New Record Corona Vaccine : ಕೊನೆಗೂ ಓಮಿಕ್ರಾನ್ ಭಯಕ್ಕೆ ಎಚ್ಚೆತ್ತ ಜನರು: ಕೊರೊನಾ ಲಸಿಕೆಯಲ್ಲಿ ದಾಖಲೆ ಬರೆದ ಮಧ್ಯವಯಸ್ಕರು

ಬೆಂಗಳೂರು : ಲಸಿಕೆ ಪಡೆಯದೇ ಕೊರೋನಾ ಮೂರನೇ ಅಲೆ ಬರೋದಿಲ್ಲ ಎಂದು ಬೇಜವಾಬ್ದಾರಿ ಯಿಂದ ಓಡಾಡುತ್ತಿದ್ದ ಲಕ್ಷಾಂತರ ಜನರಿಗೆ ಮತ್ತೆ ಏರಿಕೆಯಾಗುತ್ತಿರುವ ಕೊರೋನಾ ಸಂಖ್ಯೆ ಹಾಗೂ ಓಕ್ರಾನ್ ರೂಪಾಂತರಿ (Omicron) ವೈರಸ್ ಚುರುಕು ಮುಟ್ಟಿಸಿದೆ. ಅಷ್ಟೇ ಅಲ್ಲ ಮತ್ತೊಮ್ಮೆ ಕರೋನಾ ನಿಯಮಗಳು, ಎಚ್ಚರಿಕೆಗಳನ್ನು ಪಾಲಿಸುವಂತ ಭಯ ಹುಟ್ಟಿಸಿದೆ. ಈ ಮಧ್ಯೆ ಲಸಿಕೆ ವಿಚಾರದಲ್ಲೂ ಸೋಂಕಿನ ಭಯ ಕೆಲಸ ಮಾಡಿದ್ದು, ಮೊದಲ ಡೋಸ್ ನಲ್ಲಿ (New Record Corona Vaccine) ರಾಜ್ಯ ಹೊಸ ದಾಖಲೆ ಬರೆದಿದೆ.

ಓಮಿಕ್ರಾನ್ ಭೀತಿಯಿಂದ ಜನತೆಯಲ್ಲಿ ಮತ್ತೊಮ್ಮೆ ಲಸಿಕೆಯ ಬಗ್ಗೆ ಪ್ರೀತಿ ಹುಟ್ಟಿಕೊಂಡಿದೆ. ಹೀಗಾಗಿ ಜನರು ಮತ್ತೆ ಲಸಿಕೆ ಹಾಕಿಸುವತ್ತ ಮುಖಮಾಡಿದ್ದಾರೆ. ಅದರಲ್ಲೂ ವಿಶೇಷತೆ ಯೆಂದರೇ 45 ರಿಂದ 59 ವಯಸ್ಕರು ಸಂಪೂರ್ಣ ಲಸಿಕೆ ಪಡೆದಿದ್ದು 100 ಕ್ಕೆ 100 ರಷ್ಟು ದಾಖಲೆ ಬರೆದಿದ್ದಾರೆ. ಓಮೈಕ್ರಾನ್ ಪ್ರಕರಣ ರಾಜ್ಯದಲ್ಲಿ ಇದುವರೆಗೂ 19 ಪ್ರಕರಣ ದಾಖಲಾಗಿದೆ. ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಹೀಗಾಗಿ‌ ಜನರು ಮತ್ತು ಲಸಿಕೆ ಹಾಕಿಸಿಕೊಳ್ಳುವತ್ತ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.

ಅದರಲ್ಲೂ ರಾಜ್ಯದಲ್ಲಿ ಲಸಿಕೆ ಪಡೆದವರಲ್ಲಿ ಮಧ್ಯ ವಯಸ್ಕರೇ ಮೈಲುಗೈ ಸಾಧಿಸಿದ್ದಾರೆ. ರಾಜ್ಯದಲ್ಲಿರುವ 1 ಕೋಟಿ 20 ಲಕ್ಷ ಅರ್ಹರಿದ್ದು ಎಲ್ಲರೂ ಲಸಿಕೆ ಪಡೆದು 100 ಕ್ಕೆ 100 ರಷ್ಟು ಲಸಿಕೆ ಪಡೆದ ದಾಖಲೆ ಬರೆದಿದ್ದಾರೆ. ಮಾತ್ರವಲ್ಲ ಎರಡನೇ ಡೋಸ್ ಪಡೆಯೋದರಲ್ಲೂ ಮಧ್ಯ ವಯಸ್ಕರೇ ಮುಂದಿದ್ದಾರೆ. ಇದುವರೆಗೂ ದೇಶದ ಯಾವ ರಾಜ್ಯದಲ್ಲೂ ಮಧ್ಯ ವಯಸ್ಕರು ಇಷ್ಟು ಪ್ರಮಾಣದಲ್ಲಿ ಲಸಿಕೆ ಪಡೆದಿಲ್ಲ. ಇಷ್ಟೇ ಅಲ್ಲ ಎರಡನೇ ಡೋಸ್ ನಲ್ಲೂ ಈಗಾಗಲೇ ಮಧ್ಯ ವಯಸ್ಕರು ಶೇಕಡಾ 81 ರಷ್ಟು ಜನರು ಲಸಿಕೆ ಪಡೆದು ಮತ್ತೊಂದು ದಾಖಲೆ ಬರೆಯಲು ಸಿದ್ಧವಾಗುತ್ತಿದ್ದಾರೆ.

ಇನ್ನು ರಾಜ್ಯದಲ್ಲಿ 6 ಲಕ್ಷ ವೃದ್ಧರು ಮೊದಲ ಡೋಸ್ ಪಡೆಯುವುದು ಬಾಕಿ ಇದ್ದು, 15 ಲಕ್ಷಕ್ಕೂ ಅಧಿಕ 18 ರಿಂದ 44 ವಯೋಮಾನದ ಜನರು ಮೊದಲ ಡೋಸ್ ನ್ನೂ ಪಡೆದಿಲ್ಲ ಎಂಬುದು ಆತಂಕದ ಸಂಗತಿ. ಇನ್ನು ಒಟ್ಟಾರೆ ಅಂಕಿ ಅಂಶವನ್ನು ಗಮನಿಸೋದಾದರೇ ರಾಜ್ಯದಲ್ಲಿ ಒಟ್ಟು 4 ಕೋಟಿ 81 ಲಕ್ಷ ಜನರು ಲಸಿಕೆಗೆ ಅರ್ಹರಿದ್ದು ಈ ಪೈಕಿ 21 ಲಕ್ಷ ಜನರು ಮೊದಲ ಡೋಸ್ ಪಡೆದಿಲ್ಲ. 40 ಲಕ್ಷ ಜನರು ಎರಡನೇ ಡೋಸ್ ಪಡೆದಿಲ್ಲ. ಇದರಿಂದ ರಾಜ್ಯವು ಮೊದಲನೇ ಡೋಸ್ ನಲ್ಲಿ 96% ರಷ್ಟು ಹಾಗೂ ಎರಡನೇ ಡೋಸ್ ನಲ್ಲಿ 76% ರಷ್ಟು ಡೋಸ್ ಸಾಧನೆ ಮಾಡಿದೆ.

ಇದನ್ನೂ ಓದಿ : Omicron Coronavirus : ದೇಶದಲ್ಲಿ ಸದ್ದಿಲ್ಲದೇ ಏರಿಕೆ ಕಂಡ ಒಮಿಕ್ರಾನ್​ ಪ್ರಕರಣ: ದೇಶಾದ್ಯಂತ 200 ಪ್ರಕರಣ ವರದಿ

ಇದನ್ನೂ ಓದಿ : New Year 2022 : ಹೊಸ ವರ್ಷಾಚರಣೆ ಡಿಜೆ ಪಾರ್ಟಿಗೆ ಬ್ರೇಕ್‌ : ಸಿಎಂ ಬಸವರಾಜ್‌ ಬೊಮ್ಮಾಯಿ

( Omicron fearful people at last: middle aged men new record corona vaccine)

Comments are closed.