Kerala HC Reunites Lesbian : ಪೋಷಕರ ಒತ್ತಡದಿಂದ ದೂರಾದ ಸಲಿಂಗಕಾಮಿಗಳನ್ನು ಒಂದುಗೂಡಿಸಿದ ಕೇರಳ ಹೈಕೋರ್ಟ್​

Kerala HC Reunites Lesbian  : ಪೋಷಕರ ವಿರೋಧದಿಂದ ದೂರಾಗಿದ್ದ ಸಲಿಂಗಕಾಮಿ ಜೋಡಿಯನ್ನು ಕೇರಳ ಹೈಕೋರ್ಟ್​ ಒಂದುಗೂಡಿಸಿದೆ. ಅರ್ಜಿದಾರ ಯುವತಿಯನ್ನು ಬಲವಂತವಾಗಿ ಪೋಷಕರು ಎಳೆದೊಯ್ದಿದ್ದಾರೆ ಎಂದು ಕೋಝಿಕ್ಕೋಡ್​ ಮೂಲದ ಸಂಗಾತಿಯನ್ನು ನಮ್ಮೊಂದಿಗೆ ಇರಲು ಬಿಡಬೇಕು ಎಂದು ಪೊಲೀಸರಿಗೆ ನಿರ್ದೇಶನ ನೀಡುವಂತೆ ಕೋರಿ ಇಬ್ಬರಲ್ಲಿ ಒಬ್ಬರು ಸಲ್ಲಿಸಿದ ಹೇಬಿಯಸ್​ ಕಾರ್ಪಸ್​ ಅರ್ಜಿಯನ್ನು ಸಲ್ಲಿಸಿದ ಬಳಿಕ ನ್ಯಾಯಾಲಯವು ಮಹಿಳೆಯರಿಗೆ ಒಂದಾಗಿ ವಾಸಿಸಲು ಅನುಮತಿ ನೀಡಿದೆ.


ಕೋಝಿಕ್ಕೋಡ್​ ಮೂಲದ ಯುವತಿಯನ್ನು ತನ್ನ ಮುಂದೆ ಹಾಜರುಪಡಿಸುವಂತೆ ನ್ಯಾಯಾಲಯವು ಪೊಲೀಸರನ್ನು ಸೂಚನೆ ನೀಡಿತು. ಆಕೆಯನ್ನು ನ್ಯಾಯಪೀಠದ ಎದುರು ಹಾಜರುಪಡಿಸಿದಾಗ ಅರ್ಜಿದಾರ ಯುವತಿಯೊಂದಿಗೆ ತಾನು ವಾಸಿಸಲು ಇಚ್ಛಿಸುತ್ತೇನೆ ಎಂದು ಹೇಳಿದ್ದಾಳೆ. ಇಬ್ಬರು ಯುವತಿಯರು ವಯಸ್ಕರಾಗಿರುವುದರಿಂದ ಕೋರ್ಟ್ ಇವರ ಮನವಿಯನ್ನು ಪರಗಣಿಸಿ ಒಟ್ಟಾಗಿ ವಾಸಿಸಲು ಅವಕಾಶ ನೀಡಿದೆ.


ಅರ್ಜಿದಾರ ಯುವತಿಯು ಎರ್ನಾಕುಲಂ ನಿವಾಸಿಯಾಗಿದ್ದಾರೆ. ಆರಂಭದ ದಿನಗಳಲ್ಲಿ ತನ್ನ ಸಹಪಾಠಿಯೊಂದಿಗೆ ಸಲಿಂಗ ಸಂಬಂಧವನ್ನು ಹೊಂದಿದ್ದ ಈಕೆ ಬಳಿಕ ಸೋಶಿಯಲ್​ ಮೀಡಿಯಾದಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಳು. ಇದಾದ ಬಳಿಕ ಮತ್ತೊಬ್ಬ ಯುವತಿಯ ಕುಟುಂಬಸ್ಥರು ಇದನ್ನು ವಿರೋಧಿಸಿದ್ದರು ಹಾಗೂ ಆಕೆಯ ಸಂಗಾತಿಯನ್ನು ಬಲವಂತವಾಗಿ ಕರೆದುಕೊಂಡು ಹೋಗಿದ್ದರು.


ತನ್ನ ಸ್ನೇಹಿತೆಯ ಮನೆಯವರು ಆಕೆಯನ್ನು ಬಲವಂತವಾಗಿ ಕರೆದೊಯ್ದಿದ್ದಾರೆ ಮಾತ್ರವಲ್ಲದೇ ಆಕೆಯನ್ನು ಮರಳಿ ತರುವಲ್ಲಿ ಪೊಲೀಸರು ನನಗೆ ಯಾವುದೇ ರೀತಿಯ ಸಹಾಯವನ್ನು ಮಾಡುತ್ತಿಲ್ಲ ಎಂದು ಸೋಶಿಯಲ್​ ಮೀಡಿಯಾಗಳಲ್ಲಿ ವಿಡಿಯೋ ಪೋಸ್ಟ್​ ಮಾಡಿ ಎರ್ನಾಕುಲಂನ ಯುವತಿ ಆರೋಪಿಸಿದ್ದರು.


ಆದರೆ ಈ ವಿಚಾರವಾಗಿ ಸ್ಪಷ್ಟನೆ ನೀಡಿದ ಪೊಲೀಸರು ಈ ಪ್ರಕರಣದಲ್ಲಿ ನಾವು ಈಗಾಗಲೇ ಮಧ್ಯಪ್ರವೇಶಿಸಿದ್ದೆವು. ಆದರೆ ಕೋಝಿಕ್ಕೋಡ್​ನ ಯುವತಿ ತಾನು ತನ್ನ ಪೋಷಕರ ಜೊತೆ ಇರುತ್ತೇನೆ ಎಂದು ಹೇಳಿಕೆ ನೀಡಿದ್ದರು ಎಂದಿದ್ದಾರೆ. ಆದರೆ ಇದೀಗ ಕೋರ್ಟ್​ ಇವರ ವಾದವನ್ನು ಆಲಿಸಿದ್ದು ಸಲಿಂಗಕಾಮಿಗಳು ಒಟ್ಟಾಗಿ ಬಾಳಬಹುದು ಎಂದು ಹೇಳಿದೆ.

ಇದನ್ನು ಓದಿ : Singer KK dies : ಹಾಡುತ್ತಿರುವಾಗಲೇ ಸಾವನ್ನಪ್ಪಿದ ಖ್ಯಾತ ಗಾಯಕ ಕೃಷ್ಣಕುಮಾರ್ ಕುಂನಾತ್

ಇದನ್ನೂ ಓದಿ : mandya : ಪುತ್ರಿಯ ಮೃತದೇಹದ ಜೊತೆ ನಾಲ್ಕು ದಿನ ಕಳೆದ ತಾಯಿ : ಮಂಡ್ಯದಲ್ಲೊಂದು ವಿಚಿತ್ರ ಘಟನ

Kerala HC Reunites Lesbian Couple Separated by Their Parents

Comments are closed.