Mouni Roy : ಬೀಚ್‌ನಲ್ಲಿ ಮೌನಿ ರಾಯ್ ಬಿಕನಿ ಅವತಾರಕ್ಕೆ ಫ್ಯಾನ್ಸ್ ಫಿದಾ

ಬಾಲಿವುಡ್ ಬೆಡಗಿ‌ ಮೌನಿರಾಯ್ (Mouni Roy) ಸದಾ ಟ್ರಿಪ್ ನಿಂದಲೇ ಸುದ್ದಿಯಾಗುತ್ತಾರೆ. ಕೆಲಸ,ನಟನೆ ಗಿಂತ ಜಾಸ್ತಿ ಸಮಯವನ್ನು ಪ್ರವಾಸದಲ್ಲೇ ಕಳೆಯುವ ಮೌನಿ ರಾಯ್ ಗೆ ಬೀಚ್ , ಮರಳು ಹಾಗೂ ಬಿಸಿಲು ಇಷ್ಟವಂತೆ. ಮರಳಿ ಮೈಚಾಚಿ ಮಲಗಿ ಎಂಜಾಯ್ ಮಾಡೋ ಮೌನಿ ಸೋಷಿಯಲ್ ಮೀಡಿಯಾದಲ್ಲಿ ಸದಾ ತಮ್ಮ ಪ್ರವಾಸದ ಅಪ್ಡೇಟ್ ಮಾಹಿತಿ ನೀಡುತ್ತಲೇ ಇರುತ್ತಾರೆ. ಮೌನಿ ರಾಯ್ ಸೋಷಿಯಲ್ ‌ಮೀಡಿಯಾ ಅಕೌಂಟ್ ತುಂಬ ಅವರ ಹಾಟ್ ಮತ್ತು ಬೋಲ್ಡ್ ಪೋಟೋಗಳೇ ತುಂಬಿಕೊಂಡಿವೆ. ಇದಕ್ಕೆ ಕಾರಣ ಅವರ ಟೂರ್ ಲವ್.

ಹೌದು ಸದಾ ಪ್ರವಾಸಕ್ಕೆ ತೆರಳೋ ಮೌನಿರಾಯ್ ಪ್ರವಾಸಕ್ಕೆ ಹೋದಾಗಲೆಲ್ಲ ಪೋಟೋ ತೆಗೆದುಕೊಳ್ಳೋದಿಕ್ಕೆ ಹಾಗೂ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡೋದಿಕ್ಕೆ ಮರೆಯೋದಿಲ್ಲ. ಹೀಗಾಗಿ ಮೌನಿ ಫಾಲೋವರ್ಸ್ ಕೂಡಾ ಅವರ ಹಾಟ್ ಹಾಟ್ ಪೋಟೋ ನೋಡೋಕೆ ಕಾಯ್ತಾ ಇರ್ತಾರೆ. ಇಂತಿಪ್ಪ ಮೌನಿ ಮೊನ್ನೆ ಮೊನ್ನೆಯಷ್ಟೇ ಕಾಲಿಟ್ಟ ಹೊಸ ವರ್ಷವನ್ನು ಸಖತ್ ಎಂಜಾಯ್ ಮಾಡ್ಕೊಂಡು ಪ್ರವಾಸಿ ತಾಣದಲ್ಲೇ ಸ್ವಾಗತಿಸಿದ್ದಾರೆ.

ನಟಿ ಹಾಗೂ ಸ್ನೇಹಿತೆ ಅಶ್ಕಾ ಜೋರಾಡಿಯಾ ಜೊತೆ ಮೌನಿ ರಾಯ್ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ. ಮಾತ್ರವಲ್ಲ ಬೀಚ್ ನಲ್ಲಿ ಇದ್ದೇನೆ ಎನ್ನುವ ಚಿರ ತರ ವಿನ್ಯಾಸದ ಬಿಕನಿ ತೊಟ್ಟು ಪೋಸ್ ಕೊಟ್ಟಿದ್ದಾರೆ. ಹೊಸ ವರ್ಷದ ಮೊದಲ‌ ದಿನವೇ ಮೌನಿರಾಯ್ ಹಾಟ್ ಪೋಟೋಸ್ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

ಕನ್ನಡದ ಸೂಪರ್ ಹಿಟ್ ಸಿನಿಮಾ ಕೆಜಿಎಫ್ ನ ಗಲಿ ಗಲೀ ಹಾಡಿಗೆ ಮೈಬಳುಕಿಸಿದ್ದ ಮೌನಿ ರಾಯ್ ಬಾಲಿವುಡ್ ಹಾಗೂ ಹಿಂದಿ ಕಿರುತೆರೆಯ ಮೂಲಕ ಕೆರಿಯರ್ ಆರಂಭಿಸಿದ್ದರು. ಹಿಂದಿಯ ನಾಗಿನ್ ಸೀರಿಯಲ್‌ಮೌನಿಗೆ ಹೆಸರು ತಂದುಕೊಟ್ಟಿತ್ತು. ಬೋಲ್ಡ್ ನಡೆಯಿಂದಲೇ ಅಭಿಮಾನಿಗಳನ್ನು ಗಳಿಸಿರೋ‌ಮೌನಿ ತಮ್ಮ ಹಾಟ್ ಪೋಸ್ ಗಳಿಂದಲೇ ಪಡ್ಡೆಗಳ ಹೃದಯ ಕದ್ದಿದ್ದಾರೆ.

ತಮ್ಮ ಬಹುಕಾಲದ ಸ್ನೇಹಿತ ಸೂರಜ್ ನಂಬಿಯಾರ್ ಜೊತೆ ಮೌನಿ ರಾಯ್ ವಿವಾಹಬಂಧನಕ್ಕೆ‌ಕಾಲಿರಿಸಲಿದ್ದು, ಇದೇ ವರ್ಷದ ಫೆಬ್ರವರಿಯಲ್ಲಿ ಮೌನಿ ರಾಯ್ ಮದುವೆ ನಡೆಯಲಿದೆ ಎನ್ನಲಾಗುತ್ತಿದೆ. ಸೂರಜ್ ನಂಬಿಯಾರ್ ಉದ್ಯಮಿಯಾಗಿದ್ದು ಸದ್ಯ ದುಬೈನಲ್ಲಿ ವಾಸವಾಗಿದ್ದಾರಂತೆ. ಇತ್ತೀಚಿಗಷ್ಟೇ ಮೌನಿ ರಾಯ್ ದುಬೈ ಪ್ರವಾಸ ಕೈಗೊಂಡಿದ್ದು, ಸೂರಜ್ ಶಾಪಿಂಗ್ ಮಾಡಿದ್ದಾರೆ ಎಂದು ಹೇಳಲಾಗಿದೆ.

‌ಇದನ್ನೂ ಓದಿ : ಡ್ಯಾನ್ಸ್​ ರಿಯಾಲಿಟಿ ಶೋ ಜಡ್ಜ್​ ಆದ ನಟಿ ಮೇಘನಾ ರಾಜ್​​​

ಇದನ್ನೂ ಓದಿ : ಬೋಲ್ಡ್ ಲುಕ್ ನಲ್ಲಿ ಕಿಂಗ್ ಖಾನ್ ಪುತ್ರಿ : ಸುಹಾನಾ ಬಾಲಿವುಡ್ ಬರೋದ್ಯಾವ್ಯಾಗ ಅಂದ್ರು ಫ್ಯಾನ್ಸ್

(Mouni Roy bikini photo shared in social media, fans will be full happy)

Comments are closed.