ಮುಂಬೈ: ಕೊರೊನಾ ವೈರಸ್ ಸೋಂಕಿನ ಭೀತಿ ನಡುವಲ್ಲೇ ಕಾಮುಕರ ಅಟ್ಟಹಾಸಕ್ಕೆ ಕಡಿವಾಣ ಬಿದ್ದಿಲ್ಲ. ಅದ್ರಲ್ಲೂ ಮುಂಬೈನಲ್ಲಿ ಶಾಕಿಂಗ್ ಪ್ರಕರಣವೊಂದು ನಡೆದು ಹೋಗಿದೆ. ಕೊರೊನಾ ತಪಾಸಣೆಗೆ ಬಂದ ಯುವತಿಯ ಗಂಟಲು ದ್ರವದ ಸ್ಯಾಂಪಲ್ ಪಡೆಯಬೇಕಾಗಿದ್ದ ಟೆಕ್ನಿಶಿನ್ ಗುಪ್ತಾಂಗದ ಸ್ಯಾಂಪಲ್ ಪಡೆದಿದ್ದಾನೆ.

ಮಹಾರಾಷ್ಟ್ರದ ಅಮರಾವತಿಯಲ್ಲಿ ಈ ಘಟನೆ ನಡೆದಿದೆ. ಮಾಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ 24 ವರ್ಷದ ಯುವತಿ ತನ್ನ ಸಹೋದ್ಯೋಗಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಹೀಗಾಗಿ ಯುವತಿ ಕೂಡ ಕೊರೊನಾ ತಪಾಸಣೆ ಮಾಡಿಸೋದಕ್ಕೆ ಲ್ಯಾಬ್ ಗೆ ಬಂದಿದ್ದಾಳೆ. ಈ ವೇಳೆಯಲ್ಲಿ ಲ್ಯಾಬ್ ಸಿಬ್ಬಂದಿ ಗುಪ್ತಾಂಗದ ಸ್ಯಾಂಪಲ್ ನೀಡುವಂತೆ ಹೇಳಿದ್ದಾನೆ. ಆದರೆ ಯುವತಿ ಆರಂಭದಲ್ಲಿ ಒಪ್ಪಿರಲಿಲ್ಲ. ಕೊರೊನಾ ಪರೀಕ್ಷೆಯನ್ನು ಹೀಗೆ ಮಾಡಬೇಕು. ಎಲ್ಲರೂ ಹೀಗೆ ಮಾಡಿಸಿಕೊಳ್ಳುತ್ತಾರೆ. ಇದರಿಂದಲೇ ಕೊರೊನಾ ಪಾಸಿಟಿವ್ ಅಥವಾ ನೆಗೆಟಿವ್ ತಿಳಿಯುತ್ತದೆ ಅಂತಾ ಹೇಳಿ, ಯುವತಿಯ ಗುಪ್ತಾಂಗದ ಸ್ಯಾಂಪಲ್ ಪಡೆದಿದ್ದಾನೆ.

ಪರೀಕ್ಷೆ ಮುಗಿಸಿ ಮನೆಗೆ ಬಂದ ಯುವತಿಗೆ ಲ್ಯಾಬ್ ಸಿಬ್ಬಂದಿಯ ಮೇಲೆ ಅನುಮಾನ ಮೂಡಿತ್ತು. ಸ್ನೇಹಿತೆಯರ ಜೊತೆ ವಿಷಯವನ್ನು ಹಂಚಿಕೊಂಡಿದ್ದಾರೆ. ಈ ವೇಳೆಯಲ್ಲಿ ಅವರು ಕೂಡ ಗಂಟಲು ದ್ರವದ ಪರೀಕ್ಷೆಯನ್ನಷ್ಟೇ ನಡೆಸುತ್ತಾರೆ ಅಂತಾನೂ ಹೇಳಿದ್ದಾರೆ. ನಂತರ ಯುವತಿ ಸಹೋದರ ವೈದ್ಯರ ಬಳಿಯಲ್ಲಿ ವಿಚಾರಿಸಿದ್ದಾನೆ. ಕೊನೆಗೆ ಯುವತಿ ಲ್ಯಾಬ್ ಸಿಬ್ಬಂದಿಯ ವಿರುದ್ದ ದೂರು ನೀಡಿದ್ದು, ಅತ್ಯಾಚಾರ ಪ್ರಕರಣ ದಾಖಲಾಗಿದೆ.

ಘಟನೆಯ ಬೆನ್ನಲ್ಲೇ ಮಹಾರಾಷ್ಟ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಯಶೋಮತಿ ಠಾಕೂರ್ ಅವರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಅಲ್ಲದೆ ಆರೋಪಿ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.