Mask compulsory: ರಾಜ್ಯದಲ್ಲಿ ಮತ್ತೆ ಕೊರೊನಾ ಆತಂಕ: ಬೆಂಗಳೂರಿನಲ್ಲಿ ಇಂದಿನಿಂದ ಮಾಸ್ಕ್‌ ಕಡ್ಡಾಯ

ಬೆಂಗಳೂರು: (Mask compulsory) ಭಾರತದ ನೆರೆ ದೇಶಗಳಲ್ಲಿ ಕೊರೊನಾ ತಾಂಡವವಾಡುತ್ತಿರುವ ಹಿನ್ನಲೆಯಲ್ಲಿ ಭಾರತದ ರಾಜ್ಯಗಳಲ್ಲೂ ಕೂಡ ಕೊರೊನಾ ಭೀತಿ ಎದುರಾಗಿದೆ. ಇದೀಗ ಚೀನಾ ಸೇರಿದಂತೆ ನೆರೆ ದೇಶಗಳಲ್ಲಿ ಕೊರೊನಾ ಪ್ರಕರಣಗಳು ಉಲ್ಬಣವಾಗುತ್ತಿರುವ ಹಿನ್ನಲೆಯಲ್ಲಿ ಬೆಂಗಳೂರಿನ ಸಾರ್ವಜನಿಕ ಹಾಗೂ ವಿಶ್ವವಿದ್ಯಾಲಯದಂತಹ ಜನಸಂದಣಿ ಪ್ರದೇಶಗಳಲ್ಲಿ ಮಾಸ್ಕ್‌ ಕಡ್ಡಾಯ ಮಾಡಲಾಗಿದೆ.

ಇದೀಗ ಬೆಂಗಳೂರು ವಿವಿ ಸೇರಿದಂತೆ ಮೆಟ್ರೋ, ವಿಮಾನ ನಿಲ್ದಾಣಗಳಲ್ಲಿ ಮಾಸ್ಕ್‌ ಧರಿಸದೆ ಇದ್ದಲ್ಲಿ ಪ್ರವೇಶ ನಿಷಿದ್ಧವಾಗಿದೆ. ಬೆಂಗಳೂರು ವಿಶ್ವ ವಿದ್ಯಾಲಯಗಳಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಡೆಸುತ್ತಿರುವ ಹಿನ್ನಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮಾಸ್ಕ್ ಕಡ್ಡಾಯ (Mask compulsory) ಮಾಡಲಾಗಿದೆ. ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಮಾಸ್ಕ್ ಕಡ್ಡಾಯಗೊಳಿಸಿದ್ದು, ಬೂಸ್ಟರ್ ಡೋಸ್ ಪಡೆಯುವಂತೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಕೊರೊನಾ ಮಾರ್ಗಸೂಚಿ ಪಾಲಿಸಲು ಬೆಂಗಳೂರು ವಿವಿ ಕುಲಸಚಿವ ಸುತ್ತೋಲೆ ಹೊರಡಿಸಿದೆ.

ಇನ್ನೂ ಮೆಟ್ರೋ ಹಾಗೂ ವಿಮಾನ ನಿಲ್ದಾಣಗಳಲ್ಲಿ ಮಾಸ್ಕ್‌ ಇಲ್ಲದೆ ಪ್ರಯಾಣಿಕರಿಗೆ ಪ್ರವೇಶ ನೀಡಲಾಗುವುದಿಲ್ಲ ಎಂದು ರಾಜ್ಯ ಸರಕಾರ ತಿಳಿಸಿದೆ. ಇಂದಿನಿಂದ ಬೆಂಗಳೂರಿನಲ್ಲಿ ಮಾಸ್ಕ್‌ ಕಡ್ಡಾಯವಾಗಿದ್ದು, ಮಾರ್ಷೆಲ್‌ ಗಳ ಮೂಲಕ ಮಾಸ್ಕ್‌ ಜಾಗ್ರತಿಯನ್ನು ಜನರಲ್ಲಿ ಮೂಡಿಸಲಾಗುತ್ತಿದೆ. ಹೊರದೇಶದಿಂದ ಜನರು ರಾಜ್ಯಕ್ಕೆ ಬರುವ ಹಿನ್ನಲೆಯಲ್ಲಿ ಕೊರೊನಾ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಿವೆ. ಹಾಗಾಗಿ ಜನಸಂದಣಿ ಸೇರುವ ಪ್ರದೇಶಗಳಲ್ಲಿ ಮಾಸ್ಕ್‌ ಧರಿಸುವುದು ಕಡ್ಡಾಯವಾಗಿದೆ.

ಇದನ್ನೂ ಓದಿ : Corona positivity: ಕೊರೊನಾ ಭೀತಿಯ ನಡುವಲ್ಲೇ ಸಿಹಿಸುದ್ದಿ : ಕರ್ನಾಟಕದಲ್ಲಿ ಪಾಸಿಟಿವಿಟಿ ದರ ಶೇ. 1.45ಕ್ಕೆ ಇಳಿಕೆ

ಇದನ್ನೂ ಓದಿ : Coronavirus Lockdown News Today : ಕ್ರಿಸ್‌ಮಸ್‌, ಹೊಸ ವರ್ಷಕ್ಕೂ ಮೊದಲು ಭಾರತದಲ್ಲಿ ಕೋವಿಡ್ ನಿರ್ಬಂಧ ಸಾಧ್ಯತೆ

ಇದು ಬರೀ ಬೆಂಗಳೂರಿಗೆ ಮಾತ್ರ ಸೀಮಿತವಾದದ್ದಲ್ಲ, ಇಡೀ ರಾಜ್ಯಕ್ಕೆ ಅನುಗುಣವಾಗಿ ಶಿಫಾರಸ್ಸು ಮಾಡಲಾಗಿದೆ. ಬೆಂಗಳೂರಿನಲ್ಲಿ ಹಬ್ಬ-ಆಚರಣೆಗಳು ನಡೆಯುವ ಬಗ್ಗೆ ತಜ್ಞರು ಮತ್ತು ಸರ್ಕಾರ ಗಮನಕ್ಕೆ ತೆಗೆದುಕೊಂಡಿದೆ. ಎಲ್ಲಾ ಅಂಶಗಳನ್ನು ಗಮನದಲ್ಲಿರಿಕೊಂಡು ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ತಜ್ಞರು ಹೇಳಿದರು. ಹೆಚ್ಚು ಜನದಟ್ಟಣೆ ಇರುವ ಜಾಗಗಳಿಂದ ಸಾರ್ವಜನಿಕರು ದೂರುವಿರಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಆಗಾಗ ಕೈ ತೊಳೆಯುವ ಅಭ್ಯಾಸವನ್ನು ಮತ್ತೆ ರೂಢಿಸಿಕೊಳ್ಳಬೇಕು ಎಂದು ಜನರಿಗೆ ಮಾರ್ಷೆಲ್‌ ಗಳ ಮೂಲಕ ಜಾಗ್ರತಿ ಮೂಡಿಸುವ ಕೆಲಸ ರಾಜ್ಯ ಸರಕಾರ ಮಾಡುತ್ತಿದೆ.

(Mask Compulsory) In the background of Corona spreading in the neighboring countries of India, there is also a fear of Corona in the states of India. Masks have now been made mandatory in public and crowded places like universities in Bengaluru against the background of escalating cases of Corona in neighboring countries including China.

Comments are closed.