precautionary dose:ಇಂದಿನಿಂದ ಕೊರೊನಾ ಬೂಸ್ಟರ್​ ಡೋಸ್​ ಆರಂಭ: 3ನೇ ಡೋಸ್​ ಲಸಿಕೆ ಬಗ್ಗೆ ಇಲ್ಲಿದೆ ಮಾಹಿತಿ

precautionary dose :ದೇಶದಲ್ಲಿ ಸಂಭಾವ್ಯ ಕೊರೊನಾ ಮೂರನೇ ಅಲೆಯ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ದೇಶದಲ್ಲಿ ಆರೋಗ್ಯ ಮತ್ತು ಮಂಚೂಣಿ ಸಿಬ್ಬಂದಿಗೆ ಹಾಗೂ 60 ವರ್ಷ ಮೇಲ್ಪಟ್ಟ ಕೊಮೊರ್ಬಿಡಿಟಿ ಹೊಂದಿರುವವರಿಗೆ ಕೋವಿಡ್​ 19 ಲಸಿಕೆಯ ಬೂಸ್ಟರ್​ ಡೋಸ್​ ನೀಡುವ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದೆ.

ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ ಸರಿ ಸುಮಾರು 1.06 ಕೋಟಿ ಆರೋಗ್ಯ ಹಾಗೂ 1.9 ಕೋಟಿ ಮುಂಚೂಣಿ ಸಿಬ್ಬಂದಿ ಮತ್ತು 60 ವರ್ಷ ಮೇಲ್ಪಟ್ಟ 2.75 ಕೋಟಿ ಕೊಮೊರ್ಬಿಡಿಟಿ ಹೊಂದಿರುವವರಿಗೆ ಮುಂದಿನ ದಿನಗಳಲ್ಲಿ ಬೂಸ್ಟರ್​ ಡೋಸ್ ನೀಡಲಾಗುವುದು ಎಂದು ಹೇಳಲಾಗಿದೆ. ಅಲ್ಲದೇ ಕೋವಿಡ್ ಬೂಸ್ಟರ್​ ಡೋಸ್​ಗಾಗಿ ಯಾವುದೇ ರೀತಿಯ ನೋಂದಣಿ ಮಾಡಿಕೊಳ್ಳುವ ಅಗತ್ಯವಿಲ್ಲವೆಂದೂ ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಅರ್ಹರ ಫಲಾನುಭವಿಗಳು ನೇರವಾಗಿ ಲಸಿಕಾ ಕೇಂದ್ರಗಳಿಗೆ ತೆರಳಿ ಕೋವಿಡ್​ ಲಸಿಕೆಗಳನ್ನು ಪಡೆಯಬಹುದಾಗಿದೆ.

ಇನ್ನು ಎರಡನೇ ಡೋಸ್​ ಲಸಿಕೆಯಿಂದ ಮೂರನೇ ಡೋಸ್​ ಲಸಿಕೆಯ ನಡುವಿನ ಅಂತರ ಕನಿಷ್ಟ 9 ತಿಂಗಳು ಇರಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಮೊದಲ ಹಾಗೂ ಎರಡನೇ ಡೋಸ್​ ವೇಳೆ ಸ್ವೀಕರಿಸಿದ ಲಸಿಕೆಯೇ ಮೂರನೇ ಡೋಸ್​ ರೂಪದಲ್ಲಿ ನೀಡಲಾಗುತ್ತದೆ. ಹೀಗಾಗಿ ಮೊದಲ ಹಾಗೂ ಎರಡನೇ ಡೋಸ್​ ರೂಪದಲ್ಲಿ ಕೊವ್ಯಾಕ್ಸಿನ್​ ಲಸಿಕೆಯನ್ನು ಸ್ವೀಕರಿಸಿದವರು ಮೂರನೇ ಡೋಸ್​ ಆಗಿ ಕೊವ್ಯಾಕ್ಸಿನ್ ಲಸಿಕೆಯನ್ನೇ ಸ್ವೀಕರಿಸಲಿದ್ದಾರೆ. ಇದೇ ನಿಯಮ ಕೋವಿಶೀಲ್ಡ್​ ಲಸಿಕೆಯನ್ನು ಸ್ವೀಕರಿಸಿದವರಿಗೂ ಅನ್ವಯವಾಗುತ್ತದೆ. ಯಾವುದೇ ಕಾರಣಕ್ಕೂ ಲಸಿಕೆಗಳ ಮಿಶ್ರಣ ಮಾಡಬೇಡಿ ಎಂದು ಲಸಿಕಾ ಕೇಂದ್ರಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ.

ಕೋವಿನ್​ ಅಪ್ಲಿಕೇಶನ್​ ಮೂಲಕ ಅರ್ಹ ಫಲಾನುಭವಿಗಳು ಲಸಿಕೆಯ ಲಭ್ಯತೆಯ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಕೋವಿನ್​ ಅಪ್ಲಿಕೇಶನ್​ನಲ್ಲಿ ನಿಮ್ಮ 2ನೇ ಡೋಸ್ ಯಾವಾಗ ಪಡೆಯಲಾಗಿದೆ ಎಂಬುದನ್ನು ನೋಡಿಕೊಂಡು ಆ ಅರ್ಹತೆಯ ಮಾನದಂಡದ ಮೇಲೆ ಆರೋಗ್ಯ ಸಿಬ್ಬಂದಿ ಕೋವಿಡ್​ 3ನೇ ಡೋಸ್​ನ್ನು ನೀಡಲಿದ್ದಾರೆ. ನೀವು ಮೂರನೇ ಡೋಸ್​ ಪಡೆಯುವ ಅವಧಿ ಮೀರಿದ್ದರೆ ನಿಮ್ಮ ಮೊಬೈಲ್​ಗೆ ಎಸ್​ಎಂಎಸ್​ ಕಳಿಸುವ ಮೂಲಕ ಜ್ಞಾಪಿಸಲಾಗುತ್ತದೆ.

ಇದನ್ನು ಓದಿ : Private Hospital Corona Treatment : ರಾಜ್ಯದಲ್ಲಿ ಏರುತ್ತಲೇ ಇದೆ‌ ಕೊರೋನಾ : ಚಿಕಿತ್ಸೆಗೆ ಸಜ್ಜಾದ ಖಾಸಗಿ ಆಸ್ಪತ್ರೆಗಳು

ಇದನ್ನೂ ಓದಿ : Karnataka Covid-19 Live Updates : ಬೆಂಗಳೂರು, ಉಡುಪಿ, ದ.ಕ, ಮೈಸೂರಲ್ಲಿ ಕೊರೊನಾ ಬ್ಲಾಸ್ಟ್‌ : ಸಕ್ರೀಯ ಪ್ರಕರಣಗಳ ಸಂಖ್ಯೆ 49,602 ಕ್ಕೆ ಏರಿಕೆ

Roll-out of precautionary dose begins: Who’s eligible, how to avail | All you need to know

Comments are closed.