Mac drill in hospitals: ಕೊರೊನಾಗೆ ಕಡಿವಾಣ ಹಾಕಲು ಮುಂದಾದ ಕೇಂದ್ರ : ಏ 10, 11 ಕ್ಕೆ ಆಸ್ಪತ್ರೆಗಳಲ್ಲಿ ಮ್ಯಾಕ್‌ ಡ್ರಿಲ್

ನವದೆಹಲಿ : (Mac drill in hospitals) ಕಳೆದ ಎರಡು ಮೂರು ವರ್ಷಗಳ ಹಿಂದಷ್ಟೇ ಕೊರೊನಾ ಇಡೀ ಪ್ರಪಂಚದಾದ್ಯಂತ ನಡುಕವನ್ನೇ ಹುಟ್ಟಿಸಿತ್ತು. ಆರ್ಥಿಕವಾಗಿ, ದೈಹಿಕವಾಗಿ ಎಲ್ಲರನ್ನು ಕುಗ್ಗುವಂತೆ ಮಾಡಿತ್ತು. ಆದರೆ ಎರಡು ವರ್ಷಗಳ ಬಳಿಕ ಕೊರೊನಾ ಮಾಯವಾಗಿ ಜನರು ನಿಟ್ಟುಸಿರು ಬಿಟ್ಟಿದ್ದರು. ಕೊರೊನಾ ಹೋಯ್ತು ಎಂಬ ಹೊತ್ತಲ್ಲೇ ಇದೀಗ ಮತ್ತೆ ಆರ್ಭಟಿಸಲು ಆರಂಭಿಸಿದೆ. ದಿನೇ ದಿನೇ ದೈನಂದಿನ ಧನಾತ್ಮಕತೆಯಲ್ಲಿ ಏರಿಕೆ ಕಾಣುತ್ತಿದ್ದು, ಹೆಚ್ಚುತ್ತಿರುವ ಕೋವಿಡ್‌ ಪ್ರಕರಣಗಳ ಮಧ್ಯೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ ರಾಜ್ಯಗಳಿಗೆ ಜಾಗರೂಕರಾಗಿರಲು ಕೋವಿಡ್‌ ಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ.

ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಹೆಚ್ಚಳದ ಮಧ್ಯೆ ಮನ್ಸುಖ್‌ ಮಾಂಡವೀಯ ಅವರು ಇಂದು ಉನ್ನತ ಮಟ್ಟದ ಸಭೆ ನಡೆಸಿದ್ದು, ಕೊರೊನಾಗೆ ಕಡಿವಾಣ ಹಾಕಲು ಆರೋಗ್ಯ ಸಚಿವಾಲಯ ಮುಂದಾಗಿದೆ. ದೇಶದಾದ್ಯಂತ ಕೋವಿಡ್‌ ಪರಿಸ್ಥಿತಿಯನ್ನು ಪರಿಶೀಲಿಸಿದ್ದು, ತುರ್ತು ಹ್ಯಾಶ್ಟ್ಯಾಗ್‌ ಗಳನ್ನು ಗುರುತಿಸಲು, ಪರೀಕ್ಷೆಯನ್ನು ಹೆಚ್ಚಿಸಲು ಹಾಗೂ ಆಸ್ಪತ್ರೆಯ ಮೂಲಸೌಕರ್ಯಗಳ ಸನ್ನದ್ದತೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳಿಗೆ ಸೂಚಿಸಿದ್ದಾರೆ. ಇದರ ಜೊತೆಗೆ ಏಪ್ರಿಲ್‌ 10 ಮತ್ತು 11 ರಂದು ಎಲ್ಲಾ ಆರೋಗ್ಯ ಸೌಲಭ್ಯಗಳಲ್ಲಿ ಅಣಕು ಡ್ರಿಲ್‌ ಗಳನ್ನು ಪರಿಶೀಲಿಸಲು ಆರೋಗ್ಯ ಇಲಾಖೆಗಳಿಗೆ ಭೇಟಿ ನೀಡುವಂತೆ ರಾಜ್ಯ ಆರೋಗ್ಯ ಸಚಿವರಿಗೆ ಸೂಚಿಸಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಭಾರತವು 6,050 ಹೊಸ ಪ್ರಕರಣಗಳನ್ನ ದಾಖಲಿಸಿದ್ದರೆ, ಸಕ್ರಿಯ ಪ್ರಕರಣಗಳ ಸಂಖ್ಯೆ ಶುಕ್ರವಾರ 28,303 ರಷ್ಟಿದೆ. ಪ್ರತಿ ನಿತ್ಯವೂ ಸಾವಿರದಷ್ಟು ಪ್ರಕರಣಗಳು ಹೆಚ್ಚಾಗುತ್ತಿವೆ. ಭಾರತದಲ್ಲಿ ಒಂದೇ ದಿನದಲ್ಲಿ 6,050 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. 28,303 ಸಕ್ರಿಯ ಪ್ರಕರಣಗಳು ದಾಖಲಾಗಿವೆ. 24 ಗಂಟೆಗಳಲ್ಲಿ ಸುಮಾರು 2716 ಪ್ರಕರಣಗಳ ಏರಿಕೆಯಾಗಿದೆ.

ಇದನ್ನೂ ಓದಿ : ದೇಶದಲ್ಲಿ ಹೆಚ್ಚಿದ ಕೊರೊನಾ ಆತಂಕ : ಈ ಜಿಲ್ಲೆಯಲ್ಲಿ ಮಾಸ್ಕ್‌ ಕಡ್ಡಾಯ

ಇದನ್ನೂ ಓದಿ : India Covid Report : ಒಂದೇ ದಿನದಲ್ಲಿ 5,300ಕ್ಕೂ ಅಧಿಕ ಕೋವಿಡ್ ಪ್ರಕರಣ ದಾಖಲು , ಭಾರತದಲ್ಲಿ ಕೊರೊನಾರ್ಭಟ

ಇದನ್ನೂ ಓದಿ : New Covid cases: ಭಾರತದಲ್ಲಿ ಕೋವಿಡ್ ಅಟ್ಟಹಾಸ : 24 ಗಂಟೆಯಲ್ಲಿ 4000 ಹೊಸ ಕೋವಿಡ್ ಪ್ರಕರಣ ದಾಖಲು

Mac drill in hospitals: Center ready to curb Corona: Mac drill in hospitals on 10, 11

Comments are closed.