ಮದ್ಯಪ್ರಿಯರಿಗೆ ಗುಡ್ ನ್ಯೂಸ್ : ಇನ್ಮುಂದೆ ಮನೆ ಬಾಗಿಲಿಗೆ ಬರುತ್ತೆ ಎಣ್ಣೆ

0

ಬೆಂಗಳೂರು : ರಾಜ್ಯ ಸರಕಾರ ಮದ್ಯ ಪ್ರಿಯರಿಗೆ ಗುಡ್ ನ್ಯೂಸ್ ಕೊಡಲು ಗಂಭಿರ ಚಿಂತನೆಯೊಂದನ್ನು ನಡೆಸುತ್ತಿದೆ. ಎಲ್ಲವೂ ಅಂದುಕೊಂಡರೆ ಆದ್ರೆ ರಾಜ್ಯದಲ್ಲಿರುವ ಮದ್ಯಪ್ರಿಯರ ಮನೆ ಬಾಗಿಲಿದೆ ಮದ್ಯ ಸರಬರಾಜು ಆಗಲಿದೆ.

ಹೌದು, ರಾಜ್ಯದಲ್ಲೀಗ ಆನ್ ಲೈನ್ ಮೂಲಕ ಮನೆ ಬಾಗಿಲಿ ಮದ್ಯ ಸರಬರಾಜು ಮಾಡುವ ವಿಚಾರ ಬಾರೀ ಸದ್ದು ಮಾಡುತ್ತಿದೆ. ವೈನ್​ಶಾಪ್​, ಕ್ಲಬ್​, ಸ್ಟಾರ್​ ಹೋಟೆಲ್​, ಬಾರ್​ ಆ್ಯಂಡ್​ ರೆಸ್ಟೋರೆಂಟ್​, ಎಂಎಸ್​ಐಎಲ್​, ವೈನ್​ ಬೋಟಿಕ್​, ಮೈಕ್ರೊ ಬ್ರಿವರಿ, ಮಿಲಿಟರಿ ಕ್ಯಾಂಟೀನ್​ ಸ್ಟೋರ್​ ಸೇರಿ ಒಟ್ಟು 11,037 ಮದ್ಯದಂಗಡಿಗಳಿವೆ.

drinking is injurious to health

ಇದರಿಂದ ಪ್ರತಿ ವರ್ಷ 22,700 ಕೋಟಿ ರೂ. ರಾಜಸ್ವ ಸಂಗ್ರಹ ಆಗುತ್ತಿದೆ. ಒಂದು ವೇಳೆ ಮದ್ಯಮಾರಾಟಕ್ಕೆ ಆನ್​ಲೈನ್​ ವ್ಯವಸ್ಥೆ ಜಾರಿಗೆ ಬಂದರೆ ಸರ್ಕಾರಕ್ಕೆ ಪ್ರತಿ ವರ್ಷ 2,500 ಕೋಟಿ ರೂ. ಹೆಚ್ಚುವರಿ ಆದಾಯ ಬರಲಿದೆ. ಹೀಗಾಗಿ, ಆನ್​ಲೈನ್​ ವ್ಯವಸ್ಥೆಗೆ ರಾಜ್ಯ ಸರ್ಕಾರ ಅನುಮತಿ ನೀಡುವ ಸಾಧ್ಯತೆ ಹೆಚ್ಚಿದೆ.

drinks injures to health

ಲಾಕ್ ಡೌನ್ ವೇಳೆಯಲ್ಲಿಯೇ ಆನ್ ಲೈನ್ ಮೂಲಕ ಮದ್ಯ ಮಾರಾಟಕ್ಕೆ ಸರಕಾರ ಚಿಂತನೆಯನ್ನು ನಡೆಸಿತ್ತು. ಈ ನಡುವಲ್ಲೇ ಸುಪ್ರೀಂ ಕೋರ್ಟ್ ಕೂಡ ರಾಜ್ಯ ಸರಕಾರಗಳು ಆನ್ ಲೈನ್ ಮೂಲಕ ಮದ್ಯ ಮಾರಾಟಕ್ಕೆ ತೀರ್ಮಾನ ತೆಗೆದುಕೊಳ್ಳಬಹುದು ಅಂತಾನೂ ಸೂಚಿಸಿತ್ತು.

ಈ ಹಿನ್ನೆಲೆಯಲ್ಲೀಗ ಹಲವು ರಾಜ್ಯಗಳಲ್ಲಿ ಆನ್ ಲೈನ್ ಮೂಲಕವೇ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದೀಗ ರಾಜ್ಯ ಸರಕಾರ ಕೂಡ ನಷ್ಟವನ್ನು ಸರಿದೂಗಿಸಿಕೊಳ್ಳಲು ಇದೇ ನಿಟ್ಟಿನಲ್ಲಿ ಗಂಭೀರ ಚಿಂತನೆಯನ್ನು ನಡೆಸುತ್ತಿದೆ.

Leave A Reply

Your email address will not be published.