ಕೊರೊನಾ ಮಹಾಸ್ಪೋಟ : ಬೆಂಗಳೂರಲ್ಲಿ 1,039, ಉಡುಪಿಯಲ್ಲಿ 170 ಮಂದಿಗೆ ಕೊರೊನಾ ಸೋಂಕು

ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಬೆಂಗಳೂರು ಮತ್ತು ಉಡುಪಿಯಲ್ಲಿ ಕೊರೊನಾ ಸ್ಪೋಟ ಸಂಭವಿಸಿದೆ. ರಾಜ್ಯದಲ್ಲಿಂದು ಬರೋಬ್ಬರಿ 1,715 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಸಿಲಿಕಾನ್ ಸಿಟಿ ಬೆಂಗಳೂರಲ್ಲಿಂದು ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಸಾವಿರದ ಗಡಿದಾಟಿದ್ರೆ, ಉಡುಪಿ ಜಿಲ್ಲೆಯಲ್ಲಿ 170 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇನ್ನು ಮೈಸೂರು, ಬೀದರ್ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿಂದು ಅತೀ ಹೆಚ್ಚು ಸಂಖ್ಯೆಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

ಬೆಂಗಳೂರು 1,039, ಉಡುಪಿ 170, ಮೈಸೂರು 70, ಬೀದರ್ 61, ದಕ್ಷಿಣ ಕನ್ನಡ 54, ಕಲಬುರಗಿ 41, ಹಾಸನ 40, ತುಮಕೂರು 38, ಬೆಂಗಳೂರು ಗ್ರಾಮಾಂತರ 32, ಧಾರವಾಡ 24, ಬೆಳಗಾವಿ 20, ವಿಜಯಪುರ 20, ಮಂಡ್ಯ 15, ಬಳ್ಳಾರಿ 11, ಉತ್ತರ ಕನ್ನಡ 11, ಕೋಲಾರ 10, ಕೊಡಗು 9, ಚಿಕ್ಕಬಳ್ಳಾಪುರ 9, ದಾವಣಗೆರೆ 8, ರಾಯಚೂರು 6, ಗದಗ 5, ಚಿಕ್ಕಮಗಳೂರು 5, ಚಾಮರಾಜನಗರ 4, ಶಿವಮೊಗ್ಗ 4, ಚಿತ್ರದುರ್ಗ 3, ಯಾದಗಿರಿಯಲ್ಲಿ 3, ಬಾಗಲಕೋಟೆ 1, ಹಾವೇರಿ 1, ರಾಮನಗರದಲ್ಲಿ ಒಂದು ಪ್ರಕರಣ ದಾಖಲಾಗಿದೆ.

ರಾಜ್ಯದಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 9,70,202ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿಂದು ಒಟ್ಟು 13,493 ಸಕ್ರಿಯ ಪ್ರಕರಣಗಳಿದ್ದು, 137 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

Comments are closed.