Veda Krishnamurthy captain: ಮದುವೆಯ ಬೆನ್ನಲ್ಲೇ ಕ್ರಿಕೆಟ್ ಮೈದಾನಕ್ಕೆ ವೇದಾ ಕೃಷ್ಣಮೂರ್ತಿ, ಕರ್ನಾಟಕ ತಂಡಕ್ಕೆ ವೇದಾ ನಾಯಕಿ

ಬೆಂಗಳೂರು: Veda Krishnamurthy captain : ಕೆಲ ದಿನಗಳ ಹಿಂದಷ್ಟೇ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದ ಕರ್ನಾಟಕದ ಸ್ಟಾರ್ ಮಹಿಳಾ ಕ್ರಿಕೆಟರ್ ಬಿಸಿಸಿಐ ಮಹಿಳಾ ಏಕದಿನ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ. ಬಿಸಿಸಿಐ ಮಹಿಳಾ ಏಕದಿನ ಟೂರ್ನಿ ಜನವರಿ 18ರಿಂದ 29ರವರೆಗೆ ಮುಂಬೈನಲ್ಲಿ ನಡೆಯಲಿದೆ. ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ಆಟಗಾರ್ತಿ ವೇದಾ ಕೃಷ್ಣಮೂರ್ತಿ (Veda Krishnamurthy), ಇತ್ತೀಚೆಗಷ್ಟೇ ತಮ್ಮ ತಾಯಿಯ ಹುಟ್ಟುಹಬ್ಬದ ದಿನವೇ ಪ್ರೀತಿಸಿದ ಹುಡುಗನ ಜೊತೆ ರಿಜಿಸ್ಟರ್ ಮದುವೆಯಾಗಿದ್ದರು.

ಗುರುವಾರ (ಜನವರಿ 12) ವೇದಾ ಕೃಷ್ಣಮೂರ್ತಿ ಅವರ ತಾಯಿಯ ಜನ್ಮದಿನ. ಹೀಗಾಗಿ ತಾಯಿಯ ಹುಟ್ಟುಹಬ್ಬದ ದಿನವೇ ಬೆಂಗಳೂರಿನಲ್ಲಿ ವೇದಾ ಕೃಷ್ಣಮೂರ್ತಿ ಕರ್ನಾಟಕದ ಪ್ರಥಮದರ್ಜೆ ಕ್ರಿಕೆಟಿಗ ಅರ್ಜುನ್ ಹೊಯ್ಸಳ ಅವರನ್ನು ರಿಜಿಸ್ಟರ್ ಮದುವೆಯಾಗಿದ್ದರು. 30 ವರ್ಷದ ವೇದಾ ಕೃಷ್ಣಮೂರ್ತಿ 2011ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದರು. ಭಾರತ ಪರ ಒಟ್ಟು 48 ಏಕದಿನ ಪಂದ್ಯಗಳನ್ನಾಡಿರುವ ಬಲಗೈ ಬ್ಯಾಟರ್ ವೇದಾ 25.90ರ ಸರಾಸರಿಯಲ್ಲಿ 8 ಅರ್ಧಶತಕಗಳ ಸಹಿತ 829 ರನ್ ಕಲೆ ಹಾಕಿದ್ದಾರೆ.

ಭಾರತ ಪರ 76 ಟಿ20 ಪಂದ್ಯಗಳನ್ನೂ ಆಡಿರುವ ವೇದಾ ಕೃಷ್ಣಮೂರ್ತಿ 18.61ರ ಸರಾಸರಿಯಲ್ಲಿ 2 ಅರ್ಧಶತಕಗಳೊಂದಿಗೆ 875 ರನ್ ಗಳಿಸಿದ್ದಾರೆ. 2017ರಲ್ಲಿ ಇಂಗ್ಲೆಂಡ್’ನಲ್ಲಿ ನಡೆದ ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಫೈನಲ್ ತಲುಪುವಲ್ಲಿ ವೇದಾ ಮಹತ್ವದ ಪಾತ್ರ ವಹಿಸಿದ್ದರು. ನ್ಯೂಜಿಲೆಂಡ್ ವಿರುದ್ಧದ ಲೀಗ್ ಪಂದ್ಯದಲ್ಲಿ ಕೇವಲ 45 ಎಸೆತಗಳಲ್ಲಿ ಸಿಡಿಲಬ್ಬರದ 70 ರನ್ ಬಾರಿಸಿದ್ದ ವೇದಾ ಭಾರತವನ್ನು ಸೆಮಿಫೈನಲ್’ಗೆ ಮುನ್ನಡೆಸಿದ್ದರು.

ಬಿಸಿಸಿಐ ಮಹಿಳಾ ಏಕದಿನ ಟೂರ್ನಿಗೆ ಕರ್ನಾಟಕ ತಂಡ:
ವೇದಾ ಕೃಷ್ಣಮೂರ್ತಿ(ನಾಯಕಿ), ದಿವ್ಯಾ ಜ್ಞಾನಾನಂದ, ಶುಭಾ ಸತೀಶ್, ಪ್ರತ್ಯೂಷ ಸಿ., ಪ್ರತ್ಯೂಷಾ ಕೆ., ರಾಮೇಶ್ವರಿ ಗಾಯಕ್ವಾಡ್, ಚಂದು ವಿ., ಸಹನಾ ಪವಾರ್, ಮೋನಿಕಾ ಪಟೇಲ್, ವೃಂದಾ ದಿನೇಶ್, ಶ್ರೇಯಾಂಕಾ ಪಾಟೀಲ್, ಅದಿತಿ ರಾಜೇಶ್, ಸಂಜನಾ ಬಾಟ್ನಿ, ಪುಷ್ಪಾ ಕಿರೇಸೂರ್, ರೋಷನಿ ಕಿರಣ್.

ಇದನ್ನೂ ಓದಿ : Shreyas Iyer ruled out : ನ್ಯೂಜಿಲೆಂಡ್ ಏಕದಿನ ಸರಣಿಯಿಂದ ಶ್ರೇಯಸ್ ಅಯ್ಯರ್ ಔಟ್

ಇದನ್ನೂ ಓದಿ : KL Rahul in No.5 : ಏಕದಿನ ಕ್ರಿಕೆಟ್‌ನಲ್ಲಿ ರಾಹುಲ್‌ಗೆ 5ನೇ ಕ್ರಮಾಂಕ ಸೂಕ್ತವೇ? ಅಂಕಿ ಅಂಶಗಳು ಏನು ಹೇಳುತ್ತವೆ?

After marriage Veda Krishnamurthy joined the cricket field, Veda Krishnamurthy captain of the Karnataka team

Comments are closed.