Kerala Mask mandatory: ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಕಡ್ಡಾಯ : ಕೇರಳದಲ್ಲಿ ಜಾರಿಯಾಯ್ತು ಕಠಿಣ ಮಾರ್ಗಸೂಚಿ

ಕೇರಳ: (Kerala Mask mandatory) ದೇಶದಲ್ಲಿ ಕೋವಿಡ್‌ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಕೇರಳದ ಸರಕಾರವು ಕೋವಿಡ್ ನಿಯಂತ್ರಣಕ್ಕೆ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ. ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಫೇಸ್‌ ಮಾಸ್ಕ್‌ ಕಡ್ಡಾಯಗೊಳಿಸಿ ಆದೇಶಗಳನ್ನು ಹೊರಡಿಸಿದೆ.

ಕೇರಳದ ಸರಕಾರವು ಕೋವಿಡ್‌ ನಿಯಂತ್ರಣಕ್ಕೆ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಈ ಕೆಳಗಿನಂತಿವೆ;
* ರಾಜ್ಯ ಸರಕಾರದ ಆದೇಶದ ಪ್ರಕಾರ, ಎಲ್ಲಾ ಸಾರ್ವಜನಿಕ ಸ್ಥಳಗಳು, ಕೆಲಸದ ಸ್ಥಳಗಳು ಹಾಗೂ ಸಭೆ ಸಮಾರಂಭಗಳಲ್ಲಿ ಫೇಸ್‌ ಮಾಸ್ಕ್‌ ಕಡ್ಡಾಯಗೊಳಿಸಲಾಗಿದೆ.
* ಕೋವಿಡ್‌ ಸೋಂಕು ಹರಡುವುದನ್ನು ತಡೆಯಲು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ರಾಜ್ಯ ಸರಕಾರ ಜನ ರಿಗೆ ಸೂಚನೆಯನ್ನು ನೀಡಿದೆ.
* ಅಂಗಡಿಗಳು, ಚಿತ್ರಮಂದಿರಗಳು ಹಗಾಊ ವಿವಿಧ ಕಾರ್ಯಕ್ರಮಗಳ ಸಂಘಟಕರಲ್ಲಿ ಜನರಿಗೆ ಸ್ಯಾನಿಟೈಸರ್‌ ವ್ಯವಸ್ಥೆ ಮಾಡಲು ರಾಜ್ಯ ಸರಕಾರ ಸಲಹೆ ನೀಡಿದೆ.
* ಮುಂದಿನ 30 ದಿನಗಳ ಕಾಲ ರಾಜ್ಯದ ಎಲ್ಲಾ ಭಾಗಗಳಿ ಈ ಆದೇಶಗಳು ಜಾರಿಯಲ್ಲಿರುತ್ತವೆ.

ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, ಭಾರತವು ಹಿಂದಿನ ದಿನದಲ್ಲಿ 114 ಹೊಸ ಕೊರೊನಾ ವೈರಸ್‌ ಸೋಂಕುಗಳನ್ನು ವರದಿ ಮಾಡಿದ್ದು, ನಂತರ ಸಕ್ರಿಯ ಪ್ರಕರಣಗಳು 2,119 ಕ್ಕೆ ಇಳಿದಿದೆ. ರಾಷ್ಟ್ರೀಯ ಕೋವಿಡ್‌ ಚೇತರಿಕೆಯ ದರವು 98.80 ಪ್ರತಿಶತಕ್ಕೆ ಏರಿದೆ.

ಈ ಮಧ್ಯೆ, ಭಾರತೀಯ SARS-CoV-2 ಜೀನೋಮಿಕ್ಸ್‌ ಕನ್ಸೋರ್ಟಿಯಂ ಡೇಟಾ ಪ್ರಕಾರ, ಯುಎಸ್‌ ನಲ್ಲಿ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾದ XBB.1.5 ರೂಪಾಂತರದ ಪ್ರಕರಣಗಳ ಸಂಖ್ಯೆಯು ಭಾರತದಲ್ಲಿ 26 ಕ್ಕೆ ಏರಿದೆ. ಇದುವರೆಗೆ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಂಡುಬಂದಿರುವ XBB.1.5 ರೂಪಾಂತರಗಳು ದೆಹಲಿ, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದಲ್ಲಿ ದೃಢಪಟ್ಟಿವೆ.

ಇದನ್ನೂ ಓದಿ : Quarantine cancels: ವಿದೇಶಿ ಪ್ರಯಾಣಿಕರಿಗೆ ಕ್ವಾರಂಟೈನ್ ಕಡ್ಡಾಯ ಆದೇಶ ಹಿಂಪಡೆದ ಆರೋಗ್ಯ ಇಲಾಖೆ

ಇದನ್ನೂ ಓದಿ : Omicron sub-variant XXB.1.5: ರಾಜ್ಯಕ್ಕೂ ಕಾಲಿಟ್ಟ ಒಮಿಕ್ರಾನ್‌ ರೂಪಾಂತರಿ XXB.1.5: ರಾಜ್ಯದಲ್ಲಿ ಮೊದಲ ಕೇಸ್‌ ಪತ್ತೆ

ಇದನ್ನೂ ಓದಿ : Udupi Co-vaccine mela: ಅವಳಿ ಜಿಲ್ಲೆಗಳಲ್ಲಿ ಕೋವಿಶೀಲ್ಡ್‌ ಲಸಿಕೆ ಕೊರತೆ: ಜ.4 ರಂದು ಉಡುಪಿಯಲ್ಲಿ ಕೋವ್ಯಾಕ್ಸಿನ್‌ ಮೇಳ

Kerala Mask mandatory: Mask mandatory in public places: Strict guidelines implemented in Kerala

Comments are closed.