Sleeping Problem Tips:ರಾತ್ರಿ ಸರಿಯಾಗಿ ನಿದ್ದೆ ಬರುತ್ತಿಲ್ಲವೇ ? ಹಾಗಾದ್ರೆ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ

(Sleeping Problem Tips)ಉತ್ತಮ ನಿದ್ರೆಯು ನಮ್ಮ ದೇಹ ಮತ್ತು ಮನಸ್ಸಿಗೆ ಹೆಚ್ಚು ಅಗತ್ಯವಿರುವ ವಿಶ್ರಾಂತಿಯನ್ನು ಒದಗಿಸುತ್ತದೆ. ಆರೋಗ್ಯಕರ ಜೀವನಶೈಲಿ ನಡೆಸಲು ನಿದ್ದೆ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಂಪೂರ್ಣವಾದ ಉತ್ತಮ ನಿದ್ರೆ ಮಾಡುವುದರಿಂದ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ . ಒಟ್ಟು 8 ಗಂಟೆಯವರೆಗೆ ನಿದ್ದೆ ಮಾಡಬೇಕು ಎನ್ನುತ್ತಾರೆ ಆದರೆ ಇತ್ತೀಚಿನ ಜೀವನಶೈಲಿಯಿಂದಾಗಿ ಹಲವರು ನಿದ್ದೆ ಮಾಡಲು ಹೆಣಗಾಡುತ್ತಿದ್ದಾರೆ. ಪ್ರತಿದಿನ ಉತ್ತಮ ನಿದ್ದೆಯನ್ನು ಮಾಡದಿದ್ದರೆ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಹಾಗಾಗಿ ಪ್ರತಿದಿನ ನಿದ್ದೆ ಮಾಡುವ ಮುನ್ನ ಕೆಲವು ಹವ್ಯಾಸವನ್ನು ರೂಡಿಸಿಕೊಳ್ಳುವುದರಿಂದ ನಿಮ್ಮ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಬಹುದು. ಇದರ ಮಾಹಿತಿಯ ಕುರಿತು ತಿಳಿದುಕೊಳ್ಳೋಣ.

(Sleeping Problem Tips)ಮಲಗುವ ಮುನ್ನ ಮೊಬೈಲ್‌ ಬಳಕೆ ಮಾಡಬೇಡಿ
ಮಲಗುವ ಮುನ್ನ ಕೆಲವರು ಮೊಬೈಲ್‌ ಬಳಕೆ ಮಾಡುವುದರಿಂದ ಇದರ ಪ್ರಕಾಶಮಾನವಾದ ಬೆಳಕು ಸರಿಯಾಗಿ ನಿದ್ದೆ ಮಾಡಲು ಬಿಡುವುದಿಲ್ಲ ಮತ್ತು ಆಗಾಗ ಮಧ್ಯ ಎಚ್ಚರಗೊಳ್ಳುವಂತೆ ಮಾಡುತ್ತದೆ. ಮತ್ತು ಮೊಬೈಲ್‌ ಬೆಳಕು ನಮ್ಮ ದೇಹದ ಮೆಲಟೋನಿನ್ ಉತ್ಪಾದನೆಯನ್ನು ನಿಗ್ರಹಿಸುವಂತೆ ಮಾಡಿ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ ಹಾಗಾಗಿ ಮಲಗುವ ಮುನ್ನ ಮೊಬೈಲ್‌ ಬಳಕೆ ಮಾಡುವುದನ್ನು ಕಡಿಮೆ ಮಾಡಿ. ಒಂದುವೇಳೆ ನಿದ್ದೆ ಬರದಿದ್ದರೆ ಪುಸ್ತಕವನ್ನು ಓದುವ ಹವ್ಯಾಸ ಮಾಡಿಕೊಂಡರೆ ಇನ್ನು ಉತ್ತಮ.

ಬೆಳಿಗ್ಗಿನ ಬಿಸಿಲಿಗೆ ಕಾಲು ನಿಮಿಷ ನಿಂತುಕೊಳ್ಳಿ
ಇಡೀ ದಿನ ಮನೆಯೊಳಗೆ ಕುಳಿತುಕೊಂಡರೆ ನಿಮ್ಮ ನಿದ್ದೆಯ ಮೇಲೆ ಪರಿಣಾಮ ಬೀರುತ್ತದೆ. ಸೂರ್ಯನ ಕಿರಣ ನಮ್ಮ ನಿದ್ದೆಗೆ ಬೇಕಾದ ಮೆಲಟೋನಿನ್ ಉತ್ಪಾದನೆ ಆಗಲು ಸಹಾಯ ಮಾಡುತ್ತದೆ. ಇದರಿಂದಾಗಿ ನೀವು ಉತ್ತಮ ನಿದ್ದೆಯನ್ನು ಮಾಡಬಹುದು.

ಕಾಫಿ ಕುಡಿಯುವುದು ಕಡಿಮೆ ಮಾಡಿ
ದಿನವಿಡೀ ಕಾಫಿ ಕುಡಿಯುವ ಹವ್ಯಾಸವನ್ನು ರೂಡಿಸಿಕೊಂಡರೆ ನಿಮ್ಮ ದೇಹಕ್ಕೆ ಹಾನಿ ಮಾಡಬಹುದು ಮತ್ತು ನಿದ್ದೆ ಬರದಂತೆ ಮಾಡುತ್ತದೆ. ಕೆಲವರು ಕೆಲಸ ಮಾಡುವ ಸಂದರ್ಭದಲ್ಲಿ ಮತ್ತು ಓದುವ ಸಂದರ್ಭದಲ್ಲಿ ನಿದ್ದೆ ಬರಬಾರದೆಂದು ಕಾಫಿ ಕುಡಿಯುತ್ತಾರೆ. ಇನ್ನು ಕೆಲವರು ಕಾಫಿ ಕುಡಿಯುವ ಹವ್ಯಾಸವನ್ನು ರೂಡಿಸಿಕೊಂಡಿರುತ್ತಾರೆ ಪ್ರತಿದಿನ ಕಾಫಿ ಕುಡಿಯುವ ಹವ್ಯಾಸ ಉತ್ತಮವಲ್ಲ ಇದನ್ನು ಕಡಿಮೆ ಮಾಡಿದರೆ ನಿದ್ರಾಹೀನತೆ ಸಮಸ್ಯೆ ಕಡಿಮೆ ಮಾಡಿಕೊಳ್ಳಬಹುದು.

ಮಲಗುವ ಮುನ್ನ ಕಾಲು ನಿಮಿಷ ಧ್ಯಾನ ಮಾಡಿ
ಮಲಗುವ ಸಮಯದಲ್ಲಿ ಎನೆನೋ ಯೋಚನೆಗಳು ನಿಮ್ಮ ತಲೆಯನ್ನು ಹೊಕ್ಕಿ ಅದರ ಬಗ್ಗೆ ಚಿಂತೆ ಮಾಡುತ್ತಾ ನಿದ್ದೆ ಮಾಡುವುದಿಲ್ಲ. ಇಂತಹ ಸಮಸ್ಯೆಗಳು ನಿಮ್ಮನ್ನು ಕಾಡುತ್ತಿದ್ದರೆ ನಿದ್ದೆ ಮಾಡುವ ಮುನ್ನ ಕಾಲು ನಿಮಿಷ ಧ್ಯಾನ ಮಾಡಿ ನಂತರ ಮಲಗಿದರೆ ಮದ್ಯ ರಾತ್ರಿ ಎಚ್ಚರವಾಗುವುದಿಲ್ಲ ಮತ್ತು ಉತ್ತಮವಾಗಿ ನಿದ್ರಿಸಬಹುದು.

ಇದನ್ನೂ ಓದಿ:Cracked Heels Reduce Tips:ನಿಮ್ಮ ಹಿಮ್ಮಡಿ ಬಿರುಕು ಬಿಡುತ್ತಿದ್ದರೆ ಚಿಂತೆ ಬೇಡ ಇಲ್ಲಿದೆ ಪರಿಹಾರ

ಇದನ್ನೂ ಓದಿ:Green Gram Rotti Recipe :ಶುಗರ್‌, ಥೈರಾಯ್ಡ್‌ ಸಮಸ್ಯೆ ನಿವಾರಿಸುತ್ತೆ ಹೆಸರು ಕಾಳಿನ ರೊಟ್ಟಿ

ಇದನ್ನೂ ಓದಿ:Mustard Oil Health Tips:ಹಳೆ ನೋವು ನಿಮ್ಮನ್ನು ಕಾಡುತ್ತಿದೇಯೇ? ಹಾಗಾದ್ರೆ ಬಳಸಿ ಸಾಸಿವೆ ಎಣ್ಣೆ

ರಾತ್ರಿ ಲಘು ಆಹಾರವನ್ನು ಸೇವನೆ ಮಾಡಿ
ರಾತ್ರಿ ಕಡಿಮೆ ಆಹಾರವನ್ನು ತೆಗೆದುಕೊಳ್ಳುವುದರಿಂದ ಉತ್ತಮವಾಗಿ ನಿದ್ರಿಸಬಹುದು. ಅತಿ ಹೆಚ್ಚು ಆಹಾರವನ್ನು ತೆಗೆದುಕೊಂಡರೆ ನಿಮ್ಮ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ ಹಾಗಾಗಿ ಕಡಿಮೆ ಆಹಾರವನ್ನು ಸೇವನೆ ಮಾಡಿ. ಮತ್ತು ಮಧ್ಯ ರಾತ್ರಿ ತಿನ್ನುವ ಹವ್ಯಾಸವನ್ನು ಕಡಿಮೆ ಮಾಡಿಕೊಳ್ಳಿ

Sleeping Problem Tips Not sleeping well at night? So adopt these habits

Comments are closed.