Is NeoCoV a new Covid variant : ಆತಂಕ ಹೆಚ್ಚಿಸಿರುವ ನಿಯೋಕೋವ್​ ವೈರಸ್​ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ

Is NeoCoV a new Covid variant : ಇಡೀ ವಿಶ್ವವೇ ಕಳೆದ ಎರಡು ವರ್ಷಗಳಿಂದ ಕೋವಿಡ್​ ವಿರುದ್ಧದ ಹೋರಾಟದಲ್ಲಿದೆ. ಹೊಸ ಹೊಸ ಕೋವಿಡ್​ ರೂಪಾಂತರಿಗಳು ಆತಂಕವನ್ನು ಇನ್ನಷ್ಟು ಹೆಚ್ಚಿಸಿವೆ. ಈ ಎಲ್ಲದರ ನಡುವೆ ವುಹಾನ್​ ಸಂಶೋಧಕರು ದಕ್ಷಿಣ ಆಫ್ರಿಕಾದಲ್ಲಿ ನಿಯೋಕೋವ್​ ವೈರಸ್​ ಇದೆ ಎಂದು ಹೇಳಿದ್ದು ಇದು ಇಡೀ ವಿಶ್ವಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ನಿಯೋಕೋವ್​​ ಸೋಂಕು ತಗುಲಿದೆ ಮೂವರಲ್ಲಿ ಓರ್ವ ಸಾವನ್ನಪ್ಪಬಹುದು ಎಂದು ವಿಜ್ಞಾನಿಗಳು ಹೇಳಿದ್ದು ಆತಂಕ ದುಪ್ಪಟ್ಟಾಗಿದೆ.


ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ 2012 ಹಾಗೂ 2015ರಲ್ಲಿ ಏಕಾಏಕಿ ಈ ವೈರಸ್ ಕಾಣಿಸಿಕೊಂಡಿತ್ತು. ಇದು ಈಗ ಮತ್ತೊಮ್ಮೆ ದಕ್ಷಿಣ ಆಫ್ರಿಕಾದಲ್ಲಿ ಬಾವಲಿಗಳಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಈ ನಿಯೋಕೋವ್​ ವೈರಸ್ ಕೂಡ ಕೋವಿಡ್​ನ ಲಕ್ಷಣಗಳನ್ನೇ ಹೊಂದಿರುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಆದರೆ ಸಮಾಧಾನಕಾರ ವಿಚಾರವೆಂದರೆ ಇಲ್ಲಿಯವರೆಗೆ ನಿಯೋಕೋವ್​ ವೈರಸ್​ ಕೇವಲ ಪ್ರಾಣಿಗಳಲ್ಲಿ ಮಾತ್ರ ಕಂಡುಬಂದಿದೆ. ಅಂದಹಾಗೆ ಇದು ಕೋವಿಡ್​ ವೈರಸ್​ನ ರೂಪಾಂತರಿಯಲ್ಲ. ಬದಲಾಗಿ ಕೋವಿಡ್​ ಜಾತಿಗೆ ಸೇರಿದಂತಹ ಒಂದು ವೈರಸ್​ ಆಗಿದೆ ವಿಜ್ಞಾನಿಗಳು ಹೇಳಿದ್ದಾರೆ. ಈ ವೈರಸ್​ನ್ನು ಕೋವಿಡ್​ಗಿಂತೂ ಮೊದಲೇ ಪತ್ತೆ ಮಾಡಲಾಗಿತ್ತು.

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಕಂಡುಬಂದಿರುವ ಈ ವೈರಸ್​​ ಕೋವಿಡ್​ 19ಕ್ಕಿಂತ ಸ್ವಲ್ಪ ವಿಭಿನ್ನವಾಗಿ ಸೋಂಕನ್ನು ಹರಡುತ್ತದೆ. ಆದರೆ ಕೋವಿಡ್​ಗೆ ಹೋಲಿಕೆ ಮಾಡದರೆ ನಿಯೋಕೋವ್​ ಅತ್ಯಂತ ವೇಗವಾಗಿ ಹರಡುವ ಸಾಧ್ಯತೆ ಇರುತ್ತದೆ. ಮಾತ್ರಲ್ಲದೇ ನಿಯೋಕೋವ್​ನಿಂದ ಮರಣ ಪ್ರಮಾಣ ಕೂಡ ಹೆಚ್ಚು. ವಿಜ್ಞಾನಿಗಳೇ ನೀಡಿರುವ ಮಾಹಿತಿಯಂತೆ ಮೂವರು ನಿಯೋಕೋವ್​ ಸೋಂಕಿತರಲ್ಲಿ ಒಬ್ಬರು ಸಾವನ್ನಪ್ಪುತ್ತಾರೆ ಎನ್ನಲಾಗಿದೆ.

Is NeoCoV a new Covid variant and should you be worried about it?

ಇದನ್ನು ಓದಿ : Yadiyurappa grand daughter suicide : ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಮೊಮ್ಮಗಳು ಆತ್ಮಹತ್ಯೆಗೆ ಶರಣು

ಇದನ್ನೂ ಓದಿ : BJP vs Siddaramaiah : ಸಿದ್ಧರಾಮಯ್ಯರನ್ನು ವಲಸಿಗರಾಮಯ್ಯ ಎಂದ ಬಿಜೆಪಿ : ಮತ್ತೆ ಶುರುವಾಯ್ತು ಟ್ವೀಟ್ ವಾರ್

Comments are closed.