Mohammed Shami : ಭಾರತದ ಈ ವೇಗಿ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಪಂದ್ಯಗಳ ಗತಿಯನ್ನೇ ಬದಲಿಸಬಲ್ಲರು: ಜಹೀರ್‌ ಖಾನ್

ಬೆಂಗಳೂರು: ಭಾರತೀಯ ಕ್ರಿಕೆಟ್‌ ತಂಡ ದಕ್ಷಿಣ ಆಫ್ರಿಕಾದಲ್ಲಿ ಈಗಾಗಲೇ ತನ್ನ ಸಿದ್ಧತೆ ಆರಂಭಿಸಿದ್ದು ಡಿಸೆಂಬರ್‌ 26ರಿಂದ ತನ್ನ ಪ್ರಥಮ ಟೆಸ್ಟ್‌ ಪಂದ್ಯದಿಂದ ಸರಣಿ (IND vs SA Test) ಆರಂಭಿಸಲಿದೆ. ದಕ್ಷಿಣ ಆಫ್ರಿಕಾದ ಪಿಚ್‌ಗಳು ವೇಗದ ಬೌಲಿಂಗ್‌ಗೆ ಹೇಳಿ ಮಾಡಿಸಿದಂತಹ ಪಿಚ್‌ಗಳಾಗಿದ್ದು ವೇಗದ ಬೌಲರ್‌ಗಳಿಂದ ಉತ್ತಮ ಪ್ರದರ್ಶನವನ್ನು ನಿರೀಕ್ಷಿಸಬಹುದಾಗಿದೆ.  ಭಾರತ ತಂಡದಲ್ಲೂ ಉತ್ತಮ ವೇಗಿಗಳಿದ್ದು (Mohammed Shami) ಅವರಿಂದ ಯಾವ ಮಟ್ಟದ ಸಾಧನೆ ಬರಲಿದೆ ಎಂಬುದು ಅತ್ಯಂತ ಕುತೂಹಲಕರ ಚರ್ಚೆಯ ವಿಷಯವಾಗಿದೆ.

ದಕ್ಷಿಣ ಆಫ್ರಿಕಾದಲ್ಲಿ ಶ್ರೇಷ್ಠ ಸಾಧನೆ ಮಾಡಿರುವ ಭಾರತದ ಮಾಜಿ ಎಡಗೈ ವೇಗದ ಬೌಲರ್ 31 ವರ್ಷದ ಜಹೀರ್ ಖಾನ್ (Zaheer Khan) ಈ ವಿಷಯದ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಾ ಒಬ್ಬ ನಿರ್ದಿಷ್ಟ ವೇಗದ ಬೌಲರ್ ಈ ಸರಣಿಯಲ್ಲಿ ಅತ್ಯುತ್ತಮ ಸಾಧನೆ ಮಾಡುವ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಅವರು ಹೆಸರಿಸಿರುವ ಆ ಬೌಲರ್‌ ಮೊಹಮದ್ ಶಮಿ (Mohammed Shami) . ತಮ್ಮ ಸಮಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಗಳಲ್ಲಿ 2013ರಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ 4/88 ಹಾಗೂ 2010ರಲ್ಲಿ ಡರ್ಬನ್‌ನಲ್ಲಿ 3/36ರ ಉತ್ತಮ ಸಾಧನೆ ತೋರಿರುವ ಜಹೀರ್ ಖಾನ್‌ ಅಭಿಪ್ರಾಯ ಎಷ್ಟು ಪ್ರಾಮುಖ್ಯತೆ ಪಡೆದಿದೆಯೆಂಬುದು ಎಲ್ಲರಿಗೂ ತಿಳಿದಿದೆ.

ಟೆಸ್ಟ್‌ ಸರಣಿಯ ಮೊದಲ ಪಂದ್ಯ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಈ ಸಮಯದಲ್ಲಿ ಜಹೀರ್‌ ತಮ್ಮ ಹಿಂದಿನ ಸಹ ಆಟಗಾರನ ಬಗ್ಗೆ ಈ ಅಭಿಪ್ರಾಯ ವ್ಯಕ್ತಪಡಿಸಿದರು. ಜೋಹಾನ್ಸ್‌ಬರ್ಗ್‌ನಲ್ಲಿ ಆಡುವುದು ಆಟಗಾರರಿಗೆ ನಿಜಕ್ಕೂ ಸವಾಲಿನ ವಿಷಯ.  ಅದು ಬಹಳ ಎತ್ತರದ ಪ್ರದೇಶವಾಗಿದ್ದು ಅಂತಹ ಸ್ಥಳದಲ್ಲಿ ಆಡುವಾಗ ದೈಹಿಕ ಕ್ಷಮತೆಯನ್ನು ಕಾಯ್ದುಕೊಳ್ಳುವುದು ಬಹಳ ಕಷ್ಟ. ಅದೊಂದು ವಿಷಯ ಬಿಟ್ಟರೆ ಉಳಿದಂತೆ ಅಲ್ಲಿನ ಪಿಚ್‌ಗಳು ವೇಗದ ಬೌಲರ್‌ಗಳಿಗೆ ಬಹಳ ಸಹಕಾರಿಯಾಗಿರುವುದರಿಂದ ಎಲ್ಲಾ ವೇಗದ ಬೌಲರ್‌ಗಳೂ ಇಲ್ಲಿ ಬೌಲಿಂಗ್‌ ಮಾಡುವುದನ್ನು ಆನಂದಿಸುತ್ತಾರೆ. ವೇಗದ ಬೌಲರ್‌ಗಳ ಪ್ರಯತ್ನ ಉತ್ತಮವಾಗಿದ್ದರೆ ಉತ್ತಮ ಪ್ರತಿಫಲ ಖಂಡಿತ ದೊರೆಯತ್ತದೆ ಎಂದು ಜಹೀರ್‌ ಹೇಳಿದರು.

ಮೊಹಮದ್‌ ಶಮಿಯವರಿಗೆ ಸೂಕ್ತ ಸಲಹೆ-ಸೂಚನೆಗಳನ್ನು ಈ ಹಿಂದಿನ ಪ್ರವಾಸದಲ್ಲಿ ನೀಡಿರುವ ಜಹೀರ್‌, ಶಮಿ ಭಾರತ ತಂಡದ ಬೌಲಿಂಗ್‌ ವಿಭಾಗದ ಒಂದು ಪ್ರಬಲ ಅಸ್ತ್ರವಾಗಿ ಬೆಳೆಯಲು ತಮ್ಮ ಕೊಡುಗೆ ನೀಡಿದ್ದಾರೆ. ಭಾರತದ ಹಿಂದಿನ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಉತ್ತಮ ಬೌಲಿಂಗ್‌ ಪ್ರದರ್ಶನದ ಮೂಲಕ ಭಾರತ ಟೆಸ್ಟ್‌ ಸರಣಿ ಜಯಿಸುವಲ್ಲಿ ಶಮಿ ಪ್ರಮುಖ ಪಾತ್ರ ವಹಿಸಿದ್ದರು. ಮುಂದುವರೆದು ಮಾತನಾಡಿದ ಜಹೀರ್ “ಶಮಿ ಯಶಸ್ಸು ಗಳಿಸುವುದನ್ನು ನೋಡಲು ನನಗೆ ಬಹಳ ಸಂತೋಷವಾಗುತ್ತದೆ. ಅವರು ಇಲ್ಲಿಯವರೆಗೆ ಸಾಗಿ ಬಂದಿರುವ ಹಾದಿ ಅದ್ಭುತವಾಗಿದೆ. ಹಾಗೆ ನೋಡಿದರೆ ಭಾರತದ ಎಲ್ಲಾ ವೇಗದ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೂ ಅವರೆಲ್ಲರಲ್ಲಿ ಅತ್ಯುತ್ತಮ ದಾಖಲೆ ಹೊಂದಿರುವ ಶಮೀ ಮುಂಚೂಣಿಯಲ್ಲಿದ್ದು ಪಂದ್ಯದ ಪ್ರಮುಖ ಘಟ್ಟಗಳಗಲ್ಲಿ ವಿಕೆಟ್‌ ಪಡೆಯುವುದು ಅವರ ವಿಶೇಷತೆಯಾಗಿದೆ” ಎಂದರು.

ಅವರೊಬ್ಬ ಪಂದ್ಯದ ಗತಿಯನ್ನೇ ಬದಲಿಸಬಲ್ಲ ವೇಗಿ ಮೊಹಮದ್‌ ಶಮಿ ಎಂದ ಜಹೀರ್ ಮುಂದುವರೆದು “ನನ್ನ ಪ್ರಕಾರ ಯಾವ ಬೌಲರ್‌ ತನ್ನ ಬೌಲಿಂಗ್‌ ಸ್ಪೆಲ್‌ನಲ್ಲಿ ಎದುರಾಳಿ ತಂಡದ ಪ್ರಮುಖ ಎರಡು-ಮೂರು ವಿಕೆಟ್‌ಗಳಾನ್ನು ಪಡೆಯುತ್ತಾನೋ ಅವನು ಪಂದ್ಯದ ಗತಿಯನ್ನೇ ಬದಲಿಸಬಲ್ಲ ಬೌಲರ್, ಶಮಿಗೆ ಇಂತಹ ಶಕ್ತಿಯಿದೆ ಎಂದರು. ಹೀಗಾಗಿ, ಶಮಿ ನಮ್ಮ ವಿಶ್ವದರ್ಜೆಯ ಬೌಲಿಂಗ್‌ ವಿಭಾಗದ ಪ್ರಮುಖ ಅಂಗ” ಎಂದರು.

ಇದನ್ನೂ ಓದಿ: Ravindra Jadeja Retire : ರವೀಂದ್ರ ಜಡೇಜಾ ಕ್ರಿಕೆಟ್‌ಗೆ ಗುಡ್‌ ಬೈ : ನಿವೃತ್ತಿ ಹಿಂದಿದೆ ನೋವಿನ ಕಾರಣ

ಇದನ್ನೂ ಓದಿ: Kirti Azad : ಗ್ರೆಗ್ ಚಾಪೆಲ್ ಕೋಚ್ ಆಗಿದ್ದಾಗ ನಾನು ಗಂಗೂಲಿಯ ಬೆಂಬಲಕ್ಕೆ ನಿಂತಿದ್ದೆ: ಮಾಜಿ ಆಯ್ಕೆದಾರ ಕೀರ್ತಿ ಆಝಾದ್

Zaheer Khan says Shami can be a game changer in IND vs SA Test

Comments are closed.