Omicron BF.7: ಕೋವಿಡ್ ಹೊಸ ರೂಪಾಂತರ : ಈ ಲಕ್ಷಣ ಕಾಣಿಸಿಕೊಂಡ್ರೆ ಕೂಡಲೇ ವೈದ್ಯರಲ್ಲಿ ಪರೀಕ್ಷಿಸಿ

ಚೀನಾದಿಂದ ಈಗಾಗಲೇ ಭಾರತಕ್ಕೆ ಹೊಸ ರೂಪಾಂತರ ಓಮಿಕ್ರಾನ್ ಬಿಎಫ್.7 (Omicron BF.7) ಬಂದಿದೆ. ಹಿಂದಿನ ಬಾರಿ ಕರೋನಾದಿಂದ ಹಲವು ಸಾವು ನೋವುಗಳಾಗಿತ್ತು ಮತ್ತು ಜನರು ಆತಂಕಕ್ಕೆ ಒಳಗಾಗಿದ್ದರು. ಈ ಹೊಸ ರೂಪಾಂತರ ಓಮಿಕ್ರಾನ್ ಬಿಎಫ್.7 ಬಗ್ಗೆ ಆತಂಕ ಬೇಡ . ಮಾಹಿತಿಯ ಪ್ರಕಾರ ಓಮಿಕ್ರಾನ್ ಬಿಎಫ್.7 ಕಡಿಮೆ ಅವಧಿಯಲ್ಲಿ ಹೆಚ್ಚು ಹರಡುವ ರೂಪಾಂತರವಾಗಿದೆ. ಲಸಿಕೆ ಹಾಕಿದ ವ್ಯಕ್ತಿಗಳಿಗೆ ಸಹ ಸೋಂಕು ತಗಲುತ್ತದೆ. ಓಮಿಕ್ರಾನ್ ಬಿಎಫ್.7 ವೇಗವಾಗಿ ಹರಡುವುದರಿಂದ RT-PCR ಪರೀಕ್ಷೆಗಳಲ್ಲಿ ಪತ್ತೆಹಚ್ಚಲು ಕಷ್ಟವಾಗುತ್ತದೆ. ಹಾಗಾಗಿ ಅದಕ್ಕೆ ಈಗಾಗಲೇ ಬಂದಿರುವಂತಹ ಲಸಿಕೆ ಹಾಕಿಸಿಕೊಳ್ಳಿ. ಮಕ್ಕಳು, ವೃದ್ಧರು ಮತ್ತು ಗರ್ಭಿಣಿಯರ ಮೇಲೆ ಪರಿಣಾಮ ಬೀರುವುದರಿಂದ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವುದು ಉತ್ತಮ.

(Omicron BF.7)ಈ ರೂಪಾಂತರದ ಜ್ವರ, ಕೆಮ್ಮು, ಗಂಟಲು ನೋವು, ದೌರ್ಬಲ್ಯ, ವಾಕರಿಕೆ ಮತ್ತು ಅತಿಸಾರ ಸೇರಿದಂತೆ ಹಿಂದಿನ ಕೋವಿಡ್ ಸೋಂಕಿನ ಲಕ್ಷಣಗಳನ್ನು ಹೋಲುತ್ತವೆ.ಕೋವಿಡ್ ರೋಗಲಕ್ಷಣಗಳನ್ನು ಗುರುತಿಸುವುದು ಹೇಗೆ ಎಂಬ ಮಾಹಿತಿಯ ಕುರಿತು ತಿಳಿದುಕೋಳ್ಳಿ.ಈಗಾಗಲೇ ತಿಳಿದಿರುವಂತೆ ಕೋವಿಡ್‌ ಲಕ್ಷಣಗಳು ಕೆಲವರಲ್ಲಿ ಗೊತ್ತಾಗುತ್ತದೆ. ಇನ್ನು ಕೆಲವರಲ್ಲಿ ಕೋವಿಡ್‌ ಇದ್ದರು ಇದರ ಲಕ್ಷಣ ಕಾಣುವುದಿಲ್ಲ.ಹಾಗಾಗಿ ರೋಗಲಕ್ಷಣಗಳ ಬಗ್ಗೆ ತಿಳಿದಿರುವುದು ಮುಖ್ಯ . ಯಾವುದೇ ಕೋವಿಡ್ ನ ರೋಗಲಕ್ಷಣಗಳು ನಿಮ್ಮಲ್ಲಿ ಕಂಡು ಬಂದರೆ ತಕ್ಷಣ ವೈದ್ಯರನ್ನು ಬೇಟಿ ಆಗುವುದು ಉತ್ತಮ. ಅವರು ಹೇಳಿದಂತೆ ನಿಯಮ ಪಾಲಿಸಿ ಮನೆಯಲ್ಲಿಯೇ ಕ್ವಾರಂಟೆನ್‌ ಆಗಿ.

Omicron BF.7: ಓಮಿಕ್ರಾನ್ ಬಿಎಫ್.7 ಗುಣಲಕ್ಷಣ

  • ಒಣ ಕೆಮ್ಮು ರೀತಿಯಲ್ಲಿ ಕೆಮ್ಮು ಪ್ರಾರಂಭವಾಗುತ್ತದೆ. ಈ ಕೆಮ್ಮು ಬಂದರೆ ತಕ್ಷಣಕ್ಕೆ ಕಡಿಮೆ ಆಗುವುದಿಲ್ಲ ವಾರಗಟ್ಟಲೆ ಇರುತ್ತದೆ.
  • ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ
  • ಶೀತವಾಗಿ ಗಂಟಲು ಕಿರಿ ಕಿರಿ ಆಗುತ್ತದೆ.
  • ಗಂಟಲು ನೋವಾಗುತ್ತದೆ
  • ಜ್ವರ ಕಾಣಿಸಿಕೊಳ್ಳುತ್ತದೆ
  • ಆಯಾಸ ಆಗುತ್ತದೆ

ಇದನ್ನೂ ಓದಿ:Hot or Cold Water Bath In Winter:ಚಳಗಾಲದಲ್ಲಿ ಬಿಸಿ ನೀರಿನಿಂದ ಸ್ನಾನ ಮಾಡುವುದು ಒಳಿತೋ, ಕೆಡಕೋ?

ಇದನ್ನೂ ಓದಿ:Covid test compulsory: ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಕೋವಿಡ್‌ ಪರೀಕ್ಷೆ ಕಡ್ಡಾಯ

ಇದನ್ನೂ ಓದಿ:Covid Positive case: ಬೆಂಗಳೂರಿಗೆ 2,867 ವಿದೇಶಿ ಪ್ರಯಾಣಿಕರ ಆಗಮನ: 12 ಮಂದಿಗೆ ಕೋವಿಡ್‌ ಸೋಂಕು ದೃಢ

ಈ ಮೇಲೆ ತಿಳಿಸಿರುವಂತಹ ಗುಣಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಬೇಟಿ ಮಾಡಿ ಅವರ ಸಲಹೆಗಳನ್ನು ತೆಗೆದುಕೊಳ್ಳಿ. ಮನೆಯಲ್ಲಿಯೇ ಕ್ವಾರಂಟೈನ್‌ ಮಾಡಿ . ವೈದ್ಯರಲ್ಲಿ ನಿಮ್ಮ ದೇಹದಲ್ಲಿ ಆಗುತ್ತಿರುವ ಬದಲಾವಣೆಯ ಬಗ್ಗೆ ಮಾಹಿತಿ ನೀಡಿ ಅವರು ಹೇಳಿದ ಸಲಹೆಗಳನ್ನು ಪಾಲನೆ ಮಾಡಿ.

ಇದನ್ನೂ ಓದಿ:Bodh Mahotsav 2023 : ಬೋಧ ಮಹೋತ್ಸವ 2023: 4 ವಿದೇಶಿಯರಿಗೆ ಕೋವಿಡ್ ಪಾಸಿಟಿವ್

Omicron BF.7 New variant of covid: If this symptom appears, consult a doctor immediately

Comments are closed.