Cabinet Surgery : ಸಂಕ್ರಾಂತಿ ಬಳಿಕ ಸಂಪುಟಕ್ಕೆ ಸರ್ಜರಿ : ಯಾರು ಇನ್ ಯಾರು ಔಟ್? ಇಲ್ಲಿದೆ ಡಿಟೇಲ್ಸ್

ರಾಜ್ಯದಲ್ಲಿ ಮತ್ತೊಮ್ಮೆ ಆಡಳಿತಾರೂಢ ಬಿಜೆಪಿಯ ರಾಜಕೀಯ ಪ್ರಹಸನಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು ಮತ್ತೊಮ್ಮೆ ಸಿಎಂ ಬದಲಾವಣೆಯಾಗಲಿದೆ ಎಂಬ ಊಹಾಪೋಹ ಗಳ ಮಧ್ಯೆ ಸಂಕ್ರಾಂತಿ ಬಳಿಕ ಸಚಿವ ಸಂಪುಟ ಪುನರಚನೆಯಾಗಲಿದೆ Cabinet Surgery) ಎನ್ನಲಾಗುತ್ತಿದೆ. ಸಿಎಂ ಬದಲಾವಣೆಯಿಲ್ಲ ಎಂಬ ಸ್ಪಷ್ಟ ಸಂದೇಶದೊದಿಗೆ ಸಚಿವ ಸಂಪುಟ ವಿಸ್ತರಣೆ ಮಾಡಲಿದೆ ಹೈಕಮಾಂಡ್ ಎಂಬ ಮಾತು ಬಿಜೆಪಿ ವಲಯದಲ್ಲೇ ಕೇಳಿಬಂದಿದ್ದು, ಹಿರಿಯ ಸಚಿವ ಈಶ್ವರಪ್ಪ ಸೇರಿದಂತೆ ಹಲವರಿಗೆ ಸಂಕ್ರಾಂತಿ ಕಹಿಯಾಗೋ ಲಕ್ಷಣವಿದೆ‌.

ಐದು ವರ್ಷದಲ್ಲಿ ಮೂರು ಸಿಎಂ ಬಿಜೆಪಿಯ ಆಡಳಿತ ಶೈಲಿ ಎನ್ನೋ ಮಾತು ಜನಜನಿವಾಗುವಷ್ಟರ ಮಟ್ಟಿಗೆ ಬಿಜೆಪಿಯಲ್ಲಿ ಸಿಎಂ ಬದಲಾವಣೆ ವಿಚಾರ ಚರ್ಚೆಗೆ ಗ್ರಾಸವಾಗಿದೆ‌. ಆದರೆ ಈಗ ಸಿಎಂ ಬದಲಾವಣೆಯಿಲ್ಲ. ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ನಡೆಯಲಿದೆ ಎಂಬ ಮಾತು ಬಿಜೆಪಿ ಮೂಲಗಳಿಂದಲೇ ಕೇಳಿಬಂದಿದೆ. ಮುಖ್ಯವಾಗಿ ಇದುವರೆಗಿನ ಸಚಿವರ ಸಾಧನೆ, ಪರಿಷತ್ ಚುನಾವಣೆ ಫಲಿತಾಂಶ, ಬಿಜೆಪಿ ಶಿಸ್ತು ಕಮಿಟಿಯ ವಿಮರ್ಶೆ ಆಧರಿಸಿ ಹಾಲಿ ಇರುವ ಸಚಿವರಿಗೆ ಕೋಕ್ ನೀಡಿ ಹೊಸಬರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ ಹೈಕಮಾಂಡ್.

ಮೊದಲನೆಯದಾಗಿ ಸಿಎಂ ಸ್ಥಾನಕ್ಕೆ ಆಕಾಂಕ್ಷಿ ಎಂದೇ ಬಿಂಬಿತವಾಗಿರುವ ಮುರುಗೇಶ್ ನಿರಾಣಿಯ ವಿರುದ್ಧ ಪಕ್ಷದಲ್ಲಿ ಒಡಕು ಮೂಡಿಸುವ ಪ್ರಯತ್ನ ಹಾಗೂ ಸಿಎಂ ಸ್ಥಾನಕ್ಕೆ ಲಾಭಿ ಆರೋಪ ಕೇಳಿಬಂದಿದ್ದು ಶಿಸ್ತು ಕಮಿಟಿಗೆ ಬಿಜೆಪಿ ಶಾಸಕರೇ ದೂರು ನೀಡಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕಾಗಿ ನಿರಾಣಿ ಯನ್ನು ಸಂಪುಟ ದಿಂದ ಕೈಬಿಡಲಾಗುತ್ತದೆ ಎನ್ನಲಾಗುತ್ತಿದೆ.

ಮುರಾಣಿ ಸ್ಥಾನಕ್ಕೆ ಹೊಸ ಪಂಚಮಶಾಲಿ ಶಾಸಕರೊಬ್ಬರಿಗೆ ಸಚಿವ ಸ್ಥಾನ‌ನೀಡುವ ಲೆಕ್ಕಾಚಾರವಿದೆ. ಇನ್ನು ಪರಿಷತ್ ಎಲೆಕ್ಷನ್ ನಲ್ಲಿ ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಸಹಾಯ ಮಾಡಿದ ಕಾರಣಕ್ಕೆ ಸಚಿವ ನಾರಾಯಣಗೌಡರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ ಇದೆ. ನಾರಾಯಣ ಗೌಡ ವಿರುದ್ಧ ಬಹಿರಂಗವಾಗಿಯೇ ಅಸಮಧಾನ ವ್ಯಕ್ತವಾಗಿದೆ. ಹೀಗಾಗಿ ಅವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ ಇದೆ.

ಇನ್ನೊಂದೆಡೆ ಪಕ್ಷದಲ್ಲೇ ಇದ್ದುಕೊಂಡು ಪಕ್ಷದ ಚೌಕಟ್ಟು ಬಿಟ್ಟು ಸಿಎಂ ಸ್ಥಾನದ ಬಗ್ಗೆ ಹೇಳಿಕೆಕೊಟ್ಟು ಅಧ್ವಾನ ಸೃಷ್ಟಿಸಿದ ಹಿರಿಯ ಸಚಿವ ಈಶ್ವರಪ್ಪ ಅವರನ್ನು ವಯಸ್ಸಿನ ಕಾರಣಕೊಟ್ಟು ಮನೆಗೆ ಕಳುಹಿಸಿ ಅವರ ಸ್ಥಾನಕ್ಕೆ ಹೊಸಬರಿಗೆ ಅವಕಾಶ ಕೊಡುವ ಪ್ರಯತ್ನದಲ್ಲಿದೆಯಂತೆ ಹೈಕಮಾಂಡ್. ಜನವರಿ ಬಳಿಕ ಸಿಎಂ ಬದಲಾಗಲಿದ್ದಾರೆ ಎಂಬ ಮಾತು ಈಗ ರಾಜಕೀಯ ವಲಯದಲ್ಲಿ ನಾನಾ ಲೆಕ್ಕಾಚಾರಕ್ಕೆ ಕಾರಣವಾಗಿದೆ. ಹೀಗೆ ಪದೇ ಪದೇ ನಾಯಕತ್ವ ಬದಲಾವಣೆ ಪಕ್ಷಕ್ಕೂ ಮುಜುಗರದ ವಿಚಾರ. ಹೀಗಾಗಿ ಎಲ್ಲಾ ರೂಮರ್ಸ್ ಗಳಿಗೆ ತೆರೆ ಎಳೆಯಲು ಬಿಜೆಪಿ ಮೇಜರ್ ಕ್ಯಾಬಿನೆಟ್ ಸರ್ಜರಿಗೆ ಮುಂದಾಗಿದ್ದು ಈ ಪ್ರಯತ್ನ ಇನ್ಯಾವ ಹೊಸ ಸಮಸ್ಯೆ ಸೃಷ್ಟಿಸುತ್ತೆ ಕಾದು ನೋಡಬೇಕಿದೆ.

ಇದನ್ನೂ ಓದಿ : ಎಂಇಎಸ್ ಪುಂಡಾಟಕ್ಕೆ ಕಾಂಗ್ರೆಸ್ ಶ್ರೀರಕ್ಷೆ: ಸರಣಿ ಟ್ವೀಟ್ ನಲ್ಲಿ ಬಿಜೆಪಿ ವಾರ್

ಇದನ್ನೂ ಓದಿ : ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾನೂನು ಜಾರಿ : ಕಾಯಿದೆಯಲ್ಲಿ ಏನಿದೆ ಗೊತ್ತಾ

(Karnataka Cabinet Surgery After Sankranthi, Who’s Out, Who’s In)

Comments are closed.