Kerala Covid Updates : ಕೇರಳದಲ್ಲಿ ನಿಲ್ಲದ ಕೊರೊನಾ ಅಬ್ಬರ : 9735 ಮಂದಿಗೆ ಸೋಂಕು,151 ಮಂದಿ ಸಾವು

ತಿರುವನಂತಪುರಂ : ಕೇರಳದಲ್ಲಿ ಕೊರೊನಾ ವೈರಸ್‌ ಸೋಂಕು ನಿಧಾನವಾಗಿ ಇಳಿಕೆಯನ್ನು ಕಾಣುತ್ತಿದೆ. ಆದರೆ ಕೊರೊನಾ ಅಬ್ಬರ ಮಾತ್ರ ಸಂಪೂರ್ಣವಾಗಿ ಕಡಿಮೆ ಯಾಗಿಲ್ಲ. ಕಳೆದ 24 ಗಂಟೆಗಳ ಅವಧಿಯಲ್ಲಿ 9735 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ತ್ರಿಶೂರ್ 1367, ತಿರುವನಂತಪುರಂ 1156, ಎರ್ನಾಕುಲಂ 1099, ಕೊಟ್ಟಾಯಂ 806, ಪಾಲಕ್ಕಾಡ್ 768, ಕೊಲ್ಲಂ 755, ಕೋಯಿಕ್ಕೋಡ್ 688, ಮಲಪ್ಪುರಂ 686, ಕಣ್ಣೂರು 563, ಆಲಪ್ಪುಳ 519, ಪತ್ತನಂತಿಟ್ಟ 514, ಇಡುಕ್ಕಿ 374, ವಯನಾಡ್ 290 ಮತ್ತು ಕಾಸರಗೋಡು 150 ಜಿಲ್ಲೆಗಳಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ವೈರಸ್‌ ಸೋಂಕು ದೃಢಪಟ್ಟಿದೆ.

ಕಳೆದ 24 ಗಂಟೆಗಳಲ್ಲಿ 93,202 ಮಾದರಿಗಳನ್ನು ಪರೀಕ್ಷಿಸಲಾಗಿದೆ. 368 ಸ್ಥಳೀಯ ಸಂಸ್ಥೆಗಳಲ್ಲಿ 745 ವಾರ್ಡ್‌ಗಳಿದ್ದು, ಸಾಪ್ತಾಹಿಕ ಸೋಂಕಿನ ಜನಸಂಖ್ಯೆ 10 ಕ್ಕಿಂತ ಹೆಚ್ಚಿದೆ. ಇಲ್ಲಿ ಕಠಿಣ ನಿಯಂತ್ರಣ ಇರುತ್ತದೆ. 4,03,141 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ. ಈ ಪೈಕಿ 3,87,353 ಮನೆ / ಸಾಂಸ್ಥಿಕ ಕ್ವಾರಂಟೈನ್ ಮತ್ತು 15,788 ಆಸ್ಪತ್ರೆ ಗಳಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಅಲ್ಲದೇ ಇದೀಗ ಮತ್ತೆ 1128 ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪ್ರಸ್ತುತ, 1,24,441 ಕೋವಿಡ್ ಪ್ರಕರಣಗಳಲ್ಲಿ ಕೇವಲ 11.1 ಪ್ರತಿಶತದಷ್ಟು ಜನರು ಮಾತ್ರ ಆಸ್ಪತ್ರೆ ಹಾಗೂ ಕ್ಷೇತ್ರ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಇನ್ನು ಕೇರಳದಲ್ಲಿ ಕೊರೊನಾ ಸೋಂಕಿನಿಂದ ಆಗುತ್ತಿರುವ ಸಾವಿನ ಪ್ರಮಾಣವೂ ಸಂಪೂರ್ಣವಾಗಿ ಕಡಿಮೆಯಾಗಿಲ್ಲ. ಕೇರಳದಲ್ಲಿ151 ಮಂದಿ ಕೊರೊನಾ ವೈರಸ್‌ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 25,677 ಕ್ಕೆ ಏರಿಕೆಯಾಗಿದೆ ಎಂದು ಕೇರಳ ಆರೋಗ್ಯ ಇಲಾಖೆ ಮಾಹಿತಿಯನ್ನು ನೀಡಿದೆ. ಕೊರೊನಾ ಸೋಂಕು ಕಣಿಸಿಕೊಂಡವರ ಪೈಕಿ 36 ಜನರು ಹೊರ ರಾಜ್ಯದವರು. 9,101 ಜನರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ. 529 ಗೆ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. 69 ಆರೋಗ್ಯ ಕಾರ್ಯಕರ್ತರು ಈ ಕಾಯಿಲೆಯಿಂದ ಬಳಲುತ್ತಿದ್ದರು.

ಇನ್ನು ಕೇರಳ ರಾಜ್ಯದಲ್ಲಿ ಕೊರೊನಾ ವೈರಸ್‌ ಸೋಂಕಿಗೆ ತುತ್ತಾಗಿದ್ದವರ ಪೈಕಿ ಕಳೆದ 24 ಗಂಟೆಗಳ ಅವಧಿಯಲ್ಲಿ13,878 ಜನರು ಗುಣಮುಖರಾಗಿದ್ದಾರೆ. ತಿರುವನಂತ ಪುರಂ 1948, ಕೊಲ್ಲಂ 172, ಪತ್ತನಂತಿಟ್ಟ 847, ಆಲಪ್ಪುಳ 868, ಕೊಟ್ಟಾಯಂ 977, ಇಡುಕ್ಕಿ 526, ಎರ್ನಾಕುಲಂ 2498, ತ್ರಿಶೂರ್ 1432, ಪಾಲಕ್ಕಾಡ್ 734, ಮಲಪ್ಪುರಂ 1293, ಕೋಯಿಕ್ಕೋಡ್ 1357, ವಯನಾಡ್ 276, ಕಣ್ಣೂರು 796 ಮತ್ತು ಕಾಸರಗೋಡು 154 ಗುಣಮುಖವಾಗಿದೆ. ಇದರೊಂದಿಗೆ, 1,24,441 ಜನರಿಗೆ ಈ ರೋಗ ಇರುವುದು ಪತ್ತೆಯಾಗಿದ್ದು, ಅವರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 45,88,084 ಜನರನ್ನುಕೊರೊನಾ ಸೋಂಕಿನಿಂದ ಮುಕ್ತಗೊಳಿಸಲಾಗಿದೆ.

ಇದನ್ನೂ ಓದಿ : ಕೋವಿಶೀಲ್ಡ್ ಲಸಿಕೆ ಪಡೆದ ಭಾರತೀಯರಿಗೆ ಗುಡ್ ನ್ಯೂಸ್ ಕೊಟ್ಟ ಇಟಲಿ

ಇದನ್ನೂ ಓದಿ : ಅಕ್ಟೋಬರ್‌ನಲ್ಲಿ ಮಕ್ಕಳಿಗೆ ವ್ಯಾಕ್ಸಿನ್‌ : ಶಾಲೆಗಳಲ್ಲಿ ತುಂಬಾ ಎಚ್ಚರಿಕೆ ಅಗತ್ಯ : ಆರೋಗ್ಯ ಸಚಿವ ಸುಧಾಕರ್‌

( Incessant coronation in Kerala: 9735 people infected, 151 killed )

Comments are closed.