Tunisha suicide case: ತುನಿಶಾ ಶರ್ಮಾರನ್ನು ಅತಿಯಾಗಿ ಕಾಡುತ್ತಿತ್ತು ‘ಆ’ ಒಂದು ನೋವು; ಆತ್ಮಹತ್ಯೆಗೆ ಅದೇ ಕಾರಣ ಎಂದ ಪೊಲೀಸರು..!

ಮುಂಬೈ: Tunisha suicide case: ಹಿಂದಿಯ ಕಿರುತೆರೆ ನಟಿ ತುನಿಶಾ ಶರ್ಮಾ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಆಕೆಯ ಸಹನಟ ಶಿಜಾನ್ ಮೊಹಮ್ಮದ್ ಖಾನ್ ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಬೆನ್ನಲ್ಲೇ ಎಫ್‍ಐಆರ್ ಸಿದ್ಧಪಡಿಸಲಾಗಿದ್ದು, ತುನಿಶಾ ಆತ್ಮಹತ್ಯೆಗೆ ಶಿಜಾನ್ ನೇರ ಕಾರಣ ಎಂದು ಉಲ್ಲೇಖಿಸಿದ್ದಾರೆ.

ಶಿಜಾನ್ ಹಾಗೂ ತುನಿಶಾ ನಡುವೆ ಅಫೇರ್ ಇತ್ತು. 15 ದಿನಗಳ ಹಿಂದೆ ಇವರ ಪ್ರೀತಿ ಮುರಿದುಬಿದ್ದಿತ್ತು. ಶಿಜಾನ್ ಖುದ್ದು ಬ್ರೇಕಪ್ ಮಾಡಿಕೊಂಡಿದ್ದ. ಇದೇ ವಿಚಾರಕ್ಕೆ ನೊಂದಿದ್ದ ತುನಿಶಾ ಆತ್ಮಹತ್ಯೆಯ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಪೊಲೀಸರು ಎಫ್ ಐಆರ್ ನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: Kranti Song Release Case : ಕ್ರಾಂತಿ ಹಾಡು ರಿಲೀಸ್‌ ವೇಳೆ ದರ್ಶನ್‌ ಚಪ್ಪಲಿ ಎಸೆತ ಪ್ರಕರಣ : ಮೂವರ ಬಂಧನ

ಈ ಬೆನ್ನಲ್ಲೇ ತುನಿಶಾರ ಮಾವ ಪವನ್ ಶರ್ಮಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ತನಿಖಾ ಇನ್ನಿಲ್ಲ ಅನ್ನೋದನ್ನು ಮನಸ್ಸು ಒಪ್ಪುತ್ತಿಲ್ಲ. ಆಕೆ ಮೀರಾ ರಸ್ತೆಯಲ್ಲಿರುವ ಇಂದ್ರಪ್ರಸ್ಥ ಕಟ್ಟಡದಲ್ಲಿ ಅಮ್ಮನ ಜೊತೆ ವಾಸವಿದ್ದಳು. ಇಡೀ ಮನೆಯ ಜವಾಬ್ದಾರಿ ಹೊತ್ತಿದ್ದ ಆಕೆ, ಅಮ್ಮನನ್ನೂ ಚೆನ್ನಾಗಿ ನೋಡಿಕೊಂಡಿದ್ದಳು. ತುನಿಶಾಳ ಪ್ರಿಯಕರ ಶಿಜಾನ್ ಪ್ರಾಮಾಣಿಕನಲ್ಲ. ತುನಿಶಾ ಜೊತೆ ಪ್ರೀತಿಯಲ್ಲಿದ್ದರೂ, ಬೇರೆ ಹುಡುಗಿಯರ ಜೊತೆ ಸಂಪರ್ಕ ಇಟ್ಟುಕೊಂಡಿದ್ದ. ಈ ವಿಚಾರ ತುನಿಶಾಗೆ ತಿಳಿದಿತ್ತು. ಆತ ಬೇರೆ ಹುಡುಗಿಯರ ಜೊತೆ ಸಲಿಗೆಯಲ್ಲಿ ಇರುವುದನ್ನು ಕಂಡು ಆಕೆ ಬೇಸರ ಮಾಡಿಕೊಂಡಿದ್ದಳು. ಕೆಗೆ ಇದೇ ದೊಡ್ಡ ಕೊರಗಾಗಿತ್ತು. ಇದೇ ವಿಚಾರಕ್ಕೆ ಆಕೆ ಖಿನ್ನತೆಗೂ ಜಾರಿದ್ದಳು ಎಂದು ಹೇಳಿದ್ದಾರೆ.

ಡಿ.16ರಂದು ಶಿಜಾನ್ ಮೋಸದಾಟ ಆಕೆಗೆ ಸ್ಪಷ್ಟವಾಗಿ ಅರ್ಥವಾಗಿತ್ತು. ಆಗಿನಿಂದಲೂ ಆಕೆ ಇನ್ನಷ್ಟೂ ಖಿನ್ನತೆಗೆ ಒಳಗಾಗಿದ್ದಳು. ಮಗಳ ಪರಿಸ್ಥಿತಿ ನೋಡಲಾಗದೇ ಆಕೆಯ ಅಮ್ಮ ಶಿಜಾನ್ ಗೆ ಕರೆ ಮಾಡಿ, ನೀನು ನನ್ನ ಮಗಳನ್ನು ಪ್ರೀತಿಸಿಲ್ಲ ಅಂದಮೇಲೆ ಯಾಕಷ್ಟು ಆತ್ಮೀಯನಾಗಬೇಕಿತ್ತು..? ಈಗ್ಯಾಕೆ ದೂರವಾದೆ..? ಎಂದೆಲ್ಲಾ ಕಟುವಾಗಿ ಪ್ರಶ್ನೆ ಮಾಡಿದ್ದರು. ಆದರೆ ಇದೀಗ ಆಕೆ ಎಲ್ಲರನ್ನೂ ಬಿಟ್ಟು ಹೋಗಿದ್ದಾಳೆ. ಪೊಲೀಸರ ಮೇಲೆ ನಂಬಿಕೆ ಇದೆ. ಆರೋಪಿಗೆ ಶಿಕ್ಷೆಯಾಗುವ ಭರವಸೆ ಇದೆ ಎಂದು ತುನಿಶಾಳ ಮಾವ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಶ್ರದ್ಧಾ ವಾಕರ್ ಹತ್ಯೆ ಪ್ರಕರಣ : ಪೊಲೀಸರಿಗೆ ಹೊಸ ಆಡಿಯೋ ಪುರಾವೆ ಪತ್ತೆ : ಪರೀಕ್ಷೆಗೆ ಒಳಪಡಿಸಿದ ಅಫ್ತಾಬ್ ಧ್ವನಿ ಮಾದರಿ

Tunisha suicide case: Tunisha Sharma was very much bothered by that pain.The police said that it was the reason for the suicide

Comments are closed.