ಉಡುಪಿಯಲ್ಲೊಂದು ವಿಶಿಷ್ಟವಾದ ಕ್ರಿಕೆಟ್ ಮ್ಯಾಚ್ : ಗೆದ್ದವರಿಗೆ ಸಿಗುತ್ತೆ ಪೆಟ್ರೋಲ್, ಡಿಸೇಲ್ ಬಹುಮಾನ…!!!!

ಉಡುಪಿ : ಕ್ರಿಕೆಟ್ ಲೋಕದಲ್ಲಿ ದಿನಕ್ಕೊಂದು ಪರಿವರ್ತನೆ ನಡೆಯುತ್ತಿದೆ. ಅದ್ರಲ್ಲೂ ಇತ್ತೀಚಿನ ದಿನಗಳಲ್ಲಂತೂ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೆದ್ದವರಿಗೆ ವಿಶಿಷ್ಟವಾದ ಬಹುಮಾನ ನೀಡೋದು ಮಾಮೂಲಾಗ್ತಿದೆ. ಅಂತೆಯೇ ಉಡುಪಿಯಲ್ಲಿ ನಡೆಯುತ್ತಿರುವ ಕ್ರಿಕೆಟ್ ಪಂದ್ಯಾವಳಿಯಲ್ಲಿನ ಲಕ್ಕಿಡಿಪ್ ಗೆದ್ದವರಿಗೆ ಲೀಟರ್ ಗಟ್ಟಲೆ ಪೆಟ್ರೋಲ್, ಡಿಸೇಲ್ ನ್ನು ಬಹುಮಾನವಾಗಿ ಘೋಷಿಸಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆಯಷ್ಟೇ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೆದ್ದವರಿಗೆ ಡ್ರಿಂಕ್ಸ್, ಕೋಳಿ, ಕುರಿಯನ್ನು ಬಹುಮಾನವಾಗಿ ಘೋಷಣೆ ಮಾಡಿದ್ರು. ಆದರೆ ಪಂದ್ಯಾವಳಿ ಕೊನೆಯ ಹಂತದಲ್ಲಿ ಕ್ಯಾನ್ಸಲ್ ಆಗಿತ್ತು. ಆದ್ರೀಗ ಉಡುಪಿಯ ಎಂಜಿಎಂ ಫ್ರೆಂಡ್ಸ್ ತಂಡ ವಿಭಿನ್ನವಾಗಿರುವ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದೆ.

ಮೊದಲ ಬಹುಮಾನವನ್ನು ಪಡೆಯುವರು 10 ಲಿ ಪೆಟ್ರೋಲ್, ದ್ವೀತಿಯ ಬಹುಮಾನವಾಗಿ 5 ಲೀ ಡಿಸೇಲ್ ಹಾಗೂ ತೃತೀಯ ಬಹುಮಾನವಾಗಿ 3ಲೀ ಗ್ಯಾಸ್ ಸಿಗಲಿದೆ.

https://kannada.newsnext.live/leopard-arrested-room-nailadi-near-udupi/

ಹೊನಲು ಬೆಳಕಿನಲ್ಲಿ ನಡೆಯಲಿರುವ ಪಂದ್ಯಾವಳಿಗೆ ಈಗಾಗಲೇ ಸಾಕಷ್ಟು ಮಂದಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ. ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಗಗನಕ್ಕೇರುತ್ತಿರುವ ಹೊತ್ತಲ್ಲೇ ಪೆಟ್ರೋಲ್, ಡಿಸೇಲ್ ಹಾಗೂ ಗ್ಯಾಸ್ ನ್ನೇ ಬಹುಮಾನವಾಗಿ ನೀಡುತ್ತಿರೋದು ಕುತೂಹಲ ಮೂಡಿಸಿದೆ.

https://kannada.newsnext.live/bollywood-sonusood-spicejet-photo-respect-humanitywork/

Comments are closed.