Karnataka Covid-19 Live Updates : ಬೆಂಗಳೂರು, ಉಡುಪಿ, ದ.ಕ, ಮೈಸೂರಲ್ಲಿ ಕೊರೊನಾ ಬ್ಲಾಸ್ಟ್‌ : ಸಕ್ರೀಯ ಪ್ರಕರಣಗಳ ಸಂಖ್ಯೆ 49,602 ಕ್ಕೆ ಏರಿಕೆ

Karnataka Covid-19 Live Updates ಬೆಂಗಳೂರು : ಕರ್ನಾಟಕದಲ್ಲಿಂದು ಕೊರೊನಾ ಮಹಾಸ್ಪೋಟವೇ ಸಂಭವಿಸಿದೆ. ಒಂದೇ ದಿನ ಬರೋಬ್ಬರಿ 12 ಸಾವಿರ ಕೊರೊನಾ ಪ್ರಕರಣ ದಾಖಲಾಗಿದೆ. ಬೆಂಗಳೂರಲ್ಲಿ 9020, ಮೈಸೂರಲ್ಲಿ 398, ಉಡುಪಿಯಲ್ಲಿ 340 ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 298 ಹೊಸ ಕೊರೊನಾ ಪ್ರಕರಣ ದಾಖಲಾಗಿದ್ದು, ಪಾಸಿಟಿವಿಟಿ ದರ ಶೇ.10 ಕ್ಕೆ ಏರಿಕೆ ಕಂಡಿದೆ. ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ಇಂದು 9020 ಹೊಸ ಪ್ರಕರಣ ದಾಖಲಾಗಿದ್ದು, ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ 1299319 ಕ್ಕೆ ಏರಿಕೆಯಾಗಿದೆ. ಅಲ್ಲದೇ ಸಕ್ರೀಯ ಪ್ರಕರಣಗಳ ಸಂಖ್ಯೆಯಲ್ಲಿಯೂ ಭಾರೀ ಏರಿಕೆ ಕಂಡಿದ್ದು, ಬೆಂಗಳೂರಲ್ಲಿ ಸಕ್ರೀಯ ಪ್ರಕರಣಗಳ ಸಂಖ್ಯೆ 40507ಕ್ಕೆ ಏರಿಕೆಯಾಗಿದೆ.

ಇನ್ನು ಅರಮನೆ ನಗರಿ ಮೈಸೂರಿನಲ್ಲಿ ಕೊರೊನಾ ಮಹಾಸ್ಪೋಟ ಸಂಭವಿಸಿದೆ. ಇಂದು ಒಂದೇ ದಿನ ಬರೋಬ್ಬರಿ 398 ಹೊಸ ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ಸಕ್ರೀಯ ಪ್ರಕರಣಗಳ ಸಂಖ್ಯೆ 1052ಕ್ಕೆ ಏರಿಕೆಯನ್ನು ಕಂಡಿದೆ. ಇತ್ತ ಕರಾವಳಿ ಜಿಲ್ಲೆಗಳಲ್ಲಿಯೂ ಕೊರೊನಾ ಆರ್ಭಟಿಸುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಇಂದು ಒಂದೇ ದಿನ ಬರೋಬ್ಬರಿ 340 ಹೊಸ ಕೊರೊನಾ ಪ್ರಕರಣ ದಾಖಲಾಗಿದೆ. ಈ ಮೂಲಕ ಸಕ್ರೀಯ ಪ್ರಕರಣಗಳ ಸಂಖ್ಯೆ 979ಕ್ಕೆ ಏರಿಕೆಯಾಗಿದೆ. ಜೊತೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಮೂರನೇ ಆತಂಕವನ್ನು ತಂದೊಡ್ಡುತ್ತಿದೆ. ದಿನೇ ದಿನೇ ಸೋಂಕಿತ ಪ್ರಕರಣ ಸಂಖ್ಯೆ ಏರಿಕೆ ಕಾಣುತ್ತಿದ್ದು, ಇಂದು 298 ಹೊಸ ಕೊರೊನಾ ಸೋಂಕಿತ ಪ್ರಕರಣ ದಾಖಲಾಗುವ ಮೂಲಕ ಜಿಲ್ಲೆಯಲ್ಲಿ ಒಟ್ಟು 1267 ಸಕ್ರೀಯ ಪ್ರಕರಣಗಳಿವೆ. ಸಕ್ಕರೆ ನಾಡು ಮಂಡ್ಯದಲ್ಲಿಯೂ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಇಂದು ಜಿಲ್ಲೆಯಲ್ಲಿ ಒಟ್ಟು 261 ಹೊಸ ಕೊರೊನಾ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ಸಕ್ರೀಯ ಪ್ರಕರಣಗಳ ಸಂಖ್ಯೆಯಲ್ಲಿಯೂ ಏರಿಕೆ ಕಂಡಿದ್ದು, 734ಕ್ಕೆ ಏರಿದೆ.

ಉಳಿದಂತೆ ರಾಜ್ಯದ ಶಿವಮೊಗ್ಗದಲ್ಲಿ 198, ತುಮಕೂರು 190, ಹಾಸನ 182, ಧಾರವಾಡ 147, ಬಳ್ಳಾರಿ 107, ಬೆಳಗಾವಿ 105, ಬೆಂಗಳೂರು ಗ್ರಾಮಾಂತರ 98, ಕಲಬುರಗಿ 98, ಉತ್ತರ ಕನ್ನಡ 94, ಕೋಲಾರ 83, ಚಿಕ್ಕಮಗಳೂರು 78, ಚಿಕ್ಕಬಳ್ಳಾಪುರ 44, ವಿಜಯಪುರ 49, ದಾವಣಗೆರೆ 30, ಕೊಡಗು 29, ಚಾಮರಾಜನಗರ 26, ಚಿತ್ರದುರ್ಗ 24, ಬೀದರ್‌ 20, ರಾಮನಗರ 20, ಕೊಪ್ಪಳ 19, ಬಾಗಲಕೋಟೆ 10, ಯಾದಗಿರಿ 10, ಹಾವೇರಿ 8, ಗದಗ 7 ಹಾಗೂ ರಾಯಚೂರಿನಲ್ಲಿ ಇಂದು 7 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿದೆ.

ಇದನ್ನೂ ಓದಿ : ಓಮಿಕ್ರಾನ್​ ರೂಪಾಂತರಿಯ ವಿರುದ್ಧ ಬಟ್ಟೆ ಮಾಸ್ಕ್​ ಪರಿಣಾಮಕಾರಿಯಲ್ಲ : ಅಧ್ಯಯನ

ಇದನ್ನೂ ಓದಿ : ರಾಜ್ಯದಲ್ಲಿ ಕೊರೋನಾ ಸೋಂಕಿನ ನಾಗಾಲೋಟ: ಒಟ್ಟು 12 ಸಾವಿರ ಪ್ರಕರಣ ದಾಖಲು

(Karnataka Covid-19 Live Updates : Corona Blast rises to 49,602 in Bangalore, Udupi, Dakshin Kannada, Mysore)

Comments are closed.