23 Omicron Case Karnataka : ಯುಕೆಯಿಂದ ಬಂದ ಯುವತಿಗೆ ಓಮೈಕ್ರಾನ್ : ರಾಜ್ಯದಲ್ಲಿ 23 ಕ್ಕೆ ಏರಿದ ಸೋಂಕಿತರ ಸಂಖ್ಯೆ

ಬೆಂಗಳೂರು : ಬಿಬಿಎಂಪಿ ಕಣ್ಗಾವಲು, ಸರ್ಕಾರದ ಕಟ್ಟೆಚ್ಚರದ ನಡುವೆಯೂ ರಾಜ್ಯದಲ್ಲಿ ನಿಧಾನಕ್ಕೆ ಓಮೈಕ್ರಾನ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ನಗರದಲ್ಲಿ ಮತ್ತೆ ನಾಲ್ಕು ಹೊಸ ಓಮೈಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 23 ಕ್ಕೇ (23 Omicron Case Karnataka) ಏರಿಕೆ ಆಗಿದ್ದು, ಹೊಸವರ್ಷಾಚರಣೆ ಹಾಗೂ ಕ್ರಿಸ್ಮಸ್ ಹಿನ್ನೆಲೆಯಲ್ಲಿ ಈ ಪ್ರಮಾಣ ಇನ್ನಷ್ಟು ಹೆಚ್ಚುವ ಆತಂಕವಿದೆ.

ನಗರಕ್ಕೆ ಯುಕೆಯಿಂದ ಆಗಮಿಸಿದ್ದ 26 ವರ್ಷದ ಯುವತಿ ಸೇರಿದಂತೆ ನಾಲ್ವರಿಗೆ ಓಮೈಕ್ರಾನ್ ಸೋಂಕು ತಗುಲಿದೆ. ಈ ವಿಚಾರವನ್ನು ಸ್ವತಃ ಆರೋಗ್ಯ ಸಚಿವ ಡಾ.ಸುಧಾಕರ್ ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ. ಯುಕೆಯಿಂದ 26 ವರ್ಷದ ಯುವತಿ ಡಿಸೆಂಬರ್ 12 ರಂದು ನೆಗೆಟಿವ್ ವರದಿಯೊಂದಿಗೆ ನಗರಕ್ಕೆ ಬಂದಿದ್ದರು. ಹೀಗಾಗಿ ಅವರನ್ನು ದಾಖಲೆ ಪರಿಶೀಲನೆ ಬಳಿಕ ಮನೆಗೆ ಕಳುಹಿಸಲಾಗಿತ್ತು. ಆದರೆ ಈಗ 26 ವರ್ಷದ ಯುವತಿ ಸೇರಿದಂತೆ ಕುಟುಂಬದ ಇತರೆ ಮೂವರಿಗೂ ಓಮೈಕ್ರಾನ್ ದೃಢಟ್ಟಿದೆ. ಯುವತಿ ಸೇರಿದಂತೆ ಕುಟುಂಬಸ್ಥರಿಗೆ ಕೊರೋನಾ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎಲ್ಲರೂಡಿಸೆಂಬರ್ 14 ರಂದು ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಂಡಿದ್ದರು.

ಬಳಿಕ ಓಮೈಕ್ರಾನ್ ಲಕ್ಷಣಗಳು ಇದ್ದ ಹಿನ್ನೆಲೆಯಲ್ಲಿ ಜಿನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆ ಗೂ ಮಾದರಿ ಸಂಗ್ರಹಿಸಲಾಗಿತ್ತು. ಸದ್ಯ 26 ವರ್ಷದ ಯುವತಿ ಸೇರಿದಂತೆ ಎಲ್ಲರಿಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, 26 ವರ್ಷದ ಯುವತಿಯ ತಂದೆ, ತಾಯಿ ಹಾಗೂ 20 ವರ್ಷದ ತಂಗಿಗೂ ಸೋಂಕುಕಾಣಿಸಿಕೊಂಡಿದೆ. ಇನ್ನು ಈ ಸೋಂಕಿತರು ಕೋರಮಂಗಲ ನಿವಾಸಿಗಳಾಗಿದ್ದು, ಓಮೈಕ್ರಾನ್ ದೃಢ ಹಿನ್ನೆಲೆ ಬಿಬಿಎಂಪಿಯಿಂದ ಅಪಾರ್ಟ್ಮೆಂಟ್ ಸೀಲ್ ಡೌನ್ ಮಾಡಲಾಗಿದೆ.

ಇನ್ನೂ ಈ ಯುವತಿ ಹಾಗೂ ಮೂವರು ಕುಟುಂಬಸ್ಥರ ಸೆಕೆಂಡರಿ ಕಾಂಟಾಕ್ಟ್ ನಲ್ಲಿದ್ದ 10 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದ್ದು ಅವರಿಗೂ ಕೊರೋನಾ ಪರೀಕ್ಷೆ ಮಾಡಿಸಲಾಗಿದೆ. ಆದರೆ ಅವರ ವರದಿ ನೆಗೆಟಿವ್ ಬಂದಿದೆ. 26 ವರ್ಷದ ಯುವತಿಗೂ ಓಮೈಕ್ರಾನ್ ಧೃಡಪಟ್ಟಿರೋದರಿಂದ ರಾಜ್ಯದ ಓಮೈಕ್ರಾನ್ ಕೇಸ್ ಸಂಖ್ಯೆ 23ಕ್ಕೆ ಏರಿಕೆಯಾಗಿದ್ದು, ಈ ಪೈಕಿ ಒಟ್ಟು ಮೂವರು ಈಗಾಗಲೇ ಚಿಕಿತ್ಸೆ ಪೂರ್ಣಗೊಳಿಸಿದ್ದು ಚೇತರಿಸಿಕೊಂಡಿದ್ದಾರೆ.

ದಿನದಿಂದ ದಿನಕ್ಕೆ ಓಮೈಕ್ರಾನ್ ಸೋಂಕು ಹೆಚ್ಚುತ್ತಲೇ ಇರೋದರಿಂದ ಬಿಬಿಎಂಪಿ ಕೂಡ ಸೋಂಕು ತಡೆಗೆ ಸಜ್ಜಾಗಿದ್ದು, ಅಗತ್ಯ ಬಿದ್ದರೆ ವಿದೇಶಿ ಪ್ರವಾಸಿಗರು ಕ್ವಾರಂಟೈನ್ ಬಳಿಕವೇ ನಗರಕ್ಕೆ ಕಾಲಿರಿಸುವಂತೆ ಮಾಡುವ ಸಿದ್ಧತೆಯಲ್ಲಿದೆ. ಒಟ್ಟಿನಲ್ಲಿ ನಗರ ಹಾಗೂ ರಾಜ್ಯದಲ್ಲಿ ಓಮೈಕ್ರಾನ್ ಭೀತಿ ಹೆಚ್ಚುತ್ತಲೇ ಇದ್ದು ಜನರ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ಡೆಲ್ಟಾಕ್ಕಿಂತ 3 ಪಟ್ಟು ಅಪಾಯಕಾರಿ ಓಮಿಕ್ರಾನ್‌ : ಶಾಕ್‌ ಕೊಟ್ಟ ಆರೋಗ್ಯ ಇಲಾಖೆ, ಕಠಿಣ ಕ್ರಮಕ್ಕೆ ಕೇಂದ್ರದ ಸೂಚನೆ

ಇದನ್ನೂ ಓದಿ : New deadly variant Delmicron : ಓಮೈಕ್ರಾನ್‌ ಬೆನ್ನಲ್ಲೇ ಮಾರಣಾಂತಿಕ ಡೆಲ್ಮಿಕ್ರಾನ್ ಪತ್ತೆ : ಏನಿದರ ರೋಗ ಲಕ್ಷಣ

(Omicron for young women from the UK: Number of infected people rising 23 Omicron Case Karnataka)

Comments are closed.