Katrina Kaif – Vicky Kaushal Celebration: ಮದುವೆಯ ತಿಂಗಳ ಸಂಭ್ರಮದಲ್ಲಿ ಕತ್ರೀನಾ ಕೈಫ್–ವಿಕ್ಕಿ ಕೌಶಲ್

ಬಾಲಿವುಡ್ ತಾರಾ ದಂಪತಿ ಕತ್ರೀನಾ ಕೈಫ್ (Katrina Kaif) ಹಾಗೂ ವಿಕ್ಕಿ ಕೌಶಲ್ (Vicky Kaushal) ಮದುವೆಯಾಗಿ ಇಂದಿಗೆ (ಜನವರಿ 9) ಒಂದು ತಿಂಗಳು ಪೂರ್ಣಗೊಂಡಿದೆ. ಈ ಸಂಭ್ರಮದ ಸಂದರ್ಭದಲ್ಲಿ ಇಬ್ಬರೂ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂ (Instagram) ಮೂಲಕ ಸಂಭ್ರಮ ವ್ಯಕ್ತಪಡಿಸಿದ್ದಾರೆ.

‘ಹ್ಯಾಪಿ ವನ್ ಮಂತ್ ಮೈ ಹರ್ಟ್’ ಎಂದು ಕತ್ರೀನಾ ಕೈಫ್‌ ಹೃದಯದ ಇಮೋಜಿಯೊಂದಿಗೆ ಇನ್‌ಸ್ಟಾಗ್ರಾಂನಲ್ಲಿ ಉಲ್ಲೇಖಿಸಿದ್ದು ಇಬ್ಬರೂ ಜತೆಗಿರುವ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ.

ವಿಕ್ಕಿ ಕೌಶಲ್ ಕೂಡ ಇಬ್ಬರೂ ಜತೆಯಾಗಿರುವ ಫೋಟೊ ಪೋಸ್ಟ್ ಮಾಡಿದ್ದು, ‘ಫಾರ್ ಎವೆರ್ ಟು ಗೊ!’ ಎಂದು ಬರೆದುಕೊಂಡಿದ್ದಾರೆ.

ನೇಹಾ ದೂಪಿಯಾ, ವಾಣಿ ಕಪೂರ್ ಸೇರಿದಂತೆ ಬಾಲಿವುಡ್‌ನ ಅನೇಕ ನಟ, ನಟಿಯರೂ ಕತ್ರೀನಾ–ಕೌಶಲ್ ದಂಪತಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಶುಭಾಶಯ ಕೋರಿದ್ದಾರೆ.

ವಿವಾಹವಾಗುವ ಬಗ್ಗೆ ಘೋಷಣೆ ಮಾಡುವ ವರೆಗೂ ವಿಕ್ಕಿ ಕೌಶಲ್ ಹಾಗೂ ಕತ್ರೀನಾ ಕೈಫ್‌ ತಮ್ಮ ನಡುವಣ ಪ್ರೇಮದ ಬಗ್ಗೆ ಗುಟ್ಟುಬಿಟ್ಟುಕೊಟ್ಟಿರಲಿಲ್ಲ. ಕಳೆದ ತಿಂಗಳು ರಾಜಸ್ಥಾನದಲ್ಲಿ ಈ ಜೋಡಿ ಹಸೆಮಣೆ ಏರಿತ್ತು.

‘ನಮ್ಮ ಜೀವನದಲ್ಲಿ ಈ ಕ್ಷಣಕ್ಕೆ ಕಾರಣರಾದ ಎಲ್ಲದಕ್ಕೂ ಮತ್ತು ಎಲ್ಲರಿಗೂ ನಮ್ಮ ಹೃದಯಾಂತರಾಳದ ಪ್ರೀತಿ ಮತ್ತು ಕೃತಜ್ಞತೆಗಳು. ನಾವು ಒಟ್ಟಿಗೆ ಈ ಹೊಸ ಪ್ರಯಾಣವನ್ನು ಪ್ರಾರಂಭಿಸುತ್ತಿರುವಾಗ ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದವನ್ನು ಬಯಸುತ್ತೇವೆ’ ಎಂದು ಮದುವೆ ವೇಳೆ ಕತ್ರೀನಾ ಜೋಡಿ ಅಭಿಮಾನಿಗಳಲ್ಲಿ ಕೋರಿತ್ತು.

ಮದುವೆಯ ಬಳಿಕ ಮಾಲ್ಡೀವ್ಸ್‌ಗೆ ತೆರಳಿ ಹನಿಮೂನ್ ಆಚರಿಸಿಕೊಂಡಿದ್ದ ಈ ಜೋಡಿ ಇತ್ತೀಚೆಗಷ್ಟೇ ಮುಂಬೈಯ ಜುಹೂ ಪ್ರದೇಶದಲ್ಲಿನ ಹೊಸ ಅಪಾರ್ಟ್‌ಮೆಂಟ್‌ನಲ್ಲಿ ವಾಸ್ತವ್ಯ ಆರಂಭಿಸಿತ್ತು.

ವಿಕ್ಕಿ ಕೌಶಲ್ ಸದ್ಯ ‘ಸ್ಯಾಮ್ ಬಹಾದ್ದರೂರ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕತ್ರೀನಾ ಕೂಡ ಹಲವು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ.

(One month for Katrina Kaif and Vicky Kaushal marriage To mark the occasion Katrina Kaif shared a photo with her husband.

Comments are closed.