Toothache :ಹಲ್ಲು ನೋವಿನಿಂದ ಬಳಲುತ್ತಿದ್ದೀರೇ..? ನಿಮ್ಮ ಅಡುಗೆ ಮನೆಯಲ್ಲೇ ಇದೆ ಇದಕ್ಕೆ ಪರಿಹಾರ

ಹಲ್ಲು ನೋವಿನ (Toothache) ಸಮಸ್ಯೆಯು ಮಾರಣಾಂತಿಕವಲ್ಲದೇ ಇದ್ದರೂ ಸಹ ಇದರಿಂದ ಉಂಟಾಗುವ ಕಿರಿಕಿರಿ ಮಾತ್ರ ಅನುಭವಿಸಿದವರಿಗೆ ಗೊತ್ತು. ಆಸ್ಪತ್ರೆಗೆ ತೆರಳುವ ಮಧ್ಯದಲ್ಲಿ ಉಂಟಾಗುವ ನೋವನ್ನು ಅನುಭವಿಸುವ ಕಷ್ಟ ಯಾರಿಗೂ ಬೇಡ. ಆದರೆ ನೀವು ಇಷ್ಟೆಲ್ಲ ಕಷ್ಟ ಪಡಬೇಕಿಲ್ಲ. ಮನೆಯಲ್ಲಿ ಇರುವ ಕೆಲ ಆಹಾರ ಪದಾರ್ಥಗಳನ್ನೇ ಬಳಸಿ ನೀವು ಹಲ್ಲು ನೋವಿನಿಂದ ತಾತ್ಕಾಲಿಕ ಮುಕ್ತಿಯನ್ನಂತೂ ಪಡೆಯಬಹುದಾಗಿದೆ.

ಲವಂಗ ಎಣ್ಣೆ: ಹಲ್ಲು ನೋವನ್ನು ನಿಭಾಯಿಸಲು ಲವಂಗವು ಸಾಕಷ್ಟು ಪರಿಣಾಮಕಾರಿ ಎಂದು ಹೇಳಲಾಗುತ್ತದೆ ಏಕೆಂದರೆ ಅದು ನೋವನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಯುಜೆನಾಲ್ ಎಂಬ ಅಂಶವಿದೆ. ಇದು ಒಂದು ರೀತಿಯ ನೈಸರ್ಗಿಕ ಅರಿವಳಿಕೆಯಾಗಿದೆ. ನೀವು ಅದನ್ನು ನೇರವಾಗಿ ನೋವು ಮಾಡುತ್ತಿರುವ ಹಲ್ಲಿನ ಮೇಲೆ ಅಥವಾ ಹತ್ತಿಗೆ ಲವಂಗದ ರಸವನ್ನು ಹಾಕಿ ನೋವಾಗುತ್ತಿರುವ ಹಲ್ಲಿನ ಮೇಲೆ ಇಟ್ಟುಕೊಳ್ಳಬಹುದು.

ಬೆಳ್ಳುಳ್ಳಿ: ಬೆಳ್ಳುಳ್ಳಿಯಲ್ಲಿ ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿರುವ ಅಲಿಸಿನ್ ಎಂಬ ಅಂಶವು ಹಲ್ಲುನೋವು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ನಾಶಮಾಡಲು ಸಹಾಯ ಮಾಡುತ್ತದೆ. ನೀವು ಅದನ್ನು ನೇರವಾಗಿ ಅಗಿಯಬಹುದು ಅಥವಾ ಅದರಲ್ಲಿ ಕಲ್ಲು ಉಪ್ಪನ್ನು ಬೆರೆಸಿ ಪೇಸ್ಟ್‌ನಂತೆ ಬಳಸಬಹುದು.

ವೆನಿಲ್ಲಾ ರಸ: ವೆನಿಲ್ಲಾ ರಸದಲ್ಲಿರುವ ಆಲ್ಕೋಹಾಲ್ ಅಂಶವು ಸ್ವಲ್ಪ ಸಮಯದವರೆಗೆ ನೋವನ್ನು ನಿಷ್ತೇಜಗೊಳಿಸುತ್ತದೆ. ಇದು ಉರಿಯೂತವನ್ನು ಗುಣಪಡಿಸಲು ಸಹಾಯ ಮಾಡುವ ನಿರೋಧಕಗಳನ್ನು ಸಹ ಹೊಂದಿದೆ. ನೀವು ಅದನ್ನು ನೇರವಾಗಿ ಅಥವಾ ಹತ್ತಿಯ ಮೂಲಕ ನೋವಿಗೆ ಕಾರಣವಾದ ಹಲ್ಲಿನ ಮೇಲೆ ಇಟ್ಟುಕೊಳ್ಳಬಹುದು.

ಅರಿಶಿಣ: ನಿಮ್ಮ ಅಡುಗೆಮನೆಯಲ್ಲಿರುವ ಅರಿಶಿಣವು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ ಮತ್ತು ಇದು ಉರಿಯೂತವನ್ನು ತಡೆಯುತ್ತದೆ. ಸಾಸಿವೆ ಎಣ್ಣೆಯೊಂದಿಗೆ ಅರಿಶಿನ ಪುಡಿಯನ್ನು ಮಿಶ್ರಣ ಮಾಡಿ. ಪ್ರತಿ ರಾತ್ರಿ ಮಲಗುವ ಮುನ್ನ ಇದನ್ನು ನೋವಿರುವ ಹಲ್ಲಿಗೆ ಹಚ್ಚಿಕೊಳ್ಳಿ.

ಇದನ್ನು ಓದಿ : Coffee Chicory : ಕಾಫಿಯಲ್ಲಿರೋ ಚಿಕೋರಿ ಬಗ್ಗೆ ನಿಮಗೆಷ್ಟು ಗೊತ್ತು

ಇದನ್ನೂ ಓದಿ : Carrot Juice Benefits : ಒಂದು ಲೋಟ ಕ್ಯಾರೆಟ್​ ಜ್ಯೂಸ್​​​ ಸೇವನೆಯಿಂದ ದೇಹಕ್ಕೆ ಸಿಗಲಿದೆ ಅಗಾಧ ಲಾಭ

ಇದನ್ನೂ ಓದಿ : ದಿನಕ್ಕೊಂದು ನೆಲ್ಲಿಕಾಯಿ ಸೇವನೆಯಿಂದ ವಾಸಿಯಾಗಲಿದೆ ಈ ಮಾರಕ ಕಾಯಿಲೆ..!

troubled with toothache try these effective home remedies

Comments are closed.