ಕೋವಿಡ್-19 ಹೊಸ ರೂಪಾಂತರ JN.1: ಕರ್ನಾಟಕದಲ್ಲಿ 24 ಗಂಟೆಯಲ್ಲಿ 2 ಸಾವು 74 ಹೊಸ ಪ್ರಕರಣ ದಾಖಲು

Covid-19 New Variant JN.1: ಕರ್ನಾಟಕ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 74 ಹೊಸ ಪ್ರಕರಣಗಳು ವರದಿಯಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.  ಅಲ್ಲದೇ ಶಾಲೆಗಳಲ್ಲಿ ಮಕ್ಕಳಿಗೆ ಪ್ರತ್ಯೇಕ ಮಾರ್ಗಸೂಚಿಯನ್ನು ಹೊರಡಿಸಲಾಗುವುದು ಎಂದು ಶಿಕ್ಷಣ ಸಚಿವರು ಮಾಹಿತಿ ನೀಡಿದ್ದಾರೆ, 

Covid-19 New Variant JN.1: ದೇಶದಾದ್ಯಂತ ಕೋವಿಡ್-19 ಹೊಸ ರೂಪಾಂತರ JN.1 ಪ್ರಕರಣಗಳ ಸಂಖ್ಯೆಯಲ್ಲಿ ಬಾರೀ ಏರಿಕೆಯಾಗುತ್ತಿದೆ. ಅದ್ರಲ್ಲೂ ಕರ್ನಾಟಕ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 74 ಹೊಸ ಪ್ರಕರಣಗಳು ವರದಿಯಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.  ಅಲ್ಲದೇ ಶಾಲೆಗಳಲ್ಲಿ ಮಕ್ಕಳಿಗೆ ಪ್ರತ್ಯೇಕ ಮಾರ್ಗಸೂಚಿಯನ್ನು ಹೊರಡಿಸಲಾಗುವುದು ಎಂದು ಶಿಕ್ಷಣ ಸಚಿವರು ಮಾಹಿತಿ ನೀಡಿದ್ದಾರೆ,

Covid-19 new variant JN.1 in Karnataka Reported 2 deaths in 24 hours 74 new cases 
Image Credit to Original Source

ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ 6403 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 4680 ಮಂದಿಗೆ RTPCR ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ ಹೊಸದಾಗಿ 74 ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಕೋವಿಡ್‌ ಪಾಸಿಟಿವಿಟಿ ದರ 1.15% ಆಗಿದೆ. ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಇಂದು ಆಸ್ಪತ್ರೆಯಿಂದ ಒಟ್ಟು 44 ಮಂದಿಯನ್ನು ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ : ಕರ್ನಾಟಕದಲ್ಲಿ 8 ಮಂದಿಗೆ ಕೊರೊನಾ ರೂಪಾಂತರಿ JN1 ಸೋಂಕು ದೃಢ

ಸದ್ಯ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 464ಕ್ಕೆ ಏರಿಕೆಯಾಗಿದೆ. ಮೈಸೂರಿನಲ್ಲಿ 51 ವರ್ಷದ ಸೋಂಕಿತ ವ್ಯಕ್ತಿ ಸೇರಿದಂತೆ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಇಬ್ಬರು ರೋಗಿಗಳು ಸಾವನ್ನಪ್ಪಿದ್ದಾರೆ. ಕರ್ನಾಟಕದಲ್ಲಿ ಒಟ್ಟು 464 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ 423 ರೋಗಿಗಳು ಹೋಮ್‌ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸದ್ಯ 41 ಮಂದಿ ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದ್ರಲ್ಲೂ 16 ಮಂದಿ ರೋಗಿಗಳು ಐಸಿಯುನಲ್ಲಿ ಮತ್ತು 25 ರೋಗಿಗಳು ಸಾಮಾನ್ಯ ವಾರ್ಡ್‌ನಲ್ಲಿದ್ದಾರೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 24 ಗಂಟೆಗಳಲ್ಲಿ ಮೈಸೂರಿನಲ್ಲಿ 2, ಮಂಡ್ಯದಲ್ಲಿ 2 ಹಾಗೂ ಚಾಮರಾಜನಗರದಲ್ಲಿ 1 ಪ್ರಕರಣಗಳು ಪತ್ತೆಯಾಗಿವೆ. ಮೈಸೂರಿನಲ್ಲಿ ಒಟ್ಟು 32, ಮಂಡ್ಯದಲ್ಲಿ 5 ಮತ್ತು ಚಾಮರಾಜನಗರದಲ್ಲಿ 4 ಸಕ್ರಿಯ ಪ್ರಕರಣಗಳಿವೆ.

Covid-19 new variant JN.1 in Karnataka Reported 2 deaths in 24 hours 74 new cases 
Image Credit to Original Source

ಇನ್ನು ದಿನ ಕಳೆಯುತ್ತಿದ್ದಂತೆಯೇ ಭಾರತದಲ್ಲಿ ಸಕ್ರೀಯ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ. ಭಾರತದಲ್ಲಿ ಜೆಎನ್.1 ಉಪ-ರೂಪಾಂತರ ಹೆಚ್ಚಳವು ಆತಂಕವನ್ನು ಮೂಡಿಸಿದೆ. ಅದ್ರಲ್ಲೂ ಕೇರಳದಲ್ಲಿ ಮೊದಲ ಬಾರಿಗೆ ಹೊಸ ರೂಪಾಂತರ ಪ್ರಕರಣ ದಾಖಲಾಗಿತ್ತು. ಜೊತೆಗೆ ಕರ್ನಾಟಕ ದಲ್ಲಿಯೂ ಹೊಸ ಕೋವಿಡ್‌ ಪ್ರಕರಣ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಶಾಲಾ ಮಕ್ಕಳಿಗೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಲಿದೆ ಎಂದು ರಾಜ್ಯ ಆರೋಗ್ಯ ಇಲಾಖೆಯ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಇದನ್ನೂ ಓದಿ : ಯುವನಿಧಿ ಯೋಜನೆ ಇಂದಿನಿಂದ ಜಾರಿ : ಅರ್ಜಿ ಸಲ್ಲಿಸುವುದು ಹೇಗೆ ? ಯಾರೆಲ್ಲ ಅರ್ಹರು ?

ಶಾಲೆಗಳಲ್ಲಿ ಕೋವಿಡ್‌ ಹರಡದಂತೆ ವಿದ್ಯಾರ್ಥಿಗಳಿಗೆ ಯಾವ ರೀತಿಯ ಕ್ರಮಕೈಗೊಳ್ಳಬೇಕು ಎಂದು ನಿರ್ಧರಿಸುತ್ತೇವೆ. ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ಈ ಕುರಿತು ಈಗಾಗಲೇ ಚರ್ಚೆಯನ್ನು ನಡೆಸಲಾಗಿದೆ. ಅಲ್ಲದೇ ಶಾಲೆಗೆ ಮಾರ್ಗಸೂಚಿ ಹೊರಡಿಸಲಾಗುತ್ತದೆ ಎಂದಿದ್ದಾರೆ. ಭಾರತದಲ್ಲಿ ಇಂದು ಹೊಸದಾಗಿ ಒಟ್ಟು 594 ಹೊಸ COVID-19 ಪ್ರಕರಣದಾಗಲಿದೆ.

ಕೇರಳದಲ್ಲಿ ಮೂವರು, ಕರ್ನಾಟಕದ ಇಬ್ಬರು ಮತ್ತು ಪಂಜಾಬ್‌ನ ಒಬ್ಬರು ಮೃತಪಟ್ಟಿದ್ದಾರೆ. ಅಲ್ಲದೇ ಕೋವಿಡ್‌ ಪ್ರಕರಣ ಸಂಖ್ಯೆ 5,33,327 ಕ್ಕೆ ಏರಿಕೆ ಆಗಿದೆ. ಬರೋಬ್ಬರಿ 10 ತಿಂಗಳಲ್ಲಿ ಸಕ್ರೀಯ ಪ್ರಕರಣಗಳ ಕರ್ನಾಟಕದಲ್ಲಿ ಸದ್ಯ 105ಕ್ಕೆ ಏರಿಕೆ ಆಗಿದೆ.

Covid-19 new variant JN.1 in Karnataka Reported 2 deaths in 24 hours 74 new cases 

Comments are closed.