ಕೆ.ಎಲ್ ರಾಹುಲ್‌ಗೆ ಏನಾಯ್ತು? ಸತತ 5 ಇನ್ನಿಂಗ್ಸ್‌ನಲ್ಲೂ ಫೇಲ್, ಹೀಗೆ ಆದ್ರೆ ಕರಿಯರ್ ಕಷ್ಟ ಕಷ್ಟ!

ಮೀರ್’ಪುರ್: ಟೀಮ್ ಇಂಡಿಯಾಗೆ ಕಾಲಿಟ್ಟಾಗ ಅಪಾರ ಭರವಸೆ ಮೂಡಿಸಿದ್ದ ಆಟಗಾರ. ಜ್ಯೂನಿಯರ್ ರಾಹುಲ್ ದ್ರಾವಿಡ್ (Jr. Rahul Dravid KL Rahul) ಎಂದೇ ಫೇಮಸ್ ಆಗಿದ್ದ ಪ್ರತಿಭಾವಂತ. ಆದ್ರೆ ಈಗ ನೋಡಿದ್ರೆ ವೈಫಲ್ಯಗಳ ಮೇಲೆ ವೈಫಲ್ಯ. ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಬಾಂಗ್ಲಾದೇಶ ಪ್ರವಾಸದಲ್ಲಿ ಮತ್ತೊಂದು ವೈಫಲ್ಯ ಎದುರಿಸಿದ್ದಾರೆ.

ಮೀರ್’ಪುರ್’ನಲ್ಲಿರುವ ಶೇರ್ ಎ ಬಾಂಗ್ಲಾ ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ (India Vs Bangladesh 2nd test macth) ಪ್ರಥಮ ಇನ್ನಿಂಗ್ಸ್’ನಲ್ಲಿ ಟೀಮ್ ಇಂಡಿಯಾ ನಾಯಕ ಕೆ.ಎಲ್ ರಾಹುಲ್ ಕೇವಲ 10 ರನ್ ಗಳಿಸಿ ಔಟಾಗಿದ್ದಾರೆ. ಪ್ರಥಮ ಟೆಸ್ಟ್ ಪಂದ್ಯದಲ್ಲೂ ವಿಫಲರಾಗಿದ್ದ ರಾಹುಲ್ ಎರಡೂ ಇನ್ನಿಂಗ್ಸ್ ಸೇರಿ ಕೇವಲ 45 ರನ್ (22, 23) ಗಳಿಸಿದ್ದರು. ಇದೀಗ 2ನೇ ಟೆಸ್ಟ್ ಪಂದ್ಯದಲ್ಲೂ ಮುಗ್ಗರಿಸಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲೇ 73 ರನ್ ಗಳಿಸಿ ಬಾಂಗ್ಲಾ ಪ್ರವಾಸದಲ್ಲಿ ಉತ್ತಮ ಆರಂಭ ಪಡೆದಿದ್ದ ರಾಹುಲ್ ನಂತರದ ನಾಲ್ಕೂ ಇನ್ನಿಂಗ್ಸ್’ಗಳಲ್ಲಿ ಎಡವಿದ್ದಾರೆ. 2ನೇ ಏಕದಿನ ಪಂದ್ಯದಲ್ಲಿ 14 ರನ್, 3ನೇ ಪಂದ್ಯದಲ್ಲಿ 8 ರನ್, ಪ್ರಥಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್’ನಲ್ಲಿ 22 ರನ್, 2ನೇ ಇನ್ನಿಂಗ್ಸ್’ನಲ್ಲಿ 23 ರನ್ ಹಾಗೂ ದ್ವಿತೀಯ ಟೆಸ್ಟ್ ಪಂದ್ಯದ ಪ್ರಥಮ ಇನ್ನಿಂಗ್ಸ್’ನಲ್ಲಿ ಕೇವಲ 10 ರನ್ ಗಳಿಸಿ ಔಟಾಗಿದ್ದಾರೆ.

ಬಾಂಗ್ಲಾದೇಶ ಪ್ರವಾಸದಲ್ಲಿ ರಾಹುಲ್ ಗಳಿಸಿರುವ ಸ್ಕೋರ್ :

  • ಪ್ರಥಮ ಏಕದಿನ: 73
  • 2ನೇ ಏಕದಿನ: 14
  • 3ನೇ ಏಕದಿನ: 08
  • ಪ್ರಥಮ ಟೆಸ್ಟ್: 22, 23
  • ದ್ವಿತೀಯ ಟೆಸ್ಟ್: 10

ಇದನ್ನೂ ಓದಿ : Ranji Trophy : ಕರ್ನಾಟಕಕ್ಕೆ ಮೊದಲ ಜಯ, 3ನೇ ದಿನಗಳಲ್ಲಿ ಗೆದ್ದು ಬೀಗಿದ ಮಯಾಂಕ್ ಬಾಯ್ಸ್

ಇದನ್ನೂ ಓದಿ : Jaydev Unadkat : 12 ವರ್ಷಗಳ ನಂತರ ಭಾರತ ಪರ ಟೆಸ್ಟ್ ಆಡುವ ಅವಕಾಶ, ಇದು ಸೌರಷ್ಟ್ರದ ಛಲದಂಕಮಲ್ಲನ ಕಥೆ

ಇದನ್ನೂ ಓದಿ : Kuldeep Yadav Dropped : ಕಳೆದ ಪಂದ್ಯದಲ್ಲಿ ‘ಮ್ಯಾನ್ ಆಫ್ ದಿ ಮ್ಯಾಚ್’, ಈ ಪಂದ್ಯದಲ್ಲಿ ತಂಡದಿಂದಲೇ ಔಟ್ : Sorry ಕುಲ್‌ದೀಪ್ ಯಾದವ್

ಭಾರತ ಟೆಸ್ಟ್ ತಂಡದ ನಾಯಕತ್ವ ವಹಿಸಿರುವ ಸಂಭ್ರಮದ ಮಧ್ಯೆ ಕೆ.ಎಲ್ ರಾಹುಲ್ ಅವರ ವೈಯಕ್ತಿಕ ಫಾರ್ಮ್ ಕೈಕೊಟ್ಟಿರುವುತ್ತದೆ. ಈಗಾಗಲೇ ಭಾರತ ತಂಡದಲ್ಲಿ ಅವಕಾಶಕ್ಕಾಗಿ ತೀವ್ರ ಸ್ಪರ್ಧೆಯಿದೆ. ರೋಹಿತ್ ಶರ್ಮಾ ಗಾಯಗೊಂಡಿರುವ ಕಾರಣ ಅವರ ಸ್ಥಾನದಲ್ಲಿ ಆಡುತ್ತಿರುವ ಯುವ ಬಲಗೈ ಓಪನರ್ ಶುಭಮನ್ ಗಿಲ್ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಶತರ ಬಾರಿಸಿ ಗಮನ ಸೆಳೆದಿದ್ದಾರೆ. ಮತ್ತೊಂದೆಡೆ ಯುವ ಆಟಗಾರರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಇದರ ಮಧ್ಯೆ ರಾಹುಲ್ ಪದೇ ಪರೇ ವಿಫಲರಾಗುತ್ತಿರುವುದು ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾದಲ್ಲಿ ಅವರ ಸ್ಥಾನಕ್ಕೆ ಕುತ್ತು ತಂದರೂ ಅಚ್ಚರಿಯಿಲ್ಲ.

Jr. Rahul Dravid KL Rahul : What happened to KL Rahul? Failed in 5 consecutive innings, so the career is difficult!

Comments are closed.