ್ನು ಭರ್ತಿ ಮಾಡಿ ನಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನು ಭರ್ತಿ ಮಾಡಬೇಕು. ಈಗ ನಿಮ್ಮ ಪಡಿತರ ಚೀಟಿಗೆ ನಿಮ್ಮ ಮೊಬೈಲ್‌ ಸಂಖ್ಯೆ ಲಿಂಕ್‌ ಆಗಿರುತ್ತದೆ. ಅಷ್ಟೇ ಅಲ್ಲದೇ ರೇಷನ್ ಕಾರ್ಡ್ ನಲ್ಲಿ ಹೆಸರು, ವಿಳಾಸ ಸೇರಿದಂತೆ ಇತರ ಕೆಲವು ವಿವರಗಳು ತಪ್ಪಾಗಿದ್ದರೆ ಅದನ್ನೂ ಆನ್‌ಲೈನ್‌ ಮೂಲಕವೇ ಸರಿಪಡಿಸಬಹುದು.

Ration Card Update : Add new member to ration card sitting at home

Comments are closed.