Dulquer Salmaan : ತಂದೆ ಮಮ್ಮುಟ್ಟಿ ಬೆನ್ನಲ್ಲೇ ಪುತ್ರ ದುಲ್ಕರ್​ ಸಲ್ಮಾನ್​ಗೂ ಕೊರೊನಾ ಸೋಂಕು ಧೃಡ

Dulquer Salmaan : ತಂದೆ ಮಮ್ಮುಟ್ಟಿ ಬಳಿಕ ಇದೀಗ ನಟ ದುಲ್ಕರ್​ ಸಲ್ಮಾನ್​ ಕೂಡ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. 35 ವರ್ಷದ ನಟ ದುಲ್ಕರ್​ ಸಲ್ಮಾನ್​ ತಮಗೆ ಕೋವಿಡ್​ ಸೋಂಕಿನ ಸೌಮ್ಯ ಲಕ್ಷಣಗಳು ಇವೆ ಎಂದು ಹೇಳಿಕೊಂಡಿದ್ದಾರೆ. ತಂದೆ ಸೂಪರ್​ ಸ್ಟಾರ್​ ಮಮ್ಮುಟ್ಟಿ ಕೊರೊನಾ ಸೋಂಕಿಗೆ ಒಳಗಾದ ಕೆಲವೇ ದಿನಗಳಲ್ಲಿ ಪುತ್ರ ದುಲ್ಕರ್​ ಸಲ್ಮಾನ್​ ಕೋವಿಡ್​ ವರದಿಯೂ ಪಾಸಿಟಿವ್​ ಬಂದಿದೆ. ಈ ಬಗ್ಗೆ ಸೋಶಿಯಲ್​ ಮೀಡಿಯಾ ಪೋಸ್ಟ್​ ಹಾಕುವ ಮೂಲಕ ದುಲ್ಕರ್​ ಸಲ್ಮಾನ್​ ತಮಗೆ ಕೋವಿಡ್​ ಸೋಂಕು ಇರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೇ ತಾವು ಮನೆಯಲ್ಲಿಯೇ ಪ್ರತ್ಯೇಕವಾಗಿ ಇದ್ದೇನೆ ಎಂದು ಹೇಳಿದ್ದಾರೆ.

ನಾನು ಕೊರೊನಾ ಸೋಂಕಿಗೆ ಒಳಗಾಗಿದ್ದೇನೆ. ನನಗೆ ಜ್ವರದ ಲಕ್ಷಣಗಳು ಇವೆ ಎಂಬುದನ್ನು ಬಿಟ್ಟರೆ ನಾನು ಆರಾಮಾಗಿ ಇದ್ದೇನೆ. ಮನೆಯಲ್ಲಿಯೇ ಐಸೋಲೇಟ್​ ಆಗಿದ್ದೇನೆ. ಕಳೆದ ಕೆಲವು ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದವರಿಗೆ ಯಾವುದೇ ಲಕ್ಷಣಗಳು ಕಂಡಿಬಂದಿದ್ದರೆ ದಯವಿಟ್ಟು ಐಸೋಲೇಟ್​ ಆಗಿ ಎಂದು ಸೋಶಿಯಲ್​ ಮೀಡಿಯಾ ಪೋಸ್ಟ್​ ಮೂಲಕ ಮನವಿ ಮಾಡಿದ್ದಾರೆ.


ಕೆಲವೇ ದಿನಗಳ ಹಿಂದೆಯಷ್ಟೇ ಅಂದರೆ ಜನವರಿ 16ರಂದು ದುಲ್ಕರ್​ ಸಲ್ಮಾನ್​ ಅವರ ತಂದೆ ಮಮ್ಮುಟ್ಟಿ ಕೋವಿಡ್​ 19 ಸೋಂಕಿಗೆ ಒಳಗಾಗಿದ್ದರು. ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೂ ಸಹ ತಾವು ಕೊರೊನಾ ಸೋಂಕಿಗೆ ಒಳಗಾಗಿರುವುದಾಗಿ ಹೇಳಿಕೊಂಡಿದ್ದರು. 70 ವರ್ಷದ ಮಮ್ಮುಟ್ಟಿ ತಮ್ಮ ಮುಂಬರುವ ಸಿನಿಮಾ ಸಿಬಿಐ 5ನಲ್ಲಿ ಶೂಟಿಂಗ್​ನಲ್ಲಿದ್ದ ವೇಳೆಯಲ್ಲಿ ಸೋಂಕಿಗೆ ಒಳಗಾಗಿದ್ದಾರೆ.


ಇತ್ತ ಸ್ಟ್ಯಾಂಡ್​ಅಪ್​ ಕಮಿಡಿಯನ್​​ ಹಾಗೂ ನಟ ವೀರ್​ ದಾಸ್​ ಕೊರೊನಾ ಪರೀಕ್ಷೆಯ ನೆಗೆಟಿವ್​ ವರದಿಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 42 ವರ್ಷದ ನಟ ತಮ್ಮ ಆರೋಗ್ಯದ ಈ ಸುಧಾರಣೆಯನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ ಹಾಗೂ ಜನರ ಬಳಿಕ ಕೋವಿಡ್​ನ ಸೂಕ್ತ ಮಾರ್ಗಸೂಚಿಗಳನ್ನು ಪಾಲಿಸುವಂತೆ ಮನವಿ ಮಾಡಿದ್ದಾರೆ.

Dulquer Salmaan tests positive for coronavirus after father Mammootty

ಇದನ್ನು ಓದಿ : T20 World Cup 2022 ವೇಳಾಪಟ್ಟಿ ಪ್ರಕಟ : ಭಾರತಕ್ಕೆ ಪಾಕಿಸ್ತಾನ ಮೊದಲ ಎದುರಾಳಿ

ಇದನ್ನೂ ಓದಿ : Siddaramaiah outrage : ಕೊರೋನಾ ಚಿಕಿತ್ಸೆ ಹೊಣೆ ಖಾಸಗಿಯವರಿಗೆ, ಸರ್ಕಾರ ನಿದ್ರೆಗೆ : ಚಾಟಿ ಬೀಸಿದ ಸಿದ್ಧರಾಮಯ್ಯ

Comments are closed.