Section 144 Mumbai : ಒಮಿಕ್ರಾನ್​ ಭೀತಿ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಸೆಕ್ಷನ್​ 144 ಜಾರಿ

ಮುಂಬೈ : ದೇಶದಲ್ಲಿ ಕೊರೊನಾ ಒಮಿಕ್ರಾನ್​ ರೂಪಾಂತರಿ (Omicron threat) ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಆತಂಕಕಾರಿ ವಿಚಾರವಾಗಿದೆ. ಸಂಭವನೀಯ ಕೊರೊನಾ ಮೂರನೇ ಅಲೆ ಸಮೀಪಿಸುತ್ತಿದೆ ಎಂಬ ಆತಂಕ ಹೆಚ್ಚಾಗುತ್ತಿದ್ದು ವಿವಿಧ ರಾಜ್ಯಗಳು ಒಮಿಕ್ರಾನ್​ ಭೂತವನ್ನು ಎದುರಿಸಲು ನಾನಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿವೆ. ಇದೀಗ ಮುಂಬೈನಲ್ಲಿ ಸೆಕ್ಷನ್​ 144 ಜಾರಿ ( Section 144 Mumbai ) ಮಾಡಲಾಗಿದೆ

ಮಹಾರಾಷ್ಟ್ರದಲ್ಲಿ ಪ್ರಸ್ತುತ ಒಟ್ಟು 17 ಒಮಿಕ್ರಾನ್​ ಪ್ರಕರಣಗಳು ಪತ್ತೆಯಾಗಿದ್ದು ಈ ಮೂಲಕ ಇಡೀ ದೇಶದಲ್ಲಿಯೇ ಅತೀ ಹೆಚ್ಚು ಒಮಿಕ್ರಾನ್​ ಪ್ರಕರಣ ಹೊಂದಿರುವ ರಾಜ್ಯ ಎನಿಸಿದೆ. ಒಮಿಕ್ರಾನ್​ ಭೀತಿ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಇಂದು ಹಾಗೂ ನಾಳೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಒಮಿಕ್ರಾನ್​ ಮತ್ತಷ್ಟು ಹರಡದಂತೆ ತಡೆಯುವ ಸಲುವಾಗಿ ರ್ಯಾಲಿಗಳು, ಮೆರವಣಿಗೆ ಹಾಗೂ ವಾಹನಗಳ ಸಂಚಾರ ಸೇರಿದಂತೆ ಜನದಟ್ಟಣೆಗೆ ಕಾರಣವಾಗಬಲ್ಲ ಎಲ್ಲಾ ಕಾರ್ಯಕ್ರಮ ಗಳಿಗೆ ಮುಂಬೈನಲ್ಲಿ ನಿಷೇಧ ಹೇರಲಾಗಿದೆ. ಈ ಆದೇಶದ ವಿರುದ್ಧ ನಡೆದುಕೊಂಡವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಬಿಎಂಸಿ ಹೇಳಿದೆ. ಎರಡು ಕಾರಣಗಳಿಗಾಗಿ ಮುಂಬೈನಲ್ಲಿ ಸೆಕ್ಷನ್​ 144 ಜಾರಿ ಮಾಡಲಾಗಿದೆ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.

ಎಐಎಂಐಎಂ ಪಕ್ಷವು ಮುಂಬೈಲ್ಲಿ ರ್ಯಾಲಿಯನ್ನು ಆಯೋಜಿಸಿದ್ದು ಈಗಾಗಲೇ ಸಾಕಷ್ಟು ಕಾರ್ಯಕರ್ತರು ಮುಂಬೈ ಬಂದು ತಲುಪಿದ್ದಾರೆ ಇತ್ತ ಪಕ್ಷದ ಮುಖ್ಯಸ್ಥ ಅಸಾದುದ್ದೀನ್​ ಓವೈಸಿ ಕೂಡ ಈ ರ್ಯಾಲಿಯಲ್ಲಿ ಭಾಗವಹಿಸುವ ಎಲ್ಲಾ ಸಾಧ್ಯತೆ ಇದೆ. ಆದರೆ ಒಮಿಕ್ರಾನ್​ ಗಮನದಲ್ಲಿಟ್ಟುಕೊಂಡು ಮುಂಬೈ ಪೊಲೀಸರು ಅನುಮತಿಯನ್ನು ನೀಡಿಲ್ಲ. ಇದು ನಿಷೇಧಾಜ್ಞೆಯನ್ನು ಜಾರಿಗೆ ತರಲು ಮೊದಲ ಕಾರಣವಾಗಿದ್ದರೆ. ಸಂಜಯ್​ ರಾವತ್​ ಹೇಳಿಕೆಯನ್ನು ವಿರೋಧಿಸಿ ಬಿಜೆಪಿ ಆಯೋಜಿಸಿರುವ ಪ್ರತಿಭಟನೆಯನ್ನು ತಪ್ಪಿಸುವುದು 2ನೇ ಕಾರಣವಾಗಿದೆ.

ಕರ್ನಾಟದಲ್ಲಿ ಆರೋಗ್ಯ ಇಲಾಖೆಯಿಂದ ಹೊಸ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು : ರಾಜ್ಯದಲ್ಲಿ ನಿಧಾನಕ್ಕೆ ಕೊರೋನಾ ಮೂರನೇ ಅಲೆ ಹಾಗೂ ಓಮಿಕ್ರಾನ್ ಭೀತಿ ಹೆಚ್ಚುತ್ತಿದೆ. ಬೆಂಗಳೂರು ಏರ್ಪೊರ್ಟ್ ನಲ್ಲಿ ಹೈರಿಸ್ಕ್ ದೇಶದಿಂದ ಬಂದವರ ಮೇಲೆ ತೀವ್ರ ನಿಗಾ ಇಡಲಾಗುತ್ತಿದೆ. ಹೀಗಿದ್ದರೂ ಓಮಿಕ್ರಾನ್ ಆತಂಕ ನಗರದಲ್ಲಿದ್ದು ರಾಜ್ಯದಲ್ಲಿ ಓಮಿಕ್ರಾನ್ ಸೋಂಕಿತರ ಡಿಸ್ಚಾರ್ಜ್ ಗೆ ಅನುಸರಿಸಬೇಕಾದ ನಿಯಮ ಬಗ್ಗೆ ಕಟ್ಟುನಿಟ್ಟಿನ ಸೂಚಿನೆಗಳನ್ನು ರೂಪಿಸಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಒಮಿಕ್ರಾನ್ ಸೋಂಕಿತರ ಡಿಸ್ಜಾರ್ಜ್ ಬಗ್ಗೆ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ.ಈ ಮಾರ್ಗಸೂಚಿಯಲ್ಲಿ ಮೈಲ್ಡ್ ಒಮಿಕ್ರಾನ್ ರೋಗಿಗೆ ಡಿಸ್ಜಾರ್ಜ್ ಮಾಡಲು ಅನುಸರಿಬೇಕಾದ ನಿಯಮಗಳನ್ನು ಉಲ್ಲೇಖಿಸಿದೆ. ಕ್ಲಿನಿಕಲ್ ‌ಎಕ್ಸ್ ಪರ್ಟ್ ಕಮಿಟಿ ಒಮಿಕ್ರಾನ್ ವೈರಸ್ ರೋಗಿಗೆ ಡಿಸ್ಜಾರ್ಜ್ ಹೇಗೆ, ಯಾವಾಗ ಮಾಡಬೇಕು ಎಂದು ಮಾರ್ಗಸೂಚಿ ರೂಪಿಸಿದೆ.

ಇದನ್ನು ಓದಿ : Omicron variant fear : ಹೆಚ್ಚುತ್ತಿದೆ ಓಮಿಕ್ರಾನ್ ಆತಂಕ: ಆರೋಗ್ಯ ಇಲಾಖೆಯಿಂದ ಹೊಸ ಮಾರ್ಗಸೂಚಿ ಬಿಡುಗಡೆ

ಇದನ್ನೂ ಓದಿ : High Court Relief : ಕಾನೂನು ಸಮರದಲ್ಲಿ ಮಂತ್ರಿ‌ಮಾಲ್ ಗೆ ರಿಲೀಫ್ ಕೊಟ್ಟ ಹೈಕೋರ್ಟ್

Omicron threat: Section 144 Mumbai for today, tomorrow as Maharashtra sees most cases

Comments are closed.