Puneeth Rajkumar : ಪುನೀತ್ ರಾಜ್‌ ಕುಮಾರ್‌ ನಮನಕ್ಕೆ ಚಲನಚಿತ್ರಮಂಡಳಿ ಸಜ್ಜು: ಇಲ್ಲಿದೆ ಕಾರ್ಯಕ್ರಮದ ರೂಪುರೇಷೆ

ಸ್ಯಾಂಡಲ್ ವುಡ್ ನ ಯುವರಾಜ್ ನಂತಿದ್ದ ಪವರ್ ಸ್ಟಾರ್ ನನ್ನು ಕಳೆದುಕೊಂಡ ಚಂದನವನ ಬರಿದಾಗಿದೆ. ಅಗಲಿದ ಅಪ್ಪುಗೆ ಗೌರವ ಸಲ್ಲಿಸಲು ಕನ್ನಡ ಚಿತ್ರೋದ್ಯಮ ಪುನೀತ್ (Puneeth Rajkumar) ನಮನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅಂದು ಚಿತ್ರರಂಗವೇ ಯುವರತ್ನನಿಗೆ ನಮಿಸಲಿದೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿ‌ನೀಡಿದ್ದಾರೆ.

ಮೂರು ಗಂಟೆಗಳ ಕಾಲ ಅರಮನೆ ಮೈದಾನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಪುನೀತ್ (Puneeth Rajkumar) ಕುಟುಂಬಸ್ಥರು ,ಪುನೀತ್ ಆಪ್ತರು,ನಟ-ನಟಿಯರು,ತಂತ್ರಜ್ಞರು,ಕಾರ್ಮಿಕರು ಸೌತ್ ಸಿನಿಇಂಡಸ್ಟ್ರಿಯ ಹಿರಿಯ ನಟರು ಆಗಮಿಸಲಿದ್ದಾರೆ. ನವೆಂಬರ್ 16 ರಂದು ಎಲ್ಲ ಸಿನಿಚಟುವಟಿಕೆಗಳು ಹಾಗೂ ಚಿತ್ರೀಕರಣವನ್ನು ನಿಲ್ಲಿಸಲು ಚಿತ್ರೋದ್ಯಮ ನಿರ್ಧರಿಸಿದೆ. ಚಲನಚಿತ್ರ ರಂಗದ ಎಲ್ಲ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿ ಎಂಬ ಕಾರಣಕ್ಕೆ ಅಂದು ಚಿತ್ರರಂಗ ಚಟುವಟಿಕೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಮಂಡಳಿ ಅಧ್ಯಕ್ಷರು ವಿವರಣೆ ನೀಡಿದ್ದಾರೆ.

Punith Rajkumar

ಗುರುಕಿರಣ ಹಾಗೂ ನಾಗೇಂದ್ರ ಪ್ರಸಾದ್ ಗೀತ ನಮನದ ಮೂಲಕ ಗೌರವ ಸಲ್ಲಿಸಲಿದ್ದಾರೆ. ಆದರೆ ಯಾವುದೇ ರೀತಿಯ ಮನೋರಂಜನಾ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗಣ್ಯರು ಕೂಡ ಪುನೀತ್ ಗೆ ಗೌರವ ಸಲ್ಲಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಒಟ್ಟು 1500 ಜನರು ಪಾಲ್ಗೊಳ್ಳಲಿದ್ದು, ಪುನೀತ್ ಆಪ್ತರು, ಡಾ‌.ರಾಜ್ ಕುಟುಂಬದ ಬಂಧುಗಳು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮಕ್ಕೆ ವಿಶೇಷ ಪಾಸ್ ವ್ಯವಸ್ಥೆ ಮಾಡಲಾಗಿದ್ದು ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ನಡೆಸಲು ಚಲನಚಿತ್ರ ಮಂಡಳಿ ನಿರ್ಧರಿಸಿದೆ.

ಕಾರ್ಯಕ್ರಮದಲ್ಲಿ ಮೈಸೂರಿನ‌ ಮಹಾರಾಜ ಯದುವೀರ ಶ್ರೀಕಂಠದತ್ತ ಒಡೆಯರ್ ಪಾಲ್ಗೊಳ್ಳಲಿದ್ದಾರೆ. ಸಂಗೀತನಮನದ ಮೂಲಕ ಗೌರವ ಸಲ್ಲಿಸಲು ಸಂಪೂರ್ಣ ಕಾರ್ಯಕ್ರಮ ರೂಪಿಸಲಾಗಿದೆ. ಇನ್ನು ಚಿತ್ರರಂಗದ ಪುನೀತ್ ನಮನ ಕಾರ್ಯಕ್ರಮದ ಮಧ್ಯೆಯೂ ನಿರ್ಮಾಪಕರು ಹಾಗೂ ಚಿತ್ರವಿತರಕರಿಗೆ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿ ಸಿನಿಮಾ‌ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದೆ.

Sandalwood Star Puneeth Raj Kumar 12th day of rituals Family Organize Anna Santarpane For Fans

ಈಗಾಗಲೇ ರಾಜ್ಯದಾದ್ಯಂತ ಪ್ರತಿನಿತ್ಯ ಪುನೀತ್ ಗೆ ಗೌರವ ಸಲ್ಲಿಕೆಯಾಗುತ್ತಿದ್ದು, ರಸ್ತೆ, ಮೇಲ್ಸೇತುವೆ, ಪಾರ್ಕ್ ಗಳಿಗೆ ಪುನೀತ್ ಹೆಸರಿಟ್ಟು ಗೌರವ ಸಲ್ಲಿಸಲಾಗುತ್ತಿದೆ.

ಇದನ್ನೂ ಓದಿ : ಪುನೀತ್‌ ನೆನೆದು ಬಾವುಕರಾದ ಆಶಿಕಾ : ಜೊತೆಯಾಗಿ ನಟಿಸೋ ಕನಸು ನನಸಾಗಲಿಲ್ಲ

ಇದನ್ನೂ ಓದಿ : ಅಪ್ಪು ಅಗಲಿಕೆ ನೋವಿನಲ್ಲೂ ಸಿನಿತಂಡದ ಸಂಕಷ್ಟಕ್ಕೆ ಮಿಡಿದ ಶಿವರಾಜ್‌ ಕುಮಾರ್‌

(Puneet Rajkumar has Shraddhanjali for the Film Chamber of Commerce)

Comments are closed.