Siddaramaiah outrage : ಕೊರೋನಾ ಚಿಕಿತ್ಸೆ ಹೊಣೆ ಖಾಸಗಿಯವರಿಗೆ, ಸರ್ಕಾರ ನಿದ್ರೆಗೆ : ಚಾಟಿ ಬೀಸಿದ ಸಿದ್ಧರಾಮಯ್ಯ

ಒಂದೆಡೆ ಕರ್ನಾಟಕದಲ್ಲಿ ಕೊರೋನಾ 50 ಸಾವಿರದ ಗಡಿ ದಾಟುತ್ತಿದೆ. ಇನ್ನೊಂದೆಡೆ ಸರ್ಕಾರ ಜಾರಿ ಮಾಡಿರೋ ಅಲ್ಪ ಸ್ವಲ್ಪ ಬಿಗಿ ಕ್ರಮವನ್ನು ಸಡಿಲಿಸಲು ಸ್ವ ಪಕ್ಷಿಯರೇ ಒತ್ತಡ ಹೇರುತ್ತಿದ್ದಾರೆ. ಉದ್ದಿಮೆಗಳು ಸರ್ಕಾರದ ವಿರುದ್ಧ ತಿರುಗಿ ಬಿದ್ದಿದೆ. ಇದೆಲ್ಲದರ ಮಧ್ಯೆ ನಗರದಲ್ಲಿ ಸದ್ದಿಲ್ಲದೇ ಕರೋನಾ ಪೀಡಿತರ ಆಸ್ಪತ್ರೆ ದಾಖಲು ಪ್ರಮಾಣವೂ ಹೆಚ್ಚುತ್ತಿದೆ. ಇದೆಲ್ಲವೂ ಸರ್ಕಾರದ ವೈಫಲ್ಯ ಎಂದಿರೋ ವಿಪಕ್ಷ ನಾಯಕ ಸಿದ್ಧರಾಮಯ್ಯ, (Siddaramaiah outrage) ಸರ್ಕಾರ ನಿದ್ದೆಯಲ್ಲಿದೆ ಎಂದು ಟೀಕಿಸಿದ್ದಾರೆ.

ರಾಜ್ಯದಲ್ಲಿ ಕೊವೀಡ್ ಉಲ್ಬಣಗೊಳ್ಳುತ್ತಿದೆ. ಸೋಂಕಿತರಿಗೆ ಚಿಕಿತ್ಸೆ ನೀಡುವ ಹೊಣೆಯನ್ನು ಸರ್ಕಾರ ಖಾಸಗಿ ಆಸ್ಪತ್ರೆಗೆ ವಹಿಸಿ ತಾನು ಬೆಚ್ಚಗೆ ಮಲಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಆರೋಪಿಸಿದ್ದಾರೆ. ರಾಜ್ಯ ಸರ್ಕಾರ ಕೊರೋನಾ ನಿವರ್ಹಣೆಯಲ್ಲಿ ವಿಫಲವಾಗಿದೆ ಎಂದು ಸರಣಿ ಟ್ವೀಟ್ ಗಳ ಮೂಲಕ ಖಂಡಿಸಿರುವ ಸಿದ್ಧರಾಮಯ್ಯ, ಕೊರೋನಾ ಸೋಂಕಿನ ಜೊತೆಗೆ ರಾಜ್ಯದಲ್ಲಿ ಶೀತ ಹಾಗೂ ಜ್ವರ ಬಾಧೆಯೂ ಹೆಚ್ಚಿದೆ. ಜನರು ಯಾವುದು ಶೀತ ಜ್ವರ, ಯಾವುದು ಕೊರೋನಾ ಎಂಬುದನ್ನು ನಿರ್ಧರಿಸಲಾಗದ ಗೊಂದಲದಲ್ಲಿದ್ದಾರೆ.

ಅಲ್ಲದೇ ಸರ್ಕಾರ ಸೋಂಕಿತರು ಮನೆಯಲ್ಲೇ ಇರಿ ಎನ್ನುವ ಮೂಲಕ ಜನರನ್ನು ಮತ್ತಷ್ಟು ಗೊಂದಲಕ್ಕೆ ಇಡು ಮಾಡುತ್ತಿದೆ. ಕೊವೀಡ್ ಚಿಕಿತ್ಸೆಗೆ ನಿಗದಿತ ೧.೯೪ ಲಕ್ಷ ಹಾಸಿಗೆಗಳಲ್ಲಿ ೫೧ ಸಾವಿರ ಹಾಸಿಗೆಗಳು ಮಾತ್ರ ಸರ್ಕಾರಿ. ಉಳಿದವು ಖಾಸಗಿ ಆಸ್ಪತ್ರೆಗೆ ಸೇರಿದೆ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ. ಈ ವ್ಯವಸ್ಥೆ ಜನಹಿತಕ್ಕಾಗಿಯೇ ಇಲ್ಲವೇ ಆಸ್ಪತ್ರೆಗಳ ಹಿತಕ್ಕಾಗಿಯೇ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕೆಂದು ಸಿದ್ಧು ಪ್ರಶ್ನೆ ಮಾಡಿದ್ದಾರೆ. ಕೊರೋನಾ ಶೀಘ್ರಗತಿಯಲ್ಲಿ ಹಳ್ಳಿಗಳಿಗೆ ಹರಡುತ್ತಿದೆ ಎಂದು ರಾಜ್ಯ ಬಿಜೆಪಿ ಸರ್ಕಾರ ಹೇಳುತ್ತಿದೆ. ಹಿಂದಿನ ವೈಫಲ್ಯಗಳಿಂದಲೂ ಪಾಠ ಕಲಿಯದ ಸರ್ಕಾರ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಮೂಲ ಸೌಕರ್ಯ ಹೆಚ್ಚಿಸುವ ಕೆಲಸವನ್ನು ಮಾಡದೇ ಕರ್ಪ್ಯೂ ಹಾಗೂ ಲಾಕ್ ಡೌನ್ ನಂಬಿ ಕೂತಿದೆ ಎಂದು ಸಿದ್ದು ಟೀಕಿಸಿದ್ದಾರೆ.

ರಾಜ್ಯದಲ್ಲಿ ಕೊರೋನಾ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗಳಿಗಿಂತ ಹೆಚ್ಚು ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಗಳನ್ನು ಮೀಸಲಿರಿಸಲಾಗಿದ್ದು, ಇದು ಜನರನ್ನು ಸುಲಿಯುವ ನೀತಿ ಎಂದು ವಿಪಕ್ಷಗಳು ಸರ್ಕಾರವನ್ನು ಟೀಕಿಸಿದೆ. ಈ ಮಧ್ಯೆ ರಾಜ್ಯದಲ್ಲಿ ವಿಪಕ್ಷಗಳ ಆರೋಪಕ್ಕೆ ಪೂರಕ ಎಂಬಂತೆ ರೋಗಿಗಳು ಕೂಡ ಸರ್ಕಾರಿ ಆಸ್ಪತ್ರೆಯ ಸಹವಾಸ ಬೇಡ ಎಂದು ಖಾಸಗಿ ಆಸ್ಪತ್ರೆಯತ್ತ ಮುಖ ಮಾಡುತ್ತಿದ್ದು, ಜನಸಾಮಾನ್ಯರ ಕಷ್ಟಕ್ಕೆ ಸರ್ಕಾರ ಕ್ಯಾರೇ ಎನ್ನುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

ಇದನ್ನೂ ಓದಿ : ಇನ್ಮುಂದೆ ಹತ್ತಿರದ ಮೆಡಿಕಲ್​ ಸ್ಟೋರ್​ನಲ್ಲಿಯೂ ಲಭ್ಯವಿರಲಿದೆ ಕೊರೊನಾ ಲಸಿಕೆ

ಇದನ್ನೂ ಓದಿ : Pratap simha : ಅಧಿಕಾರದಲ್ಲಿದ್ದಾಗ ನಾರಾಯಣ ಗುರುಗಳು ನೆನಪಾಗಲಿಲ್ಲವೇ?: ಸಿದ್ದರಾಮಯ್ಯಗೆ ಪ್ರತಾಪ್​ ಸಿಂಹ ಪ್ರಶ್ನೆ

( Government at sleep, private hospitals handles the corona burden Ex Cm Siddaramaiah outrage)

Comments are closed.