Corona Rules Break : ಕಾಂಗ್ರೆಸ್ ಗೆ ಪಾದಯಾತ್ರೆ, ಬಿಜೆಪಿಗೆ ವರ್ಕ್ ಶಾಪ್: ಬಡವರಿಗೆ ಮಾತ್ರ ಕೊರೋನಾ ನಿಯಮ ಪ್ರಶ್ನಿಸಿ ಹೈಕೋರ್ಟ್ ಗೆ ದೂರು

ಬೆಂಗಳೂರು : ಒಂದೆಡೆ ಕೊರೋನಾ ಹಾಗೂ ಓಮೈಕ್ರಾನ್ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ರಾಜ್ಯ ಸರ್ಕಾರ ಕೊರೋನಾ ನಿಯಂತ್ರಣಕ್ಕೆ ನೈಟ್ ಕರ್ಪ್ಯೂ ಹಾಗೂ ವೀಕೆಂಡ್ ಕರ್ಪ್ಯೂ ಜಾರಿ ಮಾಡಿದೆ. ಆದರೆ ಈ ನಿಯಮಗಳು ಜನಸಾಮಾನ್ಯರಿಗೆ ಮಾತ್ರ ಅನ್ವಯವಾಗುತ್ತಿದ್ದು, ಕಾಂಗ್ರೆಸ್ ಪಕ್ಷ ಸಾವಿರಾರು ಜನರನ್ನು ಸೇರಿಸಿ ಪಾದಯಾತ್ರೆ ನಡೆಸುತ್ತಿದೆ. ಇನ್ನೊಂದೆಡೆ ಬಿಜೆಪಿ ಕಾರ್ಯಕಾರಿಣಿಗೆ ಸಿದ್ಧವಾಗುತ್ತಿದೆ. ಈ ದ್ವಂದ್ವ ನೀತಿಗೆ ಜನರಿಂದ ಆಕ್ರೋಶ ವ್ಯಕ್ತವಾಗುತ್ತಿದ್ದು, ಸರ್ಕಾರಕ್ಕೆ ಸಂಕಟ ಎದುರಾಗಿದೆ. ಕೊರೋನಾ ನಿಯಮ ಉಲ್ಲಂಘಿಸಿ (Corona Rules Break) ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ಹಾಗೂ ಕ್ರಮ ಜರುಗಿಸದೇ ಮೌನವಾಗಿರುವ ಬಿಜೆಪಿ ಸರ್ಕಾರದ ವಿರುದ್ಧ ಆರ್‌.ಟಿ.ಐ ಕಾರ್ಯಕರ್ತ ರೊಬ್ಬರು ಕೋರ್ಟ್ ಮೆಟ್ಟಿಲೇರಿದ್ದಾರೆ. ಆರ್ ಟಿ ಐ ಕಾರ್ಯಕರ್ತ ಹನುಮೇಗೌಡ ಎಂಬುವರರು, ಗವರ್ನರ್, ಸಿಜೆ ಮತ್ತು ಹೈಕೋರ್ಟ್ ರಿಜಿಸ್ಟ್ರಾರ್ ಗೆ ದೂರು ನೀಡಿದ್ದಾರೆ.

ಸರ್ಕಾರ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ಜಾರಿ ಮಾಡಿದೆ.ಕೊವೀಡ್ ನಿಯಮಾವಳಿಗಳನ್ನ ಅಮಾಯಕ ಜನರ ಮೇಲೆ ಹೇರಿದೆ. ಸಾರ್ವಜನಿಕರಿಗೆ ದಂಡ ಹಾಕಿ, ವಾಹನಗಳ ಜಪ್ತಿ ಮಾಡುತ್ತಿದೆ. ಆದ್ರೆ ಕಾಂಗ್ರೆಸ್ ಪಕ್ಷವು ನೀರಿಗಾಗಿ ನಡಿಗೆ ಹೆಸರಲ್ಲಿ ಸಾವಿರಾರು ಜನರೊಂದಿಗೆ ಮೇಕೆದಾಟು ಪಾದಯಾತ್ರೆ ಮಾಡ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸರ್ಕಾರ, ಕನಕಪುರಕ್ಕೆ ಅನ್ವಯವಾಗುವಂತೆ ಪ್ರತ್ಯೇಕ ಕೊರೊನಾ ನಿಯಮಗಳನ್ನ ಮಾಡಿ ಯಾತ್ರೆ ನಿಲ್ಲಿಸುವ ನಾಟಕವಾಡಿದೆ. ಅಲ್ಲದೇ ಆಡಳಿತ ಪಕ್ಷ ಬಿಜೆಪಿ ದಾವಣಗೆರೆಯಲ್ಲಿ ಪಕ್ಷದ ಕಾರ್ಯಕಾರಿಣಿ ಸಭೆ ನಡೆಸುತ್ತಿದೆ. ಆರ್ ಎಸ್ ಎಸ್ ಚನ್ನೇನಹಳ್ಳಿಯಲ್ಲಿ ಸಭೆ ನಡೆಸಿ ಕೊವೀಡ್ ನಿಯಮಗಳನ್ನ ಗಾಳಿಗೆ ತೂರಿದೆ.

ರಾಜಕೀಯ ಸಭೆಗಳ ನಿಗ್ರಹ ಮತ್ತು ಆದೇಶ ಪಾಲನೆ ಮಾಡಿಸುವಲ್ಲಿ ಸರ್ಕಾರ ವಿಫಲವಾಗಿದೆ.ಆಕಸ್ಮಿಕವಾಗಿ ಆದ ತಪ್ಪಿಗೆ ಕ್ಷಮೆಯಿದೆ,ಅದ್ರೆ ಉದ್ದೇಶ ಪೂರ್ವಕ ತಪ್ಪಿಗೆ ಕ್ಷಮೆ ಕೊಡಬಾರದು. ಕೊವೀಡ್ ನಿಯಮಾವಳಿ ಪಾಲಿಸದ ಶಾಸಕರು, ಮಂತ್ರಿಗಳು, ಸಂಸದರು ಹಾಗೂ ಸರ್ಕಾರದ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಆಗ್ರಹಿಸಲಾಗಿದೆ.

ಇನ್ನು ಸರ್ಕಾರ ಬಡವರಿಗೆ, -ಜನಸಾಮಾನ್ಯರಿಗೆ ಕೊರೋನಾ ರೂಲ್ಸ್ ಪಾಲಿಸುವಂತೆ ಒತ್ತಡ ಹೇರಿ ದಂಡ ವಿಧಿಸುತ್ತಿದ್ದು, ದಿನಗೂಲಿ ನೌಕರರ, ವ್ಯಾಪಾರಸ್ಥರ ದುಡಿಮೆ‌ ಕಿತ್ತುಕೊಂಡಿದೆ. ಆದರೆ ಸರ್ಕಾರದ ರಾಜಕೀಯ ಕಾರ್ಯಕ್ರಮ, ಮದುವೆ ಹಬ್ಬ, ಉತ್ಸವಗಳು ಅವ್ಯಾಹತವಾಗಿ ಸಾಗಿದೆ. ಹೀಗಾಗಿ ರಾಜ್ಯದಲ್ಲಿ ರಾಜಕಾರಣಿಗಳಿಗೆ ಒಂದು ನೀತಿ, ಬಡವರಿಗೆ ಒಂದು ನೀತಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಹೀಗಿರುವಾಗಲೇ ಈ ದೂರು ಈಗ ಹೈಕೋರ್ಟ್ ಮೆಟ್ಟಿಲೇರಿದ್ದು ನ್ಯಾಯಾಲಯ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ : ಡೇಂಜರ್ ಝೋನ್ ನಲ್ಲಿದೆ ಬೆಂಗಳೂರು: ಎಲ್ಲೆಲ್ಲಿ ಎಷ್ಟಿದೆ ಗೊತ್ತಾ ಪಾಸಿಟಿವಿಟಿ ರೇಟ್ ?!

ಇದನ್ನೂ ಓದಿ : ಸಿಎಂ, ಶಿಕ್ಷಣ ಸಚಿವರಿಗೆ ಸ್ಪಷ್ಟತೆಯ ಕೊರತೆ : ಗೊಂದಲದಲ್ಲಿದೆ ರಾಜ್ಯದ ಶಾಲಾ ಭವಿಷ್ಯ

(corona rules Break : mekedatu to Congress, workshop to BJP : complain to High Court)

Comments are closed.