ಗೆಟ್‌ ಟು ಗೆದರ್‌ ಎಫೆಕ್ಟ್‌ ! ಒಂದೇ ಕಾಲೇಜಿನ 32 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು : ಕಾಲೇಜು ಸೀಲ್‌ ಡೌನ್‌

ಬೆಂಗಳೂರು : ಕೇರಳದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್‌ ಸೋಂಕು ಇದೀಗ ಕರ್ನಾಟಕಕ್ಕೆ ಸವಾಲಾಗಿ ಪರಿಣಮಿಸುತ್ತಿದೆ. ಬೆಂಗಳೂರು ಹೊರವಲಯದ ಹೊರಮಾವು ಎಂಬಲ್ಲಿರುವ ಕ್ರಿಶ್ವಿಯನ್‌ ಕಾಲೇಜಿನ ೩೪ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಕಾಲೇಜನ್ನು ಸೀಲ್‌ ಡೌನ್‌ ಮಾಡಲಾಗಿದೆ.

ಕೇರಳ ಹಾಗೂ ಪಶ್ಚಿಮ ಬಂಗಾಲದಿಂದ ಕಾಲೇಜಿಗೆ ಬಂದಿರುವ ವಿದ್ಯಾರ್ಥಿಗಳಲ್ಲಿಯೇ ಕೊರೊನಾ ಸೋಂಕು ದೃಢಪಟ್ಟಿದೆ. ಕೇರಳದಿಂದ ಬಂದಿದ್ದ 20 ಹಾಗೂ ಪಶ್ಚಿಮ ಬಂಗಾಲದಿಂದ ಬಂದಿರುವ 11 ವಿದ್ಯಾರ್ಥಿಗಳು ಸೇರಿ 32 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿನ ವಿದ್ಯಾರ್ಥಿಗಳನ್ನು ಎಚ್‌ಎಎಲ್‌ನ ಕೋವಿಡ್‌ ಕೇರ್‌ ಸೆಂಟರ್‌ಗೆ ವರ್ಗಾಯಿಸಲಾಗಿದೆ.

ಕಾಲೇಜಿನಲ್ಲಿ ಒಟ್ಟು 300 ವಿದ್ಯಾರ್ಥಿಗಳಿದ್ದು, ಇದೀಗ ಎಲ್ಲಾ ವಿದ್ಯಾರ್ಥಿಗಳನ್ನು ಕೊರೊನಾ ಟೆಸ್ಟಿಂಗ್‌ಗೆ ಒಳಪಡಿಸಲಾಗಿದೆ. ಕಾಲೇಜನ್ನು ಬಿಬಿಎಂಪಿ ಅಧಿಕಾರಿಗಳು ಸಿಲ್‌ಡೌನ್‌ ಮಾಡಿದ್ದು, ಕಾಲೇಜು ಸುತ್ತಮುತ್ತಲಿನ 100 ಮೀ. ಪ್ರದೇಶವನ್ನು ಕಂಟೈನ್ಮೆಂಟ್‌ ಝೋನ್‌ ಆಗಿ ನಿರ್ಮಿಸಲಾಗಿದೆ. ಕಾಲೇಜಿನ ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿರುವ ಬೆನ್ನಲ್ಲೇ ಪೋಷಕರಿಗೂ ಇದೀಗ ಆತಂಕ ಶುರುವಾಗಿದೆ.

ಕಾಲೇಜಿನಲ್ಲಿ ಇತ್ತೀಚಿಗೆ ಗೆಟ್‌ ಟು ಗೆದರ್‌ ಆಚರಣೆಯನ್ನು ಮಾಡಲಾಗಿದ್ದು, ಇದೇ ಕಾರಣದಿಂದಲೇ ಇದೀಗ ಕೊರೊನಾ ಸೋಂಕು ದೃಢಪಟ್ಟಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ತನಿಖೆ ಮಾಡುತ್ತಿದ್ದು, ಕಾಲೇಜಿನಲ್ಲಿ ಕೊರೊನಾ ರೂಲ್ಸ್‌ ಬ್ರೇಕ್‌ ಮಾಡಿದ್ದು ತನಿಖೆಯಲ್ಲಿ ಖಚಿತವಾದ್ರೆ ಕಾಲೇಜು ವಿರುದ್ದ ಕಠಿಣ ಕ್ರಮಕೈಗೊಳ್ಳುವ ಸಾಧ್ಯತೆಯಿದೆ.

ಇದನ್ನೂ ಓದಿ : SARS-COV-2 : ವಿದೇಶಿ ಪ್ರಯಾಣಿಕರಿಗೆ ಹೊಸ ರೂಲ್ಸ್‌ : ಆರೋಗ್ಯ ಇಲಾಖೆ

ಇದನ್ನೂ ಓದಿ : ಗಣೇಶೋತ್ಸವಕ್ಕೆ ಸಿಕ್ಕಿಲ್ಲ ಗ್ರೀನ್‌ ಸಿಗ್ನಲ್‌ : ಸೆಪ್ಟೆಂಬರ್ 5ಕ್ಕೆ ಅಂತಿಮ ತೀರ್ಮಾನ : ಆರ್ ಅಶೋಕ್

( Get to Getter Effect ! Corona infection in 32 students of the same college: seal down )

Comments are closed.