Skincare Tips : ತ್ವಚೆಯನ್ನು ಕಾಂತಿಯುತಗೊಳಿಸಲು ಬಳಕೆ ಮಾಡಿ ‘ಮೊಸರು’

Skincare Tips :ನೀವು ಆಕರ್ಷಕವಾಗಿ ಕಾಣಬೇಕು ಅಂದರೆ ತ್ವಚೆಯ ಆರೈಕೆ ಮಾಡೋದು ಕೂಡ ಅಷ್ಟೇ ಮುಖ್ಯ. ತ್ವಚೆಯನ್ನು ಆರೈಕೆ ಮಾಡೋದು ಕಷ್ಟದ ಕೆಲಸವಾದರೂ ಸಹ ಅದನ್ನು ಅನಿವಾರ್ಯವಾಗಿ ಮಾಡಲೇಬೇಕು. ನಿಮ್ಮ ಒತ್ತಡದ ಜೀವನದ ನಡುವೆಯೂ ತ್ವಚೆಯ ಆರೈಕೆಗೂ ಒಂದಷ್ಟು ಸಮಯ ಮೀಸಲಿಡಬೇಕು. ತ್ವಚೆಯ ಆರೈಕೆಗಾಗಿ ನೀವು ಹೆಚ್ಚೇನು ಮಾಡಬೇಕಿಲ್ಲ. ಇದಕ್ಕಾಗಿ ನಿಮಗೆ ಬೇಕಾಗಿರುವುದು ಮೊಸರು ಮಾತ್ರ. ಹೌದು..! ಈ ಸೂಪರ್​ ಫುಡ್​ ತ್ವಚೆಯ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಮೊಸರಿನಲ್ಲಿರುವ ಲ್ಯಾಕ್ಟಿಕ್​ ಆ್ಯಸಿಡ್​ ತ್ವಚೆಯನ್ನು ಕಾಂತಿಯುತ ಹಾಗೂ ಮೃದುವಾಗಿ ಮಾಡಲು ಸಹಕಾರಿಯಾಗಿದೆ. ಮೊಸರಿನಲ್ಲಿರುವ ಕೊಬ್ಬಿನ ಅಂಶವು ಮುಖದ ಮೇಲಿರುವ ಟ್ಯಾನ್​ ಹಾಗೂ ಸುಕ್ಕುಗಳನ್ನು ನಿವಾರಿಸುತ್ತದೆ. ಅಲ್ಲದೇ ಮೊಡವೆಯನ್ನು ಶಮನ ಮಾಡುವಲ್ಲಿಯೂ ಮೊಸರು ಪ್ರಮುಖ ಪಾತ್ರ ವಹಿಸುತ್ತದೆ.

Skincare Tips : ಮೊಸರು ಹಾಗೂ ಜೇನುತುಪ್ಪದ ಫೇಸ್​ಪ್ಯಾಕ್​ :

ಜೇನುತುಪ್ಪದಲ್ಲಿ ಚರ್ಮವನ್ನು ಮಾಯಶ್ಚುರೈಸ್​ ಮಾಡುವ ಸಾಮರ್ಥ್ಯವಿದೆ. ಹೀಗಾಗಿ ಮೊಸರನ್ನು ಜೇನುತುಪ್ಪದಲ್ಲಿ ಮಿಶ್ರಣ ಮಾಡಿದರೆ ಇದೊಂದು ಸ್ಕಿನ್​ಕೇರ್​ ಪ್ರಾಡಕ್ಟ್​ ಆಗಲಿದೆ. ನಾರ್ಮಲ್​ ಹಾಗೂ ಡ್ರೈ ಸ್ಕಿನ್​ ಹೊಂದಿರುವವರು ಇದನ್ನು ಫೇಸ್​ ಪ್ಯಾಕ್​ ಆಗಿ ಬಳಕೆ ಮಾಡಬಹುದಾಗಿದೆ. ಇದಕ್ಕಾಗಿ ನೀವು 2 ಚಮಚ ಮೊಸರಿಗೆ 1 ಚಮಚ ಜೇನುತುಪ್ಪವನ್ನು ಹಾಕಿ ಕಲಿಸಿಕೊಳ್ಳಿ. ಈ ಪೇಸ್ಟ್​ನ್ನು ಮುಖಕ್ಕೆ ಹಚ್ಚಿಕೊಂಡು 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ಬಳಿಕ ತಣ್ಣನೆಯ ನೀರಿನಲ್ಲಿ ಮುಖ ತೊಳೆದುಕೊಳ್ಳಿ.

ಮೊಸರು ಹಾಗೂ ಕಡಲೆಹಿಟ್ಟಿನ ಫೇಸ್​ ಪ್ಯಾಕ್​:

ಕಡಲೆ ಹಿಟ್ಟಿಗೆ ತ್ವಚೆಯಲ್ಲಿರುವ ಎಲ್ಲಾ ಕೊಳೆಯನ್ನು ನಿವಾರಿಸುವ ಸಾಮರ್ಥ್ಯವಿದೆ. ಅಲ್ಲದೇ ಇದನ್ನು ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ. ನಾರ್ಮಲ್​ ಅಥವಾ ಆಯಿಲ್​ ಸ್ಕಿನ್​ ಇರುವವರು ಈ ಫೇಸ್ ಪ್ಯಾಕ್​ ಬಳಸಬಹುದು. ಇದಕ್ಕಾಗಿ ನೀವು 2 ಚಮಚ ಮೊಸರಿಗೆ 1 ಚಮಚ ಕಡ್ಲೆ ಹಿಟ್ಟನ್ನು ಹಾಕಿ ಕಲಸಿ. ಇದನ್ನು ದಪ್ಪನೆಯ ಪೇಸ್ಟ್ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. 20 ನಿಮಿಷ ಬಿಟ್ಟು ಮುಖ ತೊಳೆದುಕೊಳ್ಳಿ.

English news Click here

Skincare Tips: How to Use Curd to Get a Glowing And Nourished Skin?

ಇದನ್ನು ಓದಿ : Coffee Powder Facial: ಸೌಂದರ್ಯವನ್ನು ಇಮ್ಮಡಿಗೊಳಿಸುತ್ತೆ ‘ಕಾಫಿಪೌಡರ್ ಫೇಶಿಯಲ್’

ಇದನ್ನೂ ಓದಿ : hair masks to stop hair fall in winters :ಚಳಿಗಾಲದಲ್ಲಿ ಕೂದಲಿನ ಆರೈಕೆಗೆ ಟ್ರೈ ಮಾಡಿ ಈ ಹೇರ್​ಮಾಸ್ಕ್​​​

Comments are closed.