ದಶಕಗಳ ಕಾಲ ಇರಲಿದೆ ಕೊರೊನಾದ ಪ್ರಭಾವ: ಆಘಾತಕಾರಿ ಮಾಹಿತಿ ನೀಡಿದ ವಿಶ್ವ ಆರೋಗ್ಯ ಸಂಸ್ಥೆ

ಪ್ರಸ್ತುತ ವಿಶ್ವದ ಪ್ರತಿಯೊಬ್ಬರ ತಲೆಯಲ್ಲಿಯೂ ಓಡುತ್ತಿರುವ ಒಂದೇ ಒಂದು ಪ್ರಶ್ನೆ ಎಂದರೆ ಈ ಕೋವಿಡ್​ ಯಾವಾಗ ಜಗತ್ತಿನಿಂದ ನಾಶವಾಗುತ್ತದೆ ಎಂಬುದಾಗಿದೆ. ಏಕೆಂದರೆ ಕಳೆದೆರಡು ವರ್ಷಗಳಿಂದ ಬಂಧಯುಕ್ತ ಜೀವನ, ನೆಚ್ಚಿನವರನ್ನು ಕಳೆದುಕೊಂಡು ಮನುಕುಲ ಸಂಕಷ್ಟದಲ್ಲಿದೆ. ಹೀಗಾಗಿ ಪ್ರತಿಯೊಬ್ಬರೂ ಕೂಡ ಕೋವಿಡ್​ ಮುಕ್ತ ಜಗತ್ತಿನ ಕನಸು ಕಾಣ್ತಿದ್ದಾರೆ. ಆದರೆ ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆಯು ಆಘಾತಕಾರಿ (Impact of Covid) ಮಾಹಿತಿಯೊಂದನ್ನು ಬಹಿರಂಗಪಡಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಡಾ. ಟೆಡ್ರೋಸ್​ ಅಧನೋಮ್​​ ಗೆಬ್ರೆಯೆಸಸ್​ ನೀಡಿರುವ ಮಾಹಿತಿಯ ಪ್ರಕಾರ ವಿಶ್ವದಲ್ಲಿ ಕೊರೊನಾ ವೈರಸ್​ ಹರಡುವಿಕೆಯ ಪ್ರಮಾಣ ಮುಂದಿನ ದಿನಗಳಲ್ಲಿ ಕಡಿಮೆಯಾದರೂ ಸಹ ಕೊರೊನಾದ ಎಫೆಕ್ಟ್​ ಇನ್ನೂ ದಶಕಗಳ ಕಾಲ ಭೂಮಿಯ ಮೇಲೆ ಇರಲಿದೆ ಎಂದು ಹೇಳಿದ್ದಾರೆ.

ಕೋವಿಡ್​ ವೈರಸ್​ನ ಪ್ರಭಾವವು ಅತ್ಯಂತ ದುರ್ಬಲ ವರ್ಗದವರಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ಕೊರೊನಾ ಸೋಂಕು ಹೆಚ್ಚು ದಿನಗಳ ಕಾಲ ಭೂಮಿಯ ಮೇಲೆ ಇದ್ದಷ್ಟು ಅದರ ಪರಿಣಾಮವು ಇನ್ನಷ್ಟು ಕೆಟ್ಟದಾಗಿ ಇರುತ್ತದೆ ಎಂದು ಟೆಡ್ರೋಸ್​​ ಅಧನೋಮ್​ ಗೆಬ್ರೆಯೆಸಸ್​​ ಎಚ್ಚರಿಕೆ ನೀಡಿದ್ದಾರೆ.

ಕೋವಿಡ್​ ಸಾಂಕ್ರಾಮಿಕದ ಪ್ರಭಾವವು ದಶಕಗಳ ಕಾಲ ಇರಲಿದೆ. ಅದರಲ್ಲೂ ವಿಶೇಷವಾಗಿ ಅತ್ಯಂತ ದುರ್ಬಲ ವರ್ಗದ ಜನರಲ್ಲಿ ಸಾಂಕ್ರಾಮಿಕವು ಕಾಣಿಸಿಕೊಳ್ಳುತ್ತದೆ. ಅಲ್ಲದೇ ಪರಿಣಾಮ ಕೂಡ ಅತ್ಯಂತ ಕೆಟ್ಟದಾಗಿ ಇರುತ್ತದೆ ಎಂದು ಟೆಡ್ರೋಸ್​​ ಅಧನೋಮ್​ ಗೆಬ್ರೆಯೆಸಸ್​ ಹೇಳಿದ್ದಾರೆ.

ಪ್ರಸ್ತುತ ಕಾಮನ್‌ವೆಲ್ತ್ ರಾಷ್ಟ್ರಗಳ ಜನಸಂಖ್ಯೆಯ ಶೇಕಡಾ 42 ರಷ್ಟು ಜನರು ಮಾತ್ರ ಎರಡು ಡೋಸ್ ಲಸಿಕೆಯನ್ನು ಪಡೆದಿದ್ದಾರೆ ಮತ್ತು ದೇಶಗಳ ನಡುವೆ ವ್ಯಾಪಕ ಅಸಮಾನತೆ ಇದೆ ಎಂದು ಡಾ ಟೆಡ್ರೊಸ್ ಹೇಳಿದರು.
“ಕಾಮನ್‌ವೆಲ್ತ್‌ನ ಆಫ್ರಿಕನ್ ದೇಶಗಳು ಕೇವಲ 23 ಪ್ರತಿಶತದಷ್ಟು ಸರಾಸರಿ ವ್ಯಾಕ್ಸಿನೇಷನ್ ದರವನ್ನು ಸಾಧಿಸಿವೆ. ಈ ಅಂತರವನ್ನು ಕಡಿಮೆ ಮಾಡುವುದು WHO ಗೆ ತುರ್ತು ಆದ್ಯತೆಯಾಗಿದೆ, ಸಾಂಕ್ರಾಮಿಕ ರೋಗವನ್ನು ನಿಯಂತ್ರಣಕ್ಕೆ ತರಲು ಮತ್ತು ಜೀವಗಳನ್ನು ಉಳಿಸಲು ಮಾತ್ರವಲ್ಲದೆ ಜೀವನೋಪಾಯವನ್ನು ರಕ್ಷಿಸಲು ಮತ್ತು ಸಮರ್ಥನೀಯ ಚೇತರಿಕೆಗೆ ಬೆಂಬಲ ನೀಡುತ್ತದೆ. ,” ಟೆಡ್ರೋಸ್​ ಹೇಳಿದರು.

Impact of Covid will be felt for decades, says WHO chief

ಇದನ್ನು ಓದಿ : Best Smartphones Under 5000: ಕಡಿಮೆ ಬೆಲೆಗೆ ಹೆಚ್ಚು ಫೀಚರ್ಸ್‌; 5 ಸಾವಿರದೊಳಗಿನ ಉತ್ತಮ ಸ್ಮಾರ್ಟ್‌ಫೋನ್‌ಗಳಿವು

Comments are closed.