Corona Vaccine : ಹರ್‌ ಘರ್‌ ದಸ್ತಕ್‌ ಅಭಿಯಾನ ಕೈಗೊಂಡ ಆರೋಗ್ಯ ಇಲಾಖೆ

ಬೆಂಗಳೂರು : ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ದೇಶದ ಪ್ರತೀ ಪ್ರಜೆಗೂ ಕೊರೊನಾ ಲಸಿಕೆ (Corona Vaccine)ಯನ್ನು ನೀಡುವ ಕಾರ್ಯವನ್ನು ಆರೋಗ್ಯ ಇಲಾಖೆ ಕೈಗೊಂಡಿದೆ. ದೇಶದಲ್ಲಿ ಈಗಾಗಲೇ ನೂರು ಕೋಟಿಗೂ ಅಧಿಕ ಮಂದಿ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ. ಆದರೆ ಎರಡನೇ ಲಸಿಕೆ ಹಾಕಿಸಿಕೊಳ್ಳಲು ಜನರು ಹಿಂದೇಟು ಹಾಕುತ್ತಿದ್ದಾರೆ. ಇದೇ ಕಾರಣಕ್ಕೆ ರಾಷ್ಟ್ರೀಯ ಆರೋಗ್ಯ ಇಲಾಖೆ ಹರ್‌ ಘರ್‌ ದಸ್ತಕ್‌ ಅನ್ನೋ ಅಭಿಯಾನ ಹಮ್ಮಿಕೊಂಡಿದ್ದು, ಮನೆ ಮನೆಗೆ ತೆರಳಿ ಲಸಿಕೆ ಹಾಕಿಸಲು ಮುಂದಾಗಿದೆ.

ಕರ್ನಾಟಕದಲ್ಲಿ ಕೊರೊನಾ ಲಸಿಕೆ ವಿರುದ್ದ ಹೋರಾಟ ಭರ್ಜರಿಯಾಗಿಯೇ ನಡೆಯುತ್ತಿದೆ. ರಾಜ್ಯದಲ್ಲಿ ಬಹುತೇಕ ಮಂದಿ ಈಗಾಗಲೇ ಕೊರೊನಾ ಲಸಿಕೆಯ ಮೊದಲ ಡೋಸ್‌ ಪಡೆದುಕೊಂಡಿದ್ದಾರೆ. ಆದರೆ ಎರಡನೇ ಡೋಸ್‌ ಪಡೆಯಲು ಹಿಂದೇಟು ಹಾಕುತ್ತಿರುವುದು ಬೆಳಕಿಗೆ ಬಂದಿದೆ. ಅದ್ರಲ್ಲೂ ಅವಧಿ ಮೀರಿದ್ರೂ ಕೂಡ ರಾಜ್ಯದ ೪೫ ಲಕ್ಷಕ್ಕೂ ಅಧಿಕ ಮಂದಿ ಎರಡನೇ ಡೋಸ್‌ ಲಸಿಕೆಯನ್ನು ಪಡೆದುಕೊಂಡಿಲ್ಲ. ಹೀಗಾಗಿಯೇ ಸರಕಾರ ಜನರಿಗೆ ಲಸಿಕೆಯನ್ನು ನೀಡುವ ಸಲುವಾಗಿ ಹಲವು ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ.

ಕರ್ನಾಟಕದ ಕೋವಿಡ್‌ ತಾಂತ್ರಿಕ ಸಮಿತಿ ಈಗಾಗಲೇ ಸಿಂಗಾಪುರ ಮಾದರಿಯ ಪ್ರಯೋಗಕ್ಕೆ ರಾಜ್ಯ ಸರಕಾರಕ್ಕೆ ಶಿಫಾರಸ್ಸು ಮಾಡಿದೆ. ಈ ನಡುವಲ್ಲೇ ರಾಷ್ಟ್ರೀಯ ಆರೋಗ್ಯ ಇಲಾಖೆ ಹೊಸ ಯೋಜನೆಯನ್ನು ರೂಪಿಸಿದೆ. ಅದ್ರಲ್ಲೂ ಹರ್‌ ಘರ್‌ ದಸ್ತಕ್‌ ಅಭಿಯಾನವನ್ನು ಹಮ್ಮಿಕೊಂಡಿದೆ. ಈ ಮೂಲಕ ಆರೋಗ್ಯ ಇಲಾಖೆಯ ಅಧಿಕಾರಿಗಳು ಇನ್ಮುಂದೆ ಮನೆಗೆ ಮನೆಗೆ ತೆರಳಿ ಲಸಿಕೆ ಪಡೆದವರ ಮಾಹಿತಿಯನ್ನು ಕಲೆ ಹಾಕಲಿದ್ದಾರೆ. ಮೊದಲ ಡೋಸ್‌ ಲಸಿಕೆಯನ್ನು ಪಡೆದು ಕೊಂಡವರು, ಎರಡನೇ ಡೋಸ್‌ ಲಸಿಕೆ ಪಡೆದುಕೊಂಡಿದ್ದಾರೆಯೇ ಅನ್ನೋ ಮಾಹಿತಿಯನ್ನು ಪಡೆಯಲಿದ್ದಾರೆ.

ಒಂದೊಮ್ಮೆ ಮೊದಲ ಡೋಸ್‌ ಪಡೆದು ಎರಡನೇ ಡೋಸ್‌ ಪಡೆಯದವರ ವಿವರ ಸಂಗ್ರಹಿಸಿ ಮನೆಯಲ್ಲಿಯೇ ಲಸಿಕೆ ನೀಡುವ ಕಾರ್ಯವನ್ನು ಮಾಡಲಾಗುತ್ತಿದೆ. ಇನ್ನೂ ಲಸಿಕೆ ಪಡೆದವರ ಸಂಖ್ಯೆ ಹೆಚ್ಚಿದ್ರೆ ಅಂತಹ ಸಂದರ್ಭದಲ್ಲಿ ಮನೆ ಪಕ್ಕದಲ್ಲಿಯೇ ಲಸಿಕಾ ಕೇಂದ್ರವನ್ನು ತೆರೆಯುವ ಮೂಲಕ ಲಸಿಕೆ ನೀಡುವ ಕಾರ್ಯವನ್ನು ಮಾಡಲಾಗುತ್ತದೆ. ಈ ಅಭಿಯಾನದ ಹಿನ್ನೆಲೆಯಲ್ಲಿ ಬಸ್‌, ಮೆಟ್ರೋ, ರೈಲು ಹಾಗೂ ವಿಮಾನ ನಿಲ್ದಾಣಗಳಲ್ಲಿಯೂ ಜನರಿಗೆ ಲಸಿಕೆ ನೀಡುವ ಕಾರ್ಯವನ್ನು ಮಾಡಲಾಗುತ್ತಿದೆ.

ಒಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಕೊರೊನಾ ಮೂರನೇ ಅಲೆಯನ್ನು ತಡೆಯುವ ನಿಟ್ಟಿನಲ್ಲಿ ಸಿದ್ದತೆಯನ್ನು ಮಾಡಿಕೊಳ್ಳುತ್ತಿದೆ. ದೇಶದ ಜನರು ಎರಡು ಡೋಸ್‌ ಲಸಿಕೆಯನ್ನು ಪಡೆದುಕೊಂಡ್ರೆ ಕೊರೊನಾ ಸೋಂಕನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡಬಹುದು ಅನ್ನೋದು ಸರಕಾರದ ಲೆಕ್ಕಾಚಾರ. ಒಂದೊಮ್ಮೆ ಲಸಿಕೆ ಪಡೆಯಲು ಹಿಂದೇಟು ಹಾಕುವವರಿಗೆ ಅರಿವನ್ನು ಮೂಡಿಸಿ ಲಸಿಕೆ ನೀಡುವ ಕಾರ್ಯವನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಡುತ್ತಿದ್ದಾರೆ. ಸಾರ್ವಜನಿಕರು ಸರಕಾರದೊಂದಿಗೆ ಸಹಕಾರ ನೀಡುವಂತೆ ಸರಕಾರ ವಿನಂತಿಸಿಕೊಂಡಿದೆ.

ಇದನ್ನೂ ಓದಿ : Children- Covaxin : 2 -18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ : ಕೊವಾಕ್ಸಿನ್‌ ತುರ್ತು ಬಳಕೆಗೆ ಗ್ರೀನ್‌ ಸಿಗ್ನಲ್‌

ಇದನ್ನೂ ಓದಿ : No vaccine No Treatment : ವಾಕ್ಸಿನ್ ಗುರಿ ತಲುಪಲು ಸರ್ಕಾರದ ಹೊಸ ಅಸ್ತ್ರ: ನೋವಾಕ್ಸಿನ್ ನೋ ಟ್ರೀಟ್ಮೆಂಟ್

( Har Ghar Dastak Campaign for the provision of Corona Vaccine)

Comments are closed.