Coronavirus pandemic : ದೇಶದಲ್ಲಿ 3 ಲಕ್ಷ ಗಡಿದಾಟಿದ ದೈನಂದಿನ ಕೋವಿಡ್​ ಪ್ರಕರಣ

Coronavirus pandemic : ದೇಶದಲ್ಲಿ ಕೊರೊನಾ ಪ್ರಕರಣ ಯಾಕೋ ತಹಬಧಿಗೆ ಬರುವಂತೆ ಕಾಣುತ್ತಿಲ್ಲ. ಇಷ್ಟು ದಿನ 2 ಲಕ್ಷ ಗಡಿ ದಾಟಿದ್ದ ದೈನಂದಿನ ಕೋವಿಡ್ ಪ್ರಕರಣವು ಇಂದು 3 ಲಕ್ಷದ ಗಡಿಯನ್ನು ದಾಟಿದೆ. ಹೌದು..! ಬರೋಬ್ಬರಿ 8 ತಿಂಗಳುಗಳ ಬಳಿಕ ಇದೇ ಮೊದಲನೇ ಬಾರಿಗೆ ಎಂಬಂತೆ ದೇಶದಲ್ಲಿ ದೈನಂದಿನ ಕೋವಿಡ್ ಸಂಖ್ಯೆಯು 3 ಲಕ್ಷದ ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 3,17,532 ಕೋವಿಡ್​ ಪ್ರಕರಣಗಳು ವರದಿಯಾಗಿವೆ.

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 491 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಇನ್ನು ಕಳೆದೊಂದು ದಿನದಲ್ಲಿ 2,23,990 ಮಂದಿ ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್​ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ದೇಶದಲ್ಲಿ ರಿಕವರಿ ರೇಟ್​ 93.69 ಪ್ರತಿಶತ ತಲುಪಿದ್ದರೆ ದೇಶದಲ್ಲಿ ಒಟ್ಟು ಕೊರೊನಾದಿಂದ ಗುಣಮುಖರಾದವರ ಸಂಖ್ಯೆ 3,58,07,029 ಆಗಿದೆ.

ದೇಶದಲ್ಲಿ ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆ 19,24,051ಕ್ಕೆ ಏರಿಕೆ ಕಂಡಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ.(Coronavirus pandemic) ದೇಶದಲ್ಲಿ ಕೊರೊನಾ ದಿಂದ ಸಾವನ್ನಪ್ಪಿದವರ ಒಟ್ಟೂ ಸಂಖ್ಯೆ 4,87,693 ಆಗಿದೆ.

ಇನ್ನು ಇದರ ಜೊತೆಯಲ್ಲಿ ದೇಶದಲ್ಲಿ ಓಮಿಕ್ರಾನ್​ ಪ್ರಕರಣಗಳ ಸಂಖ್ಯೆ 9,287ಕ್ಕೆ ಏರಿಕೆ ಕಂಡಿದೆ. ದೈನಂದಿನ ಪಾಸಿಟಿವಿಟಿ ದರ 16.41 ಪ್ರತಿಶತವಾಗಿದೆ. ಇನ್ನು ಇಂಡಿಯನ್​ ಕೌನ್ಸಿಲ್​ ಆಫ್​ ಮೆಡಿಕಲ್​ ರಿಸರ್ಚ್​ ನೀಡಿರುವ ಮಾಹಿತಿಯ ಪ್ರಕಾರ ನಿನ್ನೆಯವರೆಗೆ ದೇಶದಲ್ಲಿ ಒಟ್ಟು 70,93,56,830 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ. ಇದರಲ್ಲಿ 19,35,180 ಸ್ಯಾಂಪಲ್​ಗಳನ್ನು ನಿನ್ನೆ ಪರೀಕ್ಷಿಸಲಾಗಿದೆ.

ಇದನ್ನು ಓದಿ : School Reopen ಗೆ ಖಾಸಗಿ ಶಾಲೆಗಳ ಒತ್ತಡ, ಲಸಿಕೆ ಪಡೆಯದ ಮಕ್ಕಳ ಮೇಲೆ ಪ್ರಯೋಗ : ಸರಕಾರದ ವಿರುದ್ದ ಪೋಷಕರ ಆಕ್ರೋಶ

ಇದನ್ನೂ ಓದಿ : PUC 2022 Exam : ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

ಇದನ್ನೂ ಓದಿ : ಮನೆಯಲ್ಲಿಯೇ ತೆರೆಯಬಹುದು ಮಿನಿಬಾರ್‌ ; ಮದ್ಯದ ಬೆಲೆಯಲ್ಲಿಯೂ ಭಾರೀ ಇಳಿಕೆ ಮಾಡಿದ ಸರಕಾರ

Coronavirus pandemic Updates: India logs over 3.17 lakh new cases, 491 deaths in last 24 hours

Comments are closed.