School Fees : ಶೇ.15 ರಷ್ಟು ಬೋಧನಾ ಶುಲ್ಕ ವಾಪಾಸ್‌ ಮಾಡಿ : ಖಾಸಗಿ ಶಾಲೆಗಳಿಗೆ ರಾಜ್ಯ ಸರಕಾರದ ಆದೇಶ

ಬೆಂಗಳೂರು : ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ತಡವಾಗಿ ಶಾಲೆಗಳು ಆರಂಭಗೊಂಡಿವೆ. ಶಾಲಾ ಶುಲ್ಕದ ವಿಚಾರದಲ್ಲಿ ರಾಜ್ಯ ಸರಕಾರ ಹಾಗೂ ಖಾಸಗಿ ಶಾಲೆಗಳ ಒಕ್ಕೂಟದ ನಡುವೆ ತಿಕ್ಕಾಟ ನಡೆದು ಕೋರ್ಟ್‌ ಮೆಟ್ಟಿಲೇರಿದ್ದರು. ಆದ್ರೀಗ ರಾಜ್ಯ ಸರಕಾರ ಬೋಧನಾ ಶುಲ್ಕದಲ್ಲಿ (School Fees ) ಶೇ.15ರಷ್ಟು ಹಣವನ್ನು ಮಾತ್ರವೇ ಪಡೆದುಕೊಳ್ಳುವಂತೆ ಖಾಸಗಿ ಶಾಲೆಗಳಿಗೆ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

2020-21ನೇ ಸಾಲಿನಲ್ಲಿ ರಾಜ್ಯ ಸರಕಾರ ಶಾಲಾ ಶುಲ್ಕದಲ್ಲಿ ಶೇ.30 ರಷ್ಟು ಕಡಿತ ಮಾಡುವಂತೆ ಆದೇಶ ಹೊರಡಿಸಿತ್ತು. ಆದರೆ ಖಾಸಗಿ ಶಾಲೆಗಳ ಒಕ್ಕೂಟ ಹೈಕೋರ್ಟ್‌ ಮೆಟ್ಟಿಲೇರಿತ್ತು. ಪ್ರಕರಣದ ವಿಚಾರಣೆಯನ್ನು ನಡೆಸಿರುವ ಹೈಕೋರ್ಟ್‌ ಶೇ.15ರಷ್ಟು ಬೋಧನಾ ಶುಲ್ಕವನ್ನು ಪಡೆದುಕೊಳ್ಳುವಂತೆ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲೀಗ ರಾಜ್ಯ ಸರಕಾರ ಶಾಲಾ ಶುಲ್ಕವನ್ನು ಪರಿಷ್ಕರಿಸಿ ಹೊಸ ಆದೇಶ ಹೊರಡಿಸಿದೆ.

ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ಪೋಷಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪೋಷಕರು ಶುಲ್ಕ ಕಡಿತ ಮಾಡುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದರು. ಹೀಗಾಗಿಯೇ ಪ್ರಸಕ್ತ ಸಾಲಿನಲ್ಲಿ ಶುಲ್ಕ ಕಡಿತ ಮಾಡುವಂತೆ ರಾಜ್ಯ ಸರಕಾರ ನಿರ್ದೇಶನ ನೀಡಿತ್ತು. ಖಾಸಗಿ ಶಾಲೆಗಳು ಶೇ.70ರಷ್ಟು ಶುಲ್ಕವನ್ನು ಮಾತ್ರವೇ ಪಡೆಯಬೇಕು. ಉಳಿದಂತೆ ಯಾವುದೇ ಶುಲ್ಕವನ್ನು ಪಡೆಯುವಂತಿಲ್ಲ ಎಂದು ಸೂಚಿಸಿತ್ತು. ಇದೀಗ ಸರಕಾರ ಹೊಸ ಆದೇಶದ ಪ್ರಕಾರ ಶೇ.85 ರಷ್ಟು ಶುಲ್ಕವನ್ನು ಪಡೆಯಲು ಅವಕಾಶವನ್ನು ಕಲ್ಪಿಸಲಾಗಿದೆ.

ಇನ್ನು ಪೋಷಕರು ಶಾಲೆಗಳಿಗೆ ಶುಲ್ಕ ಪಾವತಿಯನ್ನು ಮಾಡಲು ಕಾಲಾವಕಾಶವನ್ನು ನೀಡಿದೆ. ಎರಡು ಹಂತಗಳಲ್ಲಿ ಈ ಬಾರಿ ಶಾಲಾ ಶುಲ್ಕವನ್ನು ಪಾವತಿ ಮಾಡಬಹುದಾಗಿದೆ. ಒಂದೊಮ್ಮೆ ಪೋಷಕರು ಹೆಚ್ಚುವರಿ ಶುಲ್ಕವನ್ನು ಪಾವತಿ ಮಾಡಿದ್ದರೆ, ಅದನ್ನು ಮುಂದಿನ ಸಾಲಿನ ಶೈಕ್ಷಣಿಕ ವರ್ಷಕ್ಕೆ ಸರಿದೂಗಿಸುವಂತೆಯೂ ಸೂಚಿಸಿಲಾಗಿದೆ.

ಇದನ್ನೂ ಓದಿ : Good News : ಶಾಲಾ ಮಕ್ಕಳಿಗೆ ಗುಡ್‌ ನ್ಯೂಸ್‌ : ಮಧ್ಯಾಹ್ನದ ಬಿಸಿಯೂಟಕ್ಕೆ ಸಿರಿಧಾನ್ಯ

ಇದನ್ನೂ ಓದಿ : National Education Day 2021 : ರಾಷ್ಟ್ರೀಯ ಶಿಕ್ಷಣ ದಿನದ ಮಹತ್ವ ನಿಮಗೆ ಗೊತ್ತಾ ?

(Karnataka State government directs private schools to refund School Fees)

Comments are closed.