ಅಂತರ್‌ ರಾಜ್ಯ ಪ್ರಯಾಣಕ್ಕೆ ಹೊಸ ಮಾರ್ಗಸೂಚಿ : ಇನ್ಮುಂದೆ ಅರ್‌ಟಿಪಿಸಿಆರ್‌ ಕಡ್ಡಾಯವಲ್ಲ !

ನವದೆಹಲಿ : ದೇಶದಲ್ಲಿ ಕೊರೊನಾ ವೈರಸ್‌ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಂತರ್‌ರಾಜ್ಯ ಪ್ರಯಾಣಕ್ಕೆ ಕೇಂದ್ರ ಸರಕಾರ ಹೊಸ ಮಾರ್ಗಸೂಚಿ ಯನ್ನು ಹೊರಡಿಸಿದೆ. ಕೊರೊನಾ ಲಸಿಕೆ ಪಡೆದಿದ್ರೆ ಕೊರೊನಾ ಟೆಸ್ಟ್‌ ಕಡ್ಡಾಯವಲ್ಲ ಎಂದಿದೆ.

ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದ್ದರೂ ಕೂಡ ದೇಶದಲ್ಲಿ ಕೊರೊನಾ ಮೂರನೇ ಅಲೆಯ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ಇಷ್ಟು ದಿನ ಅಂತರ್‌ ರಾಜ್ಯ ಪ್ರಯಾಣಕ್ಕೆ ಕೊರೊನಾ ಟೆಸ್ಟ್‌ ರಿಪೋರ್ಟ್‌ ಕಡ್ಡಾಯವಾಗಿತ್ತು. ಆದರೆ ಈ ಕುರಿತು ಕೇಂದ್ರ ಸರಕಾರ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ.

ಪ್ರಮುಖವಾಗಿ ವಿಮಾನ, ರಸ್ತೆ, ರೈಲು ಪ್ರಯಾಣದ ವೇಳೆಯಲ್ಲಿ ಪರೀಕ್ಷೆ ಕಡ್ಡಾಯಗೊಳಿಸುವ ಅಗತ್ಯವಿಲ್ಲ ಎಂದು ಕೇಂದ್ರ ಸರಕಾರ ಹೇಳಿದೆ. ಆದರೆ ಪ್ರಯಾಣದ ವೇಳೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕೆಂದು ಸೂಚಿಸಿದೆ. ಇನ್ಮುಂದೆ ಅಂತರ್‌ರಾಜ್ಯ ಪ್ರಯಾಣಕ್ಕೆ ಕೊರೊನಾ ಟೆಸ್ಟ್‌ ರಿಪೋರ್ಟ್‌ ಕಡ್ಡಾಯವಲ್ಲ, ಆದರೆ ಕೊರೊನಾ ಲಸಿಕೆ ಪಡೆದವರಿಗೆ ಮಾತ್ರವೇ ಈ ನಿಯಮ ಅನ್ವಯವಾಗಲಿದೆ. 14 ದಿನಗಳ ಹಿಂದೆ ಕೊರೊನಾ ಪಾಸಿಟಿವ್ ಆಗಿದ್ದವರಿಗೂ ವಿನಾಯಿತಿ ನೀಡಬೇಕೆಂದು ಹೇಳಲಾಗಿದೆ.

ಒಂದು ಅಥವಾ ಎರಡು ಲಸಿಕೆ ಪಡೆದು 15 ದಿನ ಕಳೆದಿದ್ದರೆ ಆರ್ ಟಿ ಪಿ ಸಿ ಆರ್ ಪರೀಕ್ಷೆ ಅಗತ್ಯವಿಲ್ಲವೆಂದು ಕೇಂದ್ರ ಹೇಳಿದೆ. ಒಂದು ವೇಳೆ ರಾಜ್ಯಕ್ಕೆ ಪ್ರವೇಶ ಮಾಡಿದ ನಂತ್ರ ಜ್ವರದ ಲಕ್ಷಣಗಳು ಕಾಣಿಸಿಕೊಂಡರೆ ಕ್ಷಿಪ್ರ ಪರೀಕ್ಷೆಗೆ ಒಳಗಾಗಬೇಕೆಂದು ಸರ್ಕಾರ ಹೇಳಿದೆ.

ಇದನ್ನೂ ಓದಿ : ಓಣಂ ಹೆಸರಲ್ಲಿ ಕೊರೊನಾ ರೂಲ್ಸ್‌ ಬ್ರೇಕ್‌ : ಉಡುಪಿ ಜಿಲ್ಲಾಡಳಿತ ವಿರುದ್ದ ಆಕ್ರೋಶ : ಹಳೆಯ, ಹೊಸ ವಿಡಿಯೋ ವೈರಲ್‌

ಇದನ್ನೂ ಓದಿ : ಜ್ವರ, ಶೀತ, ಕೆಮ್ಮದ ಲಕ್ಷಣವಿದ್ರೆ ಕೊರೊನಾ ಟೆಸ್ಟ್‌ ಕಡ್ಡಾಯ : ಉಡುಪಿ ಡಿಸಿ

Comments are closed.