Covid Positive case: ಬೆಂಗಳೂರಿಗೆ 2,867 ವಿದೇಶಿ ಪ್ರಯಾಣಿಕರ ಆಗಮನ: 12 ಮಂದಿಗೆ ಕೋವಿಡ್‌ ಸೋಂಕು ದೃಢ

ಬೆಂಗಳೂರು: (Covid Positive case) ಚೀನಾದಲ್ಲಿ ಹೊಸ ರೂಪಾಂತರಿ ಹಾಗೂ ಅತ್ಯಂತ ಅಪಾಯಕಾರಿ ಕೊರೊನಾ ತಳಿ ಪತ್ತೆಯಾದ ಹಿನ್ನಲೆಯಲ್ಲಿ ಚೀನಾದಲ್ಲಿ ಸಾವುಗಳ ಸಂಖ್ಯೆ ದಿನೇ ದಿನೇ ಏರುತ್ತಿದೆ. ಇದರ ಬೆನ್ನಲ್ಲೇ ದೇಶದಲ್ಲೂ ಕೂಡ ಕೊರೊನಾ ಆತಂಕ ಮನೆಮಾಡಿದ್ದು, ರಾಜ್ಯದಲ್ಲಿ ಕೊರೊನಾ ಅತಂಕ ಇನ್ನಷ್ಟು ಹೆಚ್ಚಾಗಿದೆ. ಮೂರು ದಿನದಲ್ಲೇ ರಾಜ್ಯಕ್ಕೆ ವಿದೇಶದಿಂದ 2,867 ಪ್ರಯಾಣಿಕರು ಆಗಮಿಸಿದ್ದು, ಇವರಲ್ಲಿ 12 ಮಂದಿಗೆ ಸೋಂಕು ದೃಡಪಟ್ಟಿದೆ.

ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಪ್ರತಿದಿನ ಸಾವಿರಾರು ಮಂದಿ ಪ್ರಯಾಣಿಕರು ಬಂದು ಹೋಗುತ್ತಿರುತ್ತಾರೆ. ಅಲ್ಲದೇ ಹೊಸ ವರ್ಷ ಸಮೀಪಿಸಿದ ಕಾರಣ ವಿದೇಶಗಳಿಂದಲೂ ಕೂಡ ಪ್ರಯಾಣಿಕರು ರಾಜ್ಯದತ್ತ ಮುಖ ಮಾಡುತ್ತಿದ್ದಾರೆ. ಡಿಸೆಂಬರ್ ತಿಂಗಳ 24ರವರೆಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಒಟ್ಟು 2,867 ಪ್ರಯಾಣಿಕರು ಹೈರಿಸ್ಕ್‌ ದೇಶಗಳಿಂದ ಆಗಮಿಸಿದ್ದಾರೆ. ದುಬೈ, ಥೈಲ್ಯಾಂಡ್‌, ಲಂಡನ್‌, ಸಿಡ್ನಿ, ಮಾಲ್ಡೀವ್ಸ್‌, ಅಬುದಾಬಿ, ಸಿಂಗಾಪುರ, ಫ್ರ್ಯಾಂಕ್‌ ಫರ್ಟ್‌, ಹಾಂಕಾಂಗ್ ದೇಶಗಳಿಂದ ಬಂದಿರುವ ಬರೋಬ್ಬರಿ 12 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ (Covid Positive case) ಎಂಬುದಾಗಿ ಆರೋಗ್ಯ ಇಲಾಖೆ ತಿಳಿಸಿದೆ.

ಕೋವಿಡ್‌ ಮಾರ್ಗಸೂಚಿ ಸೇರಿದಂತೆ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಇದಕ್ಕೂ ಮುಂಚಿತವಾಗಿ ವಿದೇಶಗಳಿಂದ ಬಂದ 2,867 ವಿದೇಶಿ ಪ್ರಯಾಣಿಕರ ಪೈಕಿ ಒಟ್ಟು 12 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದೀಗ 12 ಮಂದಿಯ ಗಂಟಲು ದ್ರವದ ಮಾದರಿಗಳನ್ನು ಜೀನೋಮಿಕ್‌ ಸೀಕ್ವೆನ್ಸಿಂಗ್‌ ಪರೀಕ್ಷೆಗೆ ಕಳುಹಿಸಲಾಗಿದೆ.

ಕೆಲವು ದಿನಗಳಿಂದ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ 13058 ವಿದೇಶಿ ಪ್ರಯಾಣಿಕರ ಗಂಟಲು ದ್ರವ ಸ್ಯಾಂಪಲ್ಸ್ ಗಳನ್ನ ಕಲೆಕ್ಟ್ ಮಾಡಿದ್ದ ಆರೋಗ್ಯ ಇಲಾಖೆಯು ಅವರ ಪೈಕಿ 241 ಸೋಂಕಿತರ ಗಂಟಲು ದ್ರವ ಮಾದರಿಗಳನ್ನು ಜೀನೋಮಿಕ್‌ ಸೀಕ್ವೆನ್ಸಿಂಗ್‌ ಪರೀಕ್ಷೆಗೆ ಕಳುಹಿಸಲಾಗಿದ್ದು, ಇಂದು ಅದರ ಕುರಿತಾಗಿ ವರದಿ ಆರೋಗ್ಯ ಇಲಾಖೆಯ ಕೈ ಸೇರಲಿದೆ. ಚೀನಾದಲ್ಲಿ ತಾಂಡವವಾಡುತ್ತಿರುವ ತಳಿ ಪತ್ತೆಯಾದಲ್ಲಿ ಹೆಚ್ಚಿನ ರೀತಿಯಲ್ಲಿ ಕೊರೊನಾ ಮಾರ್ಗಸೂಚಿಯನ್ನು ಪಾಲನೆ ಮಾಡಬೇಕಾಗಿ ಬರುತ್ತದೆ. ಇದರ ಜೊತೆ ಜೊತೆಗೆ ಈ ಹಿಂದೆ ಕೊರೊನಾ ಸಂದರ್ಭದಲ್ಲಿ ಪಾಲನೆ ಮಾಡಲಾಗಿದ್ದ ಎಲ್ಲಾ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಗಳು ಇವೆ.

ಇದನ್ನೂ ಓದಿ : Covid test compulsory: ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಕೋವಿಡ್‌ ಪರೀಕ್ಷೆ ಕಡ್ಡಾಯ

ಇದನ್ನೂ ಓದಿ : Covid rules enforced: ಶಾಲೆ, ಕಾಲೇಜುಗಳಲ್ಲಿ ಮಾಸ್ಕ್ ಕಡ್ಡಾಯ, ವಿದೇಶಿ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆ : ಕೋವಿಡ್ ನಿಯಂತ್ರಣಕ್ಕೆ ಹೊಸ ರೂಲ್ಸ್ ಜಾರಿ

(Covid Positive case) The number of deaths in China is increasing day by day in the background of the discovery of a new mutant and the most dangerous strain of Corona in China. After this, the fear of Corona has spread in the country as well, and the fear of Corona has increased even more in the state. In three days, 2,867 travelers from abroad have arrived in the state and 12 of them have been infected.

Comments are closed.