Kerala Corona Update Today : ಕೇರಳದಲ್ಲಿ 20,624 ಹೊಸ ಕೇಸ್‌ : ಕೊರೊನಾ ಪಾಸಿಟಿವಿಟಿ ರೇಟ್ 12.31‌ ಏರಿಕೆ

ತಿರುವನಂತಪುರಂ : ಕೇರಳದಲ್ಲಿ ಕೊರೊನಾ ವೈರಸ್‌ ಸೋಂಕಿನ ಪ್ರಮಾಣದಲ್ಲಿ ತೀವ್ರ ಏರಿಕೆಯನ್ನು ಕಾಣುತ್ತಿದೆ. ಸತತವಾಗಿ ರಾಜ್ಯದಲ್ಲಿ ಇಪ್ಪತ್ತು ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣಗಳ ದಾಖಲಾಗಿತ್ತಿದ್ದು, ಇಂದು 20,624 ಜನರಿಗೆ ಕರೋನಾ ದೃಢಪಟ್ಟಿದ್ದು, ಪಾಸಿಟಿವಿಟಿ ದರ 12.31‌ ಏರಿಕೆಯಾಗಿದೆ.

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ 3474, ತ್ರಿಶೂರ್ 2693, ಪಾಲಕ್ಕಾಡ್ 2209, ಕೋಳಿಕ್ಕೋಡ್ 2113, ಎರ್ನಾಕುಲಂ 2072, ಕೊಲ್ಲಂ 1371, ಕಣ್ಣೂರು 1243, ಆಲಪ್ಪುಳ 1120, ಕೊಟ್ಟಾಯಂ 1111, ತಿರುವನಂತಪುರಂ 969, ಕಾಸರಗೋಡು 715, ಪತ್ತನಂತಿಟ್ಟ 629, ವಯನಾಡ್ 530 ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ 375 ಕೊರೊನಾ ಪ್ರಕರಣಗಳು ದಾಖಲಾಗಿದೆ. ಒಟ್ಟು112 ಮಂದಿ ಹೊರ ರಾಜ್ಯದವರಿಗೆ ಸೋಂಕು ಕಾಣಿಸಿಕೊಂಡಿದ್ದರೆ, 19,487 ಮಂದಿ ಕೊರೊನಾ ಸೋಂಕಿತರ ಸಂಪರ್ಕಿತರಾಗಿದ್ದಾರೆ. ಆದರೆ 927 ಮಂದಿಗೆ ಕೊರೊನಾ ಸೋಂಕು ಯಾವ ಮೂಲದಿಂದ ಹರಡಿದೆ ಅನ್ನೋದು ಪತ್ತೆಯಾಗಿಲ್ಲ.

ಕಳೆದ 24 ಗಂಟೆಗಳ ಅವಧಿಯಲ್ಲಿ ಕೇರಳದಲ್ಲಿ 1,67,579 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ಪೈಕಿ 12.31 ರಷ್ಟು ಮಂದಿಗೆ ಕೊರೊನಾ ಸೋಂಕು ಇರುವುದು ದೃಢ ಪಟ್ಟಿದೆ. ಅಲ್ಲದೇ ಇಂದು ಕೊರೊನಾ ಸೋಂಕಿನಿಂದ 80 ಮಂದಿ ಸಾವನ್ನಪ್ಪಿದ್ದು, ಇದುವರೆಗೆ ರಾಜ್ಯದಲ್ಲಿ ಒಟ್ಟು16,781 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

https://kannada.newsnext.live/corona-virus-hike-kasaragodu-mangalore-bus-bund-cm-order/

ಕೇರಳದಲ್ಲಿ ಒಟ್ಟು 4,55,078 ಕೊರೊನಾ ಸಕ್ರೀಯ ಪ್ರಕರಣಗಳಿದ್ದು, 4,26,640 ಮತ್ತು ಸಾಂಸ್ಥಿಕ ಕ್ವಾರಂಟೈನ್‌ ನಲ್ಲಿ ಇದ್ದಾರೆ. ಉಳಿದಂತೆ 28,438 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದಿಗ 2945 ಜನರನ್ನು ಹೊಸದಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.

Comments are closed.